ಅನಾರೋಗ್ಯ: ಈ ವಾರವೂ 'ಬಿಗ್ ಬಾಸ್' ವೇದಿಕೆಗೆ ಕಿಚ್ಚ ಸುದೀಪ್ ಗೈರು!

 ಈ ವಾರವೂ 'ಬಿಗ್ ಬಾಸ್' ವೇದಿಕೆಗೆ ಕಿಚ್ಚ ಸುದೀಪ್ ಬರುತ್ತಿಲ್ಲ. ಅನಾರೋಗ್ಯದ ಕಾರಣ ಈ ವಾರಾಂತ್ಯವೂ ಬಿಗ್ ಬಾಗ್ ಸಂಚಿಕೆಗಳ ಚಿತ್ರೀಕರಣಕ್ಕೆ ಹಾಜರಾಗುತ್ತಿಲ್ಲ ಎಂದು  ಖುದ್ದು ಸುದೀಪ್ ಟ್ವಿಟ್ಟರ್ ಮೂಲಕ ಸ್ಪಷ್ಟ ಪಡಿಸಿದ್ದಾರೆ.
ಕಿಚ್ಚ ಸುದೀಪ್
ಕಿಚ್ಚ ಸುದೀಪ್
Updated on

ಬೆಂಗಳೂರು: ಈ ವಾರವೂ 'ಬಿಗ್ ಬಾಸ್' ವೇದಿಕೆಗೆ ಕಿಚ್ಚ ಸುದೀಪ್ ಬರುತ್ತಿಲ್ಲ. ಅನಾರೋಗ್ಯದ ಕಾರಣ ಈ ವಾರಾಂತ್ಯವೂ ಬಿಗ್ ಬಾಗ್ ಸಂಚಿಕೆಗಳ ಚಿತ್ರೀಕರಣಕ್ಕೆ ಹಾಜರಾಗುತ್ತಿಲ್ಲ ಎಂದು  ಖುದ್ದು ಸುದೀಪ್ ಟ್ವಿಟ್ಟರ್ ಮೂಲಕ ಸ್ಪಷ್ಟ ಪಡಿಸಿದ್ದಾರೆ.

 'ಬಿಗ್ ಬಾಸ್' ವೀಕೆಂಡ್  ಸಂಚಿಕೆಗಳ ಚಿತ್ರೀಕರಣಕ್ಕೆ ಮಿಸ್ ಆಗುತ್ತಿದ್ದೇನೆ. 'ಬಿಗ್ ಬಾಸ್' ವೇದಿಕೆ ಮೇಲೆ ಗಂಟೆಗಟ್ಟಲೆ ಶೂಟಿಂಗ್ ಮಾಡಿ ಎಲ್ಲಾ ಸ್ಪರ್ಧಿಗಳಿಗೂ ನ್ಯಾಯ ಒದಗಿಸುವ ಮುನ್ನ ನನಗೆ ಇನ್ನೂ ಸ್ವಲ್ಪ ವಿಶ್ರಾಂತಿಯ ಅಗತ್ಯವಿದೆ. ಇದು ಕಠಿಣ ನಿರ್ಧಾರ. ಚಿತ್ರೀಕರಣವನ್ನು ರದ್ದು   ಮಾಡಿದ ಕಲರ್ಸ್ ಕನ್ನಡ ವಾಹಿನಿಗೆ ಧನ್ಯವಾದಗಳು. ನನಗಾಗಿ ಪ್ರಾರ್ಥನೆ ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದು  ಸುದೀಪ್ ಟ್ವೀಟ್ ಮಾಡಿದ್ದಾರೆ.

ಹಿಂದಿನ ವಾರಾಂತ್ಯದ ಸಂಚಿಕೆಯ ಚಿತ್ರೀಕರಣದ ವೇಳೆಯೂ ಸುದೀಪ್ ಗೈರಾಗಿದ್ದರು. ಬಿಗ್ ಬಾಗ್ ಕನ್ನಡ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸುದೀಪ್ ಗೈರು ಎದ್ದುಕಾಣುತ್ತಿದೆ. ಆದಾಗ್ಯೂ, ನಟ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. 

ಬಿಗ್ ಬಾಗ್ ಕನ್ನಡ ಆವೃತ್ತಿ ಆರಂಭವಾದಾಗಿನಿಂದಲೂ ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿಯೇ ನಡೆಸಿಕೊಡುತ್ತಾ ಬಂದಿದ್ದಾರೆ. ಬಿಗ್ ಬಾಗ್ ಕನ್ನಡ ಜನಪ್ರಿಯತೆ ಮತ್ತು ಯಶಸ್ಸಿನ ಹಿಂದೆ ಸುದೀಪ್ ಅವರ ಪಾತ್ರ ಮಹತ್ವದ್ದಾಗಿದೆ.  ಆಗಾಗ್ಗೆ ತಮ್ಮ ಕ್ರೆಸ್ಟ್ ಹಾಗೂ  ಅವರ ಗೇಮ್ ನ ಉದ್ದೇಶದ ಬಗ್ಗೆ ತಿಳಿಸುತ್ತಾ ಸ್ಪರ್ಧಿಗಳಿಗೆ ಅಗತ್ಯ ಮಾರ್ಗದರ್ಶನವನ್ನು ನೀಡುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com