ಮಗನಿಗಾಗಿ ಪತ್ನಿ ಪೋನಿ ವರ್ಮಾ ಜತೆ ಮತ್ತೆ ಮದುವೆಯಾದ ಪ್ರಕಾಶ್ ರೈ

ಖ್ಯಾತ ನಟ ಹಾಗೂ ರಾಜಕಾರಣಿ ಪ್ರಕಾಶ್ ರೈ ಮತ್ತು ಅವರ ಪತ್ನಿ ಪೋನಿ ವರ್ಮಾ ಅವರು ತಮ್ಮ 11ನೇ ವಿವಾಹ ವಾರ್ಷಿಕೋತ್ಸವವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ.
ಪತ್ನಿ, ಮಗನ ಜತೆ ಪ್ರಕಾಶ್ ರೈ
ಪತ್ನಿ, ಮಗನ ಜತೆ ಪ್ರಕಾಶ್ ರೈ
Updated on

ಮುಂಬೈ: ಖ್ಯಾತ ನಟ ಹಾಗೂ ರಾಜಕಾರಣಿ ಪ್ರಕಾಶ್ ರೈ ಮತ್ತು ಅವರ ಪತ್ನಿ ಪೋನಿ ವರ್ಮಾ ಅವರು ತಮ್ಮ 11ನೇ ವಿವಾಹ ವಾರ್ಷಿಕೋತ್ಸವವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ.

ಪ್ರಕಾಶ್ ರೈ ಅವರು ಆಗಸ್ಟ್ 24 ರಂದು ಪತ್ನಿ ಪೋನಿ ವರ್ಮಾ ಅವರನ್ನು ಮತ್ತೊಮ್ಮೆ ಮದುವೆಯಾಗಿದ್ದಾರೆ. ನನ್ನ ಮಗ ವೇದಾಂತ್ ತನ್ನ ತಂದೆ- ತಾಯಿ ಮದುವೆಯಾಗುವುದನ್ನು ನೋಡಲು ಬಯಸಿದ್ದ. ನನ್ನ ಮಗನಿಗಾಗಿ ನಾವು ಮಂಗಳವಾರ ರಾತ್ರಿ ಮತ್ತೊಮ್ಮೆ ಮದುವೆಯಾದೆವು ಎಂದು ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ.

ದಂಪತಿಗಳು ತಮ್ಮ ಮಕ್ಕಳ ಮುಂದೆ ಉಂಗುರ ಬದಲಾಯಿಸಿ ಕಿಸ್ ಮಾಡಿ ಮಗನ ಆಸೆ ಈಡೇರಿಸಿದ ಫೋಟೋಗಳನ್ನು ಪ್ರಕಾಶ್ ರೈ ಹಂಚಿಕೊಂಡಿದ್ದಾರೆ. ಈ ವೇಳೆ ಪ್ರಕಾಶ್ ರೈ ಅವರ ಮೊದಲ ಪತ್ನಿಯ ಇಬ್ಬರು ಮಕ್ಕಳಾದ ಮೇಘನಾ ಮತ್ತು ಪೂಜಾ ಕೂಡ ಜೊತೆಗಿದ್ದರು.

ಪ್ರಕಾಶ್ ರಾಜ್ ಪ್ರಸ್ತುತ ಮಧ್ಯಪ್ರದೇಶದ ಓರ್ಚಾದಲ್ಲಿ ಮಣಿರತ್ನಂ ಅವರ ಪೊನ್ನಿನ್ ಸೆಲ್ವನ್ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಆಗಸ್ಟ್ 24 ರಂದು ಅವರು ಪತ್ನಿ ಪೋನಿ ವರ್ಮಾ ಅವರೊಂದಿಗೆ ತಮ್ಮ 11ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ್ದಾರೆ. ಅವರ ಮಗ ವೇದಾಂತ್ ಆಸೆಯಂತೆ, ಈ ಜೋಡಿ ಮತ್ತೆ ಮದುವೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com