ಸಂಪೂರ್ಣ ರೋಮ್ಯಾಂಟಿಕ್ ಹಾಸ್ಯ ಮಿಶ್ರಿತ 'ಅಲಂಕಾರ್ ವಿದ್ಯಾರ್ಥಿ'ಗೆ ಪ್ರಮೋದ್ ನಾಯಕ!

ಇಂಗ್ಲಿಷ್ ಮಂಜ ಚಿತ್ರದ ಚಿತ್ರೀಕರಣ ಮುಗಿಸಿರುವ  ನಟ ಪ್ರಮೋದ್, ತಮ್ಮ ಮುಂದಿನ ಚಿತ್ರ ಅಲಂಕಾರ್ ವಿದ್ಯಾರ್ಥಿಗೆ ಹಿಂದೆ ಮುಂದೆ ನೋಡದೆ ಸಹಿ ಹಾಕಿದ್ದಾರೆ. ಈ ಹಿಂದೆ ನಿರ್ದೇಶಕ ಸುನಿಗೆ ಸಹಾಯ ಮಾಡಿದ್ದ ಕೇಶವ್ ಈ ಚಿತ್ರದ ಮೂಲಕ ಚೊಚ್ಚಲ ಬಾರಿಗೆ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. 
ಅಲಂಕಾರ್ ವಿದ್ಯಾರ್ಥಿ ಚಿತ್ರದ ದೃಶ್ಯ
ಅಲಂಕಾರ್ ವಿದ್ಯಾರ್ಥಿ ಚಿತ್ರದ ದೃಶ್ಯ

ಇಂಗ್ಲಿಷ್ ಮಂಜ ಚಿತ್ರದ ಚಿತ್ರೀಕರಣ ಮುಗಿಸಿರುವ  ನಟ ಪ್ರಮೋದ್, ತಮ್ಮ ಮುಂದಿನ ಚಿತ್ರ ಅಲಂಕಾರ್ ವಿದ್ಯಾರ್ಥಿಗೆ ಹಿಂದೆ ಮುಂದೆ ನೋಡದೆ ಸಹಿ ಹಾಕಿದ್ದಾರೆ. ಈ ಹಿಂದೆ ನಿರ್ದೇಶಕ ಸುನಿಗೆ ಸಹಾಯ ಮಾಡಿದ್ದ ಕೇಶವ್ ಈ ಚಿತ್ರದ ಮೂಲಕ ಚೊಚ್ಚಲ ಬಾರಿಗೆ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. 

ಇತ್ತೀಚಿಗೆ ಈ ಚಿತ್ರದ ಮೂಹೂರ್ತ ಕಾರ್ಯಕ್ರಮ ನಡೆಯಿತು. ಪಿಯುಸಿ ಮಾರ್ಕ್ ಕಾರ್ಡ್ ಸ್ವರೂಪದಲ್ಲಿ ಫೋಸ್ಟರ್ ಬಿಡುಗಡೆ ಗಮನ ಸೆಳೆಯಿತು. ರತ್ನನ್ ಪ್ರಪಂಚದಲ್ಲಿ ತನ್ನ ಪಾತ್ರಕ್ಕಾಗಿ ಒಳ್ಳೆಯ ಪ್ರತಿಕ್ರಿಯೆ ಪಡೆದಿದ್ದ ಪ್ರಮೋದ್ ಈ ಚಿತ್ರದ ನಾಯಕರಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. 

<strong>ಪ್ರಮೋದ್</strong>
ಪ್ರಮೋದ್

"ಇದು ನನ್ನ ಮೊದಲ ಪೂರ್ಣ ಪ್ರಮಾಣದ ರೋಮ್ಯಾಂಟಿಕ್- ಹಾಸ್ಯ ಭರಿತ ಚಿತ್ರವಾಗಿದೆ. ಸಂಭಾಷಣೆಯೂ ಜಾಸ್ತಿಯಿದೆ. ಕಾಲೇಜು ವಿದ್ಯಾರ್ಥಿಯಾಗಿ ನಟಿಸಲು 20 ದಿನಗಳಲ್ಲಿ ಸುಮಾರು ಐದು ಕೆಜಿ ಕಳೆದುಕೊಂಡಿರುವುದಾಗಿ ಹೇಳಿದರು. 

ಇದು ಕ್ಲಾಸ್ ಗೆ ಟಾಪರ್ ಆಗಿದ್ದ ಕೊನೆಯ ಬೆಂಚಿನ ಹುಡುಗ ಪ್ರೀತಿಗೆ ಸಂಬಂಧಿಸಿದ ಚಿತ್ರವಾಗಿದೆ. ತಾನೂ ಪ್ರೀತಿಸುವ ಹುಡುಗಿಯೊಬ್ಬಳು ಎಂಜಿನಿಯರಿಂಗ್ ಕಾಲೇಜ್ ನಲ್ಲಿ ವ್ಯಾಸಂಗ ಮಾಡುತ್ತಿರುತ್ತಾಳೆ. ಆದ್ದರಿಂದ ನಾಯಕ ಕೂಡಾ ಅಲ್ಲಿ ಆಡ್ಮೀಷನ್ ಆಗುತ್ತಾನೆ. ಸೀಟು ಪಡೆದ ನಂತರ ಏನಾಗುತ್ತದೆ ಎಂಬುದನ್ನು ನಿರ್ದೇಶಕರು ಸೆಕೆಂಡ್ ಹಾಫ್ ನಲ್ಲಿ ವಿವರಿಸಿರುವುದಾಗಿ ಪ್ರಮೋದ್ ಹೇಳಿದರು. 

ಡಿಯರ್ ಸತ್ಯ ಚಿತ್ರದ ಹೀರೋಯಿನ್ ಅರ್ಚನಾ ಕೊಟ್ಟಿಗೆ ಈ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ರಜನಿಕಾಂತ್, ಅಚ್ಯುತ್ ಕುಮಾರ್ ಮತ್ತು ಸುಧಾ ಬೆಳವಾಡಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ರೋಹಿತ್ ಪ್ರಸನ್ನ, ಯೋಗೇಶ್ ಶ್ರೀರಾಮ್ ಮತ್ತು ಮಧು ಆರಾಧ್ಯ ಜಂಟಿಯಾಗಿ ಅಲಂಕಾರ್ ವಿದ್ಯಾರ್ಥಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com