ಜೀ5 ಅಂಗಳದಲ್ಲಿ ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಗಳ ಸೂಪರ್ ಹಿಟ್ ಸಿನಿಮಾ ಸಾಲು!

ಒಟಿಟಿ ಫ್ಲಾಟ್ ಫಾರ್ಮ್ ಗಳಲ್ಲಿ ಹೊಸ ಕನ್ನಡ ಸಿನಿಮಾಗಳ ಕೊರತೆ ಕಾಣುತ್ತಿದೆ ಎನ್ನುವ ದೂರು ಕೇಳಿಬರುತ್ತಿರುವ ಹೊತ್ತಿನಲ್ಲೇ ಜೀ5ನಲ್ಲಿ ಕನ್ನಡದ ಹೊಸ ಹಿಟ್ ಸಿನಿಮಾಗಳು ತೆರೆಕಾಣುತ್ತಿರುವುದು ವಿಶೇಷ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಎ ಹರ್ಷ ಕಾಂಬಿನೇಷನ್ ನ ಭಜರಂಗಿ2 ಸಿನಿಮಾ ಜೀ5 ಒಟಿಟಿಗೆ ಎಂಟ್ರಿ ಕೊಟ್ಟಿದೆ. ಕುಟುಂಬಸಮೇತ ನೋಡಬಹುದಾದ ಭಜರಂಗಿ-2 ಸಿನಿಮಾಗೆ ಮೆಚ್ಚುಗೆಯೂ ಸಿಗುತ್ತಿದೆ. ಅಲ್ಲದೆ ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ 'ಕನ್ನಡಿಗ' ಸಿನಿಮಾ ಕೂಡಾ ಜೀ5ನಲ್ಲಿ ಸೇರ್ಪಡೆಗೊಂಡಿದೆ. ಆ ಸಿನಿಮಾದಲ್ಲಿ ರವಿಚಂದ್ರನ್ ಅವರು ವಿಶೇಷ ಗೆಟಪ್ ನಲ್ಲಿ ಗಮನಸೆಳೆದಿದ್ದರು.

ವಿಭಿನ್ನ ಚಿತ್ರಪ್ರಕಾರಗಳ ಸಿನಿಮಾ ತಯಾರಿಗೆ ಹೆಸರಾದ ರಿಷಬ್ ಶೆಟ್ಟಿ ನಿರ್ಮಾಣದಲ್ಲಿ ಹಾಗೂ ರಾಜ್ ಶೆಟ್ಟಿ ನಿರ್ದೇಶನ/ ನಟನೆಯಲ್ಲಿ ಮೂಡಿಬಂದಿದ್ದ 'ಗರುಡ ಗಮನ ವೃಷಭ ವಾಹನ' ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ ಕೂಡಾ ಜೀ5 ಪಾಲಾಗಿದ್ದು, ಸದ್ಯದಲ್ಲಿಯೇ ಜೀ5 ಒಟಿಟಿ ಫ್ಲಾಟ್ ಫಾರಂನಲ್ಲಿ ಪ್ರದರ್ಶನಗೊಳ್ಳಲಿದೆ. 

ಒಟಿಟಿ ಫ್ಲಾಟ್ ಫಾರ್ಮ್ ಗಳಲ್ಲಿ ಹೊಸ ಕನ್ನಡ ಸಿನಿಮಾಗಳ ಕೊರತೆ ಕಾಣುತ್ತಿದೆ ಎನ್ನುವ ದೂರು ಕೇಳಿಬರುತ್ತಿರುವ ಹೊತ್ತಿನಲ್ಲೇ ಜೀ5ನಲ್ಲಿ ಕನ್ನಡದ ಹೊಸ ಹಿಟ್ ಸಿನಿಮಾಗಳು ತೆರೆಕಾಣುತ್ತಿರುವುದು ವಿಶೇಷ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com