ಸಿನಿಮಾ ಸುದ್ದಿ

'ಹೆಡ್ ಬುಷ್' ಸಿನಿಮಾ ಶೂಟಿಂಗ್ ಸ್ಥಳ ಹುಡುಕಾಟವೇ ದೊಡ್ಡ ಸವಾಲು!

'ಹೆಡ್ ಬುಷ್' ಸಿನಿಮಾ ಶೂಟಿಂಗ್ ಸ್ಥಳ ಹುಡುಕಾಟವೇ ದೊಡ್ಡ ಸವಾಲು!
ಡಾಲಿ ಧನಂಜಯ್
Published On :

ಬೆಂಗಳೂರಿನ ಮೊದಲ ಅಂಡರ್ ವರ್ಲ್ಡ್ ಡಾನ್ ಎಂಪಿ ಜಯರಾಜ್ ಜೀವನ ಚರಿತ್ರೆ ಆಧಾರಿತ 'ಹೆಡ್ ಬುಷ್' ಸಿನಿಮಾದಲ್ಲಿ ಡಾಲಿ ಧನಂಜಯ್ ನಟಿಸುತ್ತಿದ್ದಾರೆ.

ಸಿನಿಮಾಗೆ ಅಗ್ನಿ ಶ್ರೀಧರ್ ಕತೆ ಬರೆದಿದ್ದಾರೆ. ಆದರೆ ಸದ್ಯಕ್ಕೆ ಎದುರಾಗಿರುವ ಸಮಸ್ಯೆ ಎಂದರೆ ಸ್ಥಳದ್ದು. 60 ಮತ್ತು 70ರ ದಶಕದ ಕಥೆಗೆ ಬೆಂಗಳೂರಿನಲ್ಲಿ ಸೂಕ್ತ ಸ್ಥಳ ಹುಡುಕಾಡುವುದೇ ದೊಡ್ಡ ಸವಾಲಾಗಿದೆ. 

ಬೆಂಗಳೂರಿನಲ್ಲಿ ಆ ರೀತಿಯ ಸ್ಥಳಗಳು ಸಿಗುವುದು ಕಷ್ಟ ಹೀಗಾಗಿ ನಗರದಿಂದ ಹೊರಗೆ ಅಂದರೆ ಕೋಲಾರ ಮತ್ತು ಮೈಸೂರಿನಲ್ಲಿ ಆ ಕಾಲಕ್ಕೆ ತಕ್ಕನಾದ ವಾತಾವಾರಣ ಸೃಷ್ಟಿಸಲು ಯೋಜಿಸಲಾಗುತ್ತಿದೆ.

ನಿರ್ಧಿಷ್ಟ ಸ್ಥಳ ಸಿಗದ ಹಿನ್ನೆಲೆಯಲ್ಲಿ ಸೆಟ್ ಹಾಕುವ ಪ್ಲಾನ್ ಮಾಡುತ್ತಿದ್ದೇವೆ ಎಂದು ಚೊಚ್ಚಲ ನಿರ್ದೇಶಕ ಶೂನ್ಯ ತಿಳಿಸಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾಗಾಗಿ ನಿರ್ಧರಿಸಿರುವ ಚಿತ್ರತಂಡ ಲಾಕ್ ಡೌನ್ ಮುಂಚೆಯೇ ಶೆಡ್ಯೂಲ್ ಸಿದ್ಧಪಡಿಸಿದೆ, ಆದರೆ ಇನ್ನೂ ಸಿನಿಮಾದ ಮೂಹೂರ್ತ ನಡೆಸಿಲ್ಲ.

ಎಂಪಿ ಜಯರಾಜ್ ಜೀವನ ಚರಿತ್ರೆಯ ಕಥೆಯಲ್ಲಿ ಈಗಾಗಲೇ ಟೀನೇಜ್ ವರ್ಶನ್ ಶೂಟಿಂಗ್ ಮುಗಿದಿದೆ, ಈ ಪಾತ್ರವನ್ನು ಆಕಾಶ್ ನಟಿಸಿದ್ದಾರೆ.  ಈ ಭಾಗದ ಶೂಟಿಂಗ್ ಗುಟ್ಟಹಳ್ಳಿ ಸುತ್ತಮುತ್ತ ಚಿತ್ರೀಕರಿಸಲಾಗಿದೆ.

ಶೀಘ್ರದಲ್ಲೆ ಸಿನಿಮಾ ಸಂಬಂಧಿತ ಪೂರ್ಣ ವಿವರ ಮತ್ತು ಪೋಸ್ಟರ್ ರಿಲೀಸ್ ಆಗಲಿದೆ, ಕಳೆದ ವರ್ಷದ ಆಗಸ್ಟ್ ನಲ್ಲಿ ಪೋಸ್ಟರ್ ರಿಲೀಸ್ ಆಗಿತ್ತು. ಲಾಕ್ ಡೌನ್ ಮುಗಿದ ನಂತರ ಶೂಟಿಂಗ್ ಗಾಗಿ ನಟ ಧನಂಜಯ್ ಸಿದ್ಧತೆ ನಡೆಸಿದ್ದಾರೆ. ಸದ್ಯ ಧನಂಜಯ್ ಬಡವ ರಾಸ್ಕಲ್. ರತ್ನನ್ ಪ್ರಪಂಚ ಹಾಗೂ ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ತಮಿಳು ಸಿನಿಮಾದಲ್ಲಿಯೂ ಧನಂಜಯ್ ನಟಿಸುತ್ತಿದ್ದಾರೆ. ಹೆಡ್ ಬುಶ್ ಸಿನಿಮಾಗೆ ಚರಣ್ ರಾಜ್ ಸಂಗೀತ ನೀಡಿದ್ದಾರೆ. ಎರಡು ಹಾಡುಗಳಿಗೆ ಸಂಗೀತ ಸಂಯೋಜನೆ ಕೂಡ ನಡೆದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.