ಅಂಬಿಯ ಪ್ರೀತಿಯ ಶ್ವಾನ ‘ಕನ್ವರ್’ ನಿಧನ

ದಿವಂಗತ ನಟ ರೆಬೆಲ್ ಸ್ಟಾರ್ ಅಂಬರೀಶ್ ಪ್ರೀತಿಯ ಶ್ವಾನ 'ಕನ್ವರ್' ನಿಧನವಾಗಿದೆ.
ಕನ್ವರ್
ಕನ್ವರ್

ಬೆಂಗಳೂರು: ದಿವಂಗತ ನಟ ರೆಬೆಲ್ ಸ್ಟಾರ್ ಅಂಬರೀಶ್ ಪ್ರೀತಿಯ ಶ್ವಾನ 'ಕನ್ವರ್' ನಿಧನವಾಗಿದೆ.

ಪ್ರಾಣಿ ಪ್ರಿಯರಾಗಿದ್ದ ಅಂಬಿ ನಿವಾಸದಲ್ಲಿ ಕನ್ವರ್ ಜೊತೆಗೆ ಬುಲ್ ಬುಲ್ ಹೆಸರಿನ ಶ್ವಾನಗಳು ಬಹಳ ವರ್ಷಗಳಿಂದ ಇದ್ದವು. ಸೋಮವಾರ ಕನ್ವರ್ ಕೊನೆಯುಸಿರೆಳೆದಿದೆ.

ಅಂಬಿ ವಾಕಿಂಗ್ ಹೋದಾಗ ಕನ್ವರ್‌ನ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಮನೆಯಲ್ಲಿದ್ದಾಗಲೂ ''ಹೇ ಕನ್ವರ್'' ಎಂದು ಕರೆದ ತಕ್ಷಣ ಎಲ್ಲಿದ್ದರೂ ಬಂದು ನಿಲ್ಲುತ್ತಿತ್ತು.

ತಮ್ಮ ವೃತ್ತಿ ಜೀವನದಲ್ಲಿ ಬಹಳ ಖ್ಯಾತಿ ತಂದುಕೊಟ್ಟಿದ್ದ ಚಿತ್ರಗಳ ಫೇಮಸ್ ಡೈಲಾಗನ್ನೇ ಶ್ವಾನಗಳಿಗೆ ಹೆಸರಾಗಿಸಿದ್ದರು. ನಾಗರಹಾವು ಚಿತ್ರದ ನೆನಪಿನಲ್ಲಿ ಒಂದ ಶ್ವಾನಕ್ಕೆ 'ಬುಲ್ ಬುಲ್’ ಹಾಗೂ ಮತ್ತೊಂದಕ್ಕೆ 'ಕನ್ವರ್ ಲಾಲ್' ಎಂದು ಹೆಸರಿಟ್ಟಿದ್ದರು.

ಅಂಬರೀಶ್ ನಿಧನರಾದ ಬಳಿಕ ಕನ್ವರ್ ಮಾನಸಿಕವಾಗಿ ನೊಂದಿತ್ತು. ಸರಿಯಾಗಿ ಊಟ ಮಾಡುತ್ತಿರಲಿಲ್ಲ, ಯಾರ ಬಳಿಯೂ ಸೇರುತ್ತಿರಲಿಲ್ಲ, ಒಬ್ಬಂಟಿಯಾಗಿ ಇರುತ್ತಿತ್ತು. ಇದೀಗ, ಅಂಬಿ ನಿಧನದ ಎರಡೂವರೆ ವರ್ಷದ ಬಳಿಕ ಕನ್ವರ್ ಸಹ ಕೊನೆಯುಸಿರೆಳೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com