'ಲೈಗರ್' ಹೊಸ ಫೋಸ್ಟರ್ ನಲ್ಲಿ ಬೆತ್ತಲೆಯಾಗಿ ಕಾಣಿಸಿಕೊಂಡ ನಟ ವಿಜಯ್ ದೇವರಕೊಂಡ!

'ಲೈಗರ್' ಸಿನಿಮಾದಲ್ಲಿ ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳುವುದರೊಂದಿಗೆ ನಟ ವಿಜಯ್ ದೇವರಕೊಂಡ ಅಭಿಮಾನಿಗಳಲ್ಲಿ ಶನಿವಾರ ಕುತೂಹಲ ಮೂಡಿಸಿದ್ದಾರೆ.
ನಟ ವಿಜಯ್ ದೇವರಕೊಂಡ
ನಟ ವಿಜಯ್ ದೇವರಕೊಂಡ

ಮುಂಬೈ: 'ಲೈಗರ್' ಸಿನಿಮಾದಲ್ಲಿ ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳುವುದರೊಂದಿಗೆ ನಟ ವಿಜಯ್ ದೇವರಕೊಂಡ ಅಭಿಮಾನಿಗಳಲ್ಲಿ ಶನಿವಾರ ಕುತೂಹಲ ಮೂಡಿಸಿದ್ದಾರೆ.

ಈ ಫೋಸ್ಟರ್ ನಲ್ಲಿ, ವಿಜಯ್ ದೇವರಕೊಂಡ ಕೈಯಲ್ಲಿ ಹೂಗುಚ್ಚ ಹಿಡಿದಿದ್ದು, ಬೆತ್ತಲೆಯಾಗಿ ಕಾಣಿಸಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಲುಕ್ ಹಂಚಿಕೊಂಡಿರುವ ವಿಜಯ್, ಈ ಸಿನಿಮಾದಲ್ಲಿ ಮಾನಸಿಕ ಹಾಗೂ ದೈಹಿಕವಾಗಿ ನನಗೆ ಸವಾಲಿನ ಪಾತ್ರವಾಗಿದೆ. ಎಲ್ಲ ವಿಷಯವನ್ನು ಶೀಘ್ರದಲ್ಲಿಯೇ ಮುಂದೆ ಹೇಳುತ್ತೇನೆ ಎಂದು ಬರೆದುಕೊಂಡಿದ್ದಾರೆ.

ವಿಜಯ್ ಅವರ ಬೋಲ್ಡ್ ಅವತಾರ ಕಂಡು ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ವಿಜಯ್ ಜೊತೆಗೆ ನಟಿಸಿರುವ ಅನನ್ಯಾ ಪಾಂಡೆ ಕೂಡಾ ಈ ಫೋಸ್ಟರ್ ಹಂಚಿಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಲೈಗರ್ ಆಗಸ್ಟ್ 25 ರಂದು ತೆರೆಗೆ ಅಪ್ಪಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com