KGF 2 ಗೆ ವರ್ಷದ ಸಂಭ್ರಮ; 'ಕೆಜಿಎಫ್ 3' ಬಗ್ಗೆ ಹೊಂಬಾಳೆ ಫಿಲ್ಮ್ಸ್ ಸುಳಿವು

'ರಾಕಿಂಗ್ ಸ್ಟಾರ್' ಯಶ್ ನಟನೆಯ 'ಕೆಜಿಎಫ್ 2' ಸಿನಿಮಾ ರಿಲೀಸ್ ಆಗಿ ಇಂದಿಗೆ ಒಂದು ವರ್ಷ ತುಂಬಿದ್ದು, ಇದೇ ಸಂಭ್ರಮದಲ್ಲೇ ಚಿತ್ರದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಕೆಜಿಎಫ್ 3 ಚಿತ್ರದ ಮಹತ್ವದ ಘೋಷಣೆ ಮಾಡಿದೆ.
ಕೆಜಿಎಫ್ 3 ಬಗ್ಗೆ ಹೊಂಬಾಳೆ ಸುಳಿವು
ಕೆಜಿಎಫ್ 3 ಬಗ್ಗೆ ಹೊಂಬಾಳೆ ಸುಳಿವು
Updated on

ಬೆಂಗಳೂರು: 'ರಾಕಿಂಗ್ ಸ್ಟಾರ್' ಯಶ್ ನಟನೆಯ 'ಕೆಜಿಎಫ್ 2' ಸಿನಿಮಾ ರಿಲೀಸ್ ಆಗಿ ಇಂದಿಗೆ ಒಂದು ವರ್ಷ ತುಂಬಿದ್ದು, ಇದೇ ಸಂಭ್ರಮದಲ್ಲೇ ಚಿತ್ರದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಕೆಜಿಎಫ್ 3 ಚಿತ್ರದ ಮಹತ್ವದ ಘೋಷಣೆ ಮಾಡಿದೆ.

ಕೆಜಿಎಫ್ ಸಿನಿಮಾ ನಿರ್ಮಾಣ ಮಾಡಿರುವ ಹೊಂಬಾಳೆ ಫಿಲ್ಮ್ಸ್ ಸೋಶಿಯಲ್ ಮೀಡಿಯಾದಲ್ಲಿ 'ಕೆಜಿಎಫ್ 2' ಚಿತ್ರದ ದೃಶ್ಯಾವಳಿಗಳನ್ನು ಹಂಚಿಕೊಂಡು, 'ಕೆಜಿಎಫ್ 3' ಸಿನಿಮಾ ಬಗ್ಗೆ ಸುಳಿವು ನೀಡಿತಾ ಎಂಬ ಅನುಮಾನ ಶುರುವಾಗಿದೆ. ಈ ಕುರಿತು ಟ್ವೀಟ್ ನಲ್ಲಿ 'ಮೋಸ್ಟ್ ಪವರ್‌ಫುಲ್ ಮನುಷ್ಯನಿಂದ ಮೋಸ್ಟ್ ಫವರ್‌ಫುಲ್ ಭರವಸೆ' ಎಂಬ ಅಡಿ ಬರಹದೊಂದಿಗೆ ಹೊಂಬಾಳೆ ಫಿಲ್ಮ್ಸ್ 'ಕೆಜಿಎಫ್ 2' ಚಿತ್ರದ ಒಂದಷ್ಟು ಅದ್ಭುತ ದೃಶ್ಯಾವಳಿಗಳನ್ನು ಹಂಚಿಕೊಂಡಿದೆ. 

"ಮರೆಯಲಾಗದ ಪಾತ್ರಗಳು, ಆಕ್ಷನ್ ಮೂಲಕ ಕೆಜಿಎಫ್ 2 ನಮಗೆ ಅದ್ಭುತವಾದ ಜರ್ನಿ ಮಾಡಿಸುವುದು. ಸಿನಿಮಾದ ಜಾಗತಿಕ ಸಂಭ್ರಮ, ರೆಕಾರ್ಡ್ ಬ್ರೇಕ್ ಮಾಡಿ, ಜನರ ಮನಸ್ಸು ಗೆದ್ದಾಗಿದೆ. ಕೆಜಿಎಫ್ 2 ಚಿತ್ರಕ್ಕೀಗ 1 ವರ್ಷದ ಸಂಭ್ರಮ" ಎಂದು ಹೊಂಬಾಳೆ ಫಿಲ್ಮ್ಸ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

'ಕೆಜಿಎಫ್ 3' ಬಗ್ಗೆ ಸುಳಿವು?
1978ರಿಂದ 1981ರವರೆಗೆ ರಾಕಿ ಭಾಯ್ ಎಲ್ಲಿದ್ದ ಎಂದು ವಿಡಿಯೋದಲ್ಲಿ ಬರಹ ನೀಡಲಾಗಿದೆ. ಅಷ್ಟೇ ಅಲ್ಲದೆ 'ಮೋಸ್ಟ್ ಪವರ್‌ಫುಲ್ ಮನುಷ್ಯನಿಂದ ಮೋಸ್ಟ್ ಫವರ್‌ಫುಲ್ ಭರವಸೆ' ಎಂಬ ಮಾತು ಕೂಡ ಇದೆ. ಎಲ್ಲ ಸಂಘರ್ಷಣೆಗಳನ್ನು ನೋಡಬೇಕಿದೆ ಎನ್ನುವ ಮಾತನ್ನು ಹೇಳಲಾಗಿದೆ. ಅಲ್ಲದೆ ವಿಡಿಯೊದ ಅಂತ್ಯದಲ್ಲಿ ಕೆಂಪು ಅಕ್ಷರದಲ್ಲಿ 3 ಬರುತ್ತದೆ. ಇದು ಕೆಜಿಎಫ್ 3ನ ಸುಳಿವು ಎನ್ನಲಾಗಿದೆ. ಈ ಮೂಲಕ 'ಕೆಜಿಎಫ್ 3' ಸಿನಿಮಾ ಬರಲಿರುವ ಸುಳಿವು ನೀಡಿದ್ದಾರಾ ಎಂಬ ಚರ್ಚೆ ಶುರುವಾಗಿದೆ.

ಈ ಹಿಂದೆಯೇ ಸುಳಿವು ನೀಡಿದ್ದ ಟಂಡನ್
ನಟಿ ರವೀನಾ ಟಂಡನ್ ಅವರು ಈ ಸಿನಿಮಾದಲ್ಲಿ ರಮಿಕಾ ಸೇನ್ ಪಾತ್ರ ಮಾಡಿದ್ದರು. ಈ ಬಗ್ಗೆ ಇತ್ತೀಚೆಗೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ಅವರು, "ಕೆಜಿಎಫ್ 3 ಸಿನಿಮಾ ಶುರುವಾಗತ್ತೆ, ಆದಷ್ಟು ಬೇಗ ನಾವು ಕೆಲಸ ಶುರು ಮಾಡ್ತೀವಿ ಎನ್ನುವ ಆಶಯವಿದೆ" ಎಂದಿದ್ದರು. ಇದೇ ವೇಳೆ ಕೆಜಿಎಫ್ 2 ಚಿತ್ರದಲ್ಲಿ ನಟಿಸಿದ್ದು ಅದ್ಭುತವಾದ ಅನುಭವ. ಪ್ರಶಾಂತ್‌ರಂತಹ ಯುವ ನಿರ್ದೇಶಕರ ಜೊತೆ ಕೆಲಸ ಮಾಡಿದ್ದು ಸುಂದರ ಅನುಭವ. ಪ್ರಶಾಂತ್ ಅವರಿಗೆ ಏನು ಮಾಡಬೇಕು, ಏನು ಮಾಡುತ್ತಿದ್ದೇನೆ ಎನ್ನುವ ಅರಿವಿತ್ತು. ಒಟ್ಟಿನಲ್ಲಿ ಎಲ್ಲರ ಜೊತೆ ಕೆಲಸ ಮಾಡಿ ಖುಷಿ ಆಯ್ತು" ಎಂದು ರವೀನಾ ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com