ಅಭಿಷೇಕ್ ಅಂಬರೀಶ್ ನಟನೆಯ ಬ್ಯಾಡ್ ಮ್ಯಾನರ್ಸ್ ಬಿಡುಗಡೆ ದಿನಾಂಕ ಜುಲೈಗೆ ಮುಂದೂಡಿಕೆ!

ಸೂರಿ ನಿರ್ದೇಶನದ ಅಭಿಷೇಕ್ ಅಂಬರೀಶ್ ಅಭಿನಯದ ಬ್ಯಾಡ್ ಮ್ಯಾನರ್ಸ್ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಅವಿವಾ ಬಿದ್ದಪ್ಪ ಅವರೊಂದಿಗೆ ಅಭಿಷೇಕ್ ಮದುವೆಯಾದ ಎರಡು ವಾರಗಳ ನಂತರ ಜೂನ್ 23 ರಂದು ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ಈಗ ಚಿತ್ರ ಜುಲೈನಲ್ಲಿ ಬಿಡುಗಡೆಯಾಗಲಿದೆ. 
ಬ್ಯಾಡ್ ಮ್ಯಾನರ್ಸ್ ಚಿತ್ರದಲ್ಲಿ ಅಭಿಷೇಕ್ ಅಂಬರೀಶ್

<strong> ಅಭಿಷೇಕ್ ಅಂಬರೀಶ್</strong>
 ಅಭಿಷೇಕ್ ಅಂಬರೀಶ್

ಸೆನ್ಸಾರ್ ಮಂಡಳಿ ಅನುಮತಿ ನೀಡಿದ ನಂತರ ಹೊಸ ಬಿಡುಗಡೆ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಚಿತ್ರತಂಡ ತಿಳಿಸಿದೆ.
ಕೆಎಂ ಸುಧೀರ್ ಅವರ ಸ್ಟುಡಿಯೋ 18 ಬ್ಯಾನರ್ ನಿರ್ಮಿಸಿರುವ ಬ್ಯಾಡ್ ಮ್ಯಾನರ್ಸ್ ಕರ್ನಾಟಕದಾದ್ಯಂತ ಜಯಣ್ಣ ಫಿಲಂಸ್ ಮೂಲಕ ವಿತರಿಸಲಾಗುತ್ತಿದೆ. ಕುತೂಹಲಕಾರಿಯಾಗಿ, ಅಮರ್‌ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ ಅಭಿಷೇಕ್, ಬ್ಯಾಡ್ ಮ್ಯಾನರ್ಸ್‌ನಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

120 ದಿನಗಳ ಕಾಲ ಚಿತ್ರೀಕರಣಗೊಂಡ ಈ ಚಿತ್ರದಲ್ಲಿ ರಚಿತಾ ರಾಮ್ ಮತ್ತು ಪ್ರಿಯಾಂಕಾ ಕುಮಾರ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಬ್ಯಾಡ್ ಮ್ಯಾನರ್ಸ್‌ಗೆ ಚರಣ್ ರಾಜ್ ಅವರ ಸಂಗೀತ ಮತ್ತು ಶೇಖರ್ ಎಸ್ ಅವರ ಛಾಯಾಗ್ರಹಣವಿದೆ. 

ಈ ಚಿತ್ರದ ಹೊರತಾಗಿ, ಅಭಿಷೇಕ್ ಅವರ ಮುಂಬರುವ ಯೋಜನೆಗಳಲ್ಲಿ ನಿರ್ದೇಶಕ ಎಸ್ ಕೃಷ್ಣ ಜೊತೆಗಿನ 'ಕಾಳಿ' ಮತ್ತು ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಮಹೇಶ್ ಕುಮಾರ್ ಅವರ ಹೆಸರಿಡದ ಚಲನಚಿತ್ರ (AA04) ಸೇರಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com