ಪುನೀತ್ ರಾಜ್‌ಕುಮಾರ್- ರಶ್ಮಿಕಾ ಮಂದಣ್ಣ ಅಭಿನಯದ 'ಅಂಜನಿ ಪುತ್ರ' ರೀರಿಲೀಸ್!

ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರ ಸಿನಿಮಾಗಳು ರಿಲೀಸ್ ಆಗುತ್ತಿವೆ. ಪುನೀತ್ ಅವರ ಜನ್ಮದಿನದಂದು ಜಾಕಿ ಸಿನಿಮಾ ದೊಡ್ಡ ಪರದೆ ಮೇಲೆ ಮತ್ತೊಮ್ಮೆ ತೆರೆಕಂಡಿತ್ತು. ಇದೀಗ ಪುನೀತ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಅಂಜನಿ ಪುತ್ರ ಸಿನಿಮಾ ಮತ್ತೊಮ್ಮೆ ಬಿಡುಗಡೆಗೆ ಸಜ್ಜಾಗಿದ್ದು, ಮೇ 10 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.
ಪುನೀತ್ ರಾಜ್‌ಕುಮಾರ್- ರಶ್ಮಿಕಾ ಮಂದಣ್ಣ ಅಭಿನಯದ 'ಅಂಜನಿ ಪುತ್ರ' ರೀರಿಲೀಸ್!
Updated on

ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರ ಸಿನಿಮಾಗಳು ರಿಲೀಸ್ ಆಗುತ್ತಿವೆ. ಪುನೀತ್ ಅವರ ಜನ್ಮದಿನದಂದು ಜಾಕಿ ಸಿನಿಮಾ ದೊಡ್ಡ ಪರದೆ ಮೇಲೆ ಮತ್ತೊಮ್ಮೆ ತೆರೆಕಂಡಿತ್ತು. ಇದೀಗ ಪುನೀತ್ ಅಭಿನಯದ ಅಂಜನಿ ಪುತ್ರ ಸಿನಿಮಾ ಮತ್ತೊಮ್ಮೆ ಬಿಡುಗಡೆಗೆ ಸಜ್ಜಾಗಿದ್ದು, ಮೇ 10 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

ಈ ಕಮರ್ಷಿಯಲ್ ಎಂಟರ್‌ಟೈನರ್‌ ಅನ್ನು ಎ ಹರ್ಷ ನಿರ್ದೇಶಿಸಿದ್ದು, ಎಂಎನ್ ಕುಮಾರ್ ನಿರ್ಮಿಸಿದ್ದಾರೆ. 2017ರ ಡಿಸೆಂಬರ್ 21ರಂದು ಚಿತ್ರ ಬಿಡುಗಡೆಯಾಗಿತ್ತು. ಚಿತ್ರದಲ್ಲಿ ಪವರ್ ಸ್ಟಾರ್ ಜೊತೆಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ.

ಗಮನಾರ್ಹವೆಂದರೆ, ಚಿತ್ರಕ್ಕೆ ಕೆಜಿಎಫ್‌ ಸಂಗೀತ ಸಂಯೋಜಕ ರವಿ ಬಸ್ರೂರ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದರು. ಚಿತ್ರದಲ್ಲಿ ರಮ್ಯಾ ಕೃಷ್ಣ, ರವಿಶಂಕರ್, ಮುಖೇಶ್ ತಿವಾರಿ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸ್ವಾಮಿ ಚಿತ್ರದ ಛಾಯಾಗ್ರಾಹಕರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com