ಅದ್ಧೂರಿ ಸೆಟ್‌ನಲ್ಲಿ ಅರ್ಜುನ್ ಜನ್ಯ ನಿರ್ದೇಶನದ '45' ಚಿತ್ರದ ಹಾಡಿನ ಚಿತ್ರೀಕರಣ

ಶಿವರಾಜಕುಮಾರ್, ಉಪೇಂದ್ರ, ಮತ್ತು ರಾಜ್ ಬಿ ಶೆಟ್ಟಿ ನಟನೆಯ 45 ಚಿತ್ರದ ಮೂಲಕ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ನಿರ್ದೇಶಕರಾಗಿ ಪದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ಇತ್ತೀಚೆಗೆ, ಸಿಲಿಕಾನ್ ಸಿಟಿಯ ಶ್ರೀ ಚಂಪಕಧಾಮ ದೇವಸ್ಥಾನದ ಬಳಿ ವಿಸ್ತಾರವಾದ ಸೆಟ್‌ನಲ್ಲಿ ಚಿತ್ರದ ಹಾಡೊಂದನ್ನು ಚಿತ್ರೀಕರಿಸಲಾಗಿದೆ. 
45 ಚಿತ್ರದ ಹಾಡಿನ ಚಿತ್ರೀಕರಣದ ದೃಶ್ಯ
45 ಚಿತ್ರದ ಹಾಡಿನ ಚಿತ್ರೀಕರಣದ ದೃಶ್ಯ
Updated on

ಶಿವರಾಜಕುಮಾರ್, ಉಪೇಂದ್ರ, ಮತ್ತು ರಾಜ್ ಬಿ ಶೆಟ್ಟಿ ನಟನೆಯ 45 ಚಿತ್ರದ ಮೂಲಕ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ನಿರ್ದೇಶಕರಾಗಿ ಪದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. 

ಇತ್ತೀಚೆಗೆ, ಸಿಲಿಕಾನ್ ಸಿಟಿಯ ಶ್ರೀ ಚಂಪಕಧಾಮ ದೇವಸ್ಥಾನದ ಬಳಿ ವಿಸ್ತಾರವಾದ ಸೆಟ್‌ನಲ್ಲಿ ಚಿತ್ರದ ಹಾಡೊಂದನ್ನು ಚಿತ್ರೀಕರಿಸಲಾಗಿದೆ. ಸೆಟ್‌ನಲ್ಲಿ ಸಾವಿರಾರು ಕಿರಿಯ ಕಲಾವಿದರು ಮತ್ತು ನೃತ್ಯಗಾರರಿಗೆ ಅವಕಾಶ ಕಲ್ಪಿಸಲಾಗಿತ್ತು. ಹಾಡನ್ನು ಸೆರೆಹಿಡಿಯಲು ಮೋಕೊಬೋಲ್ಟ್ ಮತ್ತು ರೋಪ್ ಕ್ಯಾಮೆರಾಗಳಂತಹ ಅತ್ಯಾಧುನಿಕ ಉಪಕರಣಗಳನ್ನು ಸಹ ಬಳಸಲಾಯಿತು.

ಚಿತ್ರದ ನಟರ ಫಸ್ಟ್ ಲುಕ್‌ಗಳನ್ನು ಇನ್ನೂ ಬಿಡುಗಡೆ ಮಾಡದಿದ್ದರೂ, ಹಾಡಿನ ಚಿತ್ರೀಕರಣದ ಅತಿರಂಜಿತ ಸೆಟ್‌ಗಳ ಕೆಲವು ಫೊಟೋಗಳನ್ನು ಹಂಚಿಕೊಳ್ಳಲಾಗಿದೆ. ಖ್ಯಾತ ನೃತ್ಯ ಸಂಯೋಜಕ ಚಿನ್ನಿ ಪ್ರಕಾಶ್ ಹಾಡಿನ ನೃತ್ಯ ಸಂಯೋಜನೆ ಮಾಡಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಅವರೇ ಸಂಗೀತ ನೀಡಿದ್ದು, ಸತ್ಯ ಹೆಗ್ಡೆ ಅವರ ಛಾಯಾಗ್ರಹಣವಿದೆ.

ಚಿತ್ರದಲ್ಲಿ ಕೌಸ್ತುಭ ಮಣಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಗಾಳಿಪಟ 2 ನಿರ್ಮಾಪಕ ರಮೇಶ್ ರೆಡ್ಡಿ ಸೂರಜ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ 45 ಅನ್ನು ಬೆಂಬಲಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com