ಸತೀಶ್ ನೀನಾಸಂ, ರಚಿತಾ ರಾಮ್ ಅಭಿನಯದ 'ಮ್ಯಾಟ್ನಿ' ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿ

ಈ ಹಿಂದೆ ಮಹೇಶ್ ಕುಮಾರ್ ಅವರ 'ಅಯೋಗ್ಯ' ಚಿತ್ರದ ಮೂಲಕ ವಿಶೇಷವಾಗಿ 'ಏನಮ್ಮಿ ಏನಮ್ಮಿ' ಹಾಡಿನ ಮೂಲಕ ಪ್ರೇಕ್ಷಕರನ್ನು ಸೆಳೆದಿದ್ದ ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ಜೋಡಿ ಇದೀಗ 'ಮ್ಯಾಟ್ನಿ' ಎಂಬ ರೋಮ್ಯಾಂಟಿಕ್ ಥ್ರಿಲ್ಲರ್‌ ಮೂಲಕ ಮತ್ತೊಮ್ಮೆ ಬೆಳ್ಳಿತೆರೆಯನ್ನು ಮೋಡಿ ಮಾಡಲು ಸಿದ್ಧರಾಗಿದ್ದಾರೆ.
ಸತೀಶ್ ನೀನಾಸಂ, ರಚಿತಾ ರಾಮ್ ಅಭಿನಯದ 'ಮ್ಯಾಟ್ನಿ' ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿ
ಮ್ಯಾಟ್ನಿ ಚಿತ್ರದ ಪೋಸ್ಟರ್
Updated on

ಈ ಹಿಂದೆ ಮಹೇಶ್ ಕುಮಾರ್ ಅವರ 'ಅಯೋಗ್ಯ' ಚಿತ್ರದ ಮೂಲಕ ವಿಶೇಷವಾಗಿ 'ಏನಮ್ಮಿ ಏನಮ್ಮಿ' ಹಾಡಿನ ಮೂಲಕ ಪ್ರೇಕ್ಷಕರನ್ನು ಸೆಳೆದಿದ್ದ ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ಜೋಡಿ ಇದೀಗ 'ಮ್ಯಾಟ್ನಿ' ಎಂಬ ರೋಮ್ಯಾಂಟಿಕ್ ಥ್ರಿಲ್ಲರ್‌ ಮೂಲಕ ಮತ್ತೊಮ್ಮೆ ಬೆಳ್ಳಿತೆರೆಯನ್ನು ಮೋಡಿ ಮಾಡಲು ಸಿದ್ಧರಾಗಿದ್ದಾರೆ.

ಚಿತ್ರವು ಪೋಸ್ಟ್ ಪ್ರೊಡಕ್ಷನ್‌ ಹಂತದಲ್ಲಿದ್ದು, ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ. ಚಿತ್ರವು ಏಪ್ರಿಲ್ 5 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಮ್ಯಾಟ್ನಿ ಸಿನಿಮಾ ಮೂಲಕ ಮನೋಹರ್ ಕಂಪಲ್ಲಿ ಅವರು ಇದೇ ಮೊದಲ ಬಾರಿಗೆ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದು, ಚಿತ್ರವು ಈಗಾಗಲೇ ಹಾಡಿನ ಮೂಲಕ ಪ್ರೇಕ್ಷಕರಲ್ಲಿ ತೀವ್ರ ನಿರೀಕ್ಷೆ ಹುಟ್ಟುಹಾಕಿದೆ. ವಿಜಯ್ ಪ್ರಕಾಶ್ ಅವರ ಧ್ವನಿಯಲ್ಲಿ ಮೂಡಿಬಂದಿರುವ ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜಿಸಿದ ‘ಸಂಜೆ ಮೇಲೆ ಸುಮ್ಮನೆ ಫೋನು’ ಹಾಡು ಸಂಗೀತ ಆಸಕ್ತರ ಮೆಚ್ಚುಗೆಗೆ ಪಾತ್ರವಾಗಿದೆ.

ಸತೀಶ್ ನೀನಾಸಂ, ರಚಿತಾ ರಾಮ್ ಅಭಿನಯದ 'ಮ್ಯಾಟ್ನಿ' ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿ
‘ಏನಮ್ಮಿ, ಏನಮ್ಮಿ...’ ಬಳಿಕ ಮತ್ತೊಂದು ಹಿಟ್​ ಹಾಡು ನೀಡಿದ ರಚಿತಾ ರಾಮ್-ಸತೀಶ್ ನೀನಾಸಂ: 'ಮ್ಯಾಟ್ನಿ’ ಗೀತೆಗೆ ಮರುಳಾದ ಫ್ಯಾನ್ಸ್!

ಸತೀಶ್ ಮತ್ತು ರಚಿತಾ ಅವರಲ್ಲದೆ ಚಿತ್ರದಲ್ಲಿ ನಟರಾದ ನಾಗಭೂಷಣ್ ಮತ್ತು ಶಿವರಾಜ್ ಕೆಆರ್ ಪೇಟೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಕ್ರಾಂತಿ ವರ್ಲ ಅವರ ಛಾಯಾಗ್ರಹಣ ಮತ್ತು ಕೆಎಂ ಪ್ರಕಾಶ್ ಅವರ ಸಂಕಲನವನ್ನು ಒಳಗೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com