ಮದುವೆಯಾಗೋ ಆಸೆ ಇಲ್ಲ, ಆದರೆ ರಾಜಕೀಯಕ್ಕೆ ಬರುವ ಪ್ಲ್ಯಾನ್ ಇದೆ: ಸೋನು ಶ್ರೀನಿವಾಸಗೌಡ

ಬಿಗ್ ಬಾಸ್‌ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ಜೈಲಿಗೆ ಹೋಗಿ ಬಂದ ಮೇಲೆ ಫ್ಯಾನ್ಸ್‌ ಹೆಚ್ಚಾಗಿದ್ದಾರಂತೆ. ದಿನದಿಂದ ದಿನಕ್ಕೆ ಪರ್ಸನಲ್ ಮೆಸೇಜ್‌ಗಳು ಜಾಸ್ತಿ ಬರುತ್ತಿವೆಯಂತೆ, ಹೀಗೆಂದು ಸ್ವತಃ ಆಕೆಯೇ ಯೂಟ್ಯೂಬ್ ವಿಡಿಯೋ ಮೂಲಕ ವಿಷಯ ತಿಳಿಸಿದ್ದಾರೆ.
ಸೋನು ಶ್ರೀನಿವಾಸಗೌಡ
ಸೋನು ಶ್ರೀನಿವಾಸಗೌಡ
Updated on

ಬಿಗ್ ಬಾಸ್‌ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ಜೈಲಿಗೆ ಹೋಗಿ ಬಂದ ಮೇಲೆ ಫ್ಯಾನ್ಸ್‌ ಹೆಚ್ಚಾಗಿದ್ದಾರಂತೆ. ದಿನದಿಂದ ದಿನಕ್ಕೆ ಪರ್ಸನಲ್ ಮೆಸೇಜ್‌ಗಳು ಜಾಸ್ತಿ ಬರುತ್ತಿವೆಯಂತೆ, ಹೀಗೆಂದು ಸ್ವತಃ ಆಕೆಯೇ ಯೂಟ್ಯೂಬ್ ವಿಡಿಯೋ ಮೂಲಕ ವಿಷಯ ತಿಳಿಸಿದ್ದಾರೆ.

ಅಕ್ರಮವಾಗಿ ಮಗು ದತ್ತು ಪಡೆದ ಪ್ರಕರಣದಲ್ಲಿ ಜೈಲು ಸೇರಿದ್ದ ‘ಬಿಗ್‌ ಬಾಸ್‌’ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ತಮ್ಮ ಮದುವೆ ಬಗ್ಗೆ ಮೌನ ಮುರಿದಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮದುವೆ ಮತ್ತು ರಾಜಕೀಯಕ್ಕೆ ಎಂಟ್ರಿ ಕೊಡುವ ಬಗ್ಗೆ ನಟಿ ಮಾತನಾಡಿದ್ದಾರೆ.

ಸದಾ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಇರುವ ನಟಿ ಇದೀಗ ಅಭಿಮಾನಿಗಳ ಜೊತೆ ಪ್ರಶ್ನಾವಳಿ ಮಾಡಿದ್ದಾರೆ. ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅಭಿಮಾನಿಯೊಬ್ಬರು ನೀವು ಯಾವಾಗ ಮದುವೆಯಾಗುತ್ತೀರಾ? ಎಂದು ಸೋನುಗೆ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಲವು ಪ್ರಶ್ನೆಗಳಿಗೆ ನಟಿ ಉತ್ತರಿಸಿದ್ದಾರೆ. ನನಗೆ ಮದುವೆಯಾಗುವ ಆಸೆಯಿಲ್ಲ, ಹೀಗಾಗಿ ನಾನು ಮದುವೆ ಆಗಬಾರದು ಎಂದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

ಸೋನು ಶ್ರೀನಿವಾಸಗೌಡ
ಅಕ್ರಮ ದತ್ತು ಪ್ರಕರಣ: 'ರೀಲ್ಸ್ ರಾಣಿ' ಸೋನು ಶ್ರೀನಿವಾಸಗೌಡಗೆ 14 ದಿನ ನ್ಯಾಯಾಂಗ ಬಂಧನ

ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಳ್ಳಬೇಕು ಎಂದು ಆಸಕ್ತಿ ಇತ್ತು. ಆದರೆ ಈಗ ಇಲ್ಲ, ಹೀಗಾಗಿ ರಾಜಕೀಯಕ್ಕೆ ಹೋಗಬೇಕು. ಅಲ್ಲಿ ಕಾಣಿಸಿಕೊಳ್ಳಬೇಕು ಎಂದು ಪ್ಲ್ಯಾನ್ ಇದೆ. ಮುಂದಿನ ದಿನಗಳಲ್ಲಿ ನೋಡೋಣ ಎಂದು ಸೋನು ಮಾತನಾಡಿದ್ದಾರೆ.

ಕಾನೂನು ಪ್ರಕಾರ ನಾನು ಕೇಸ್‌ ಬಗ್ಗೆ ಮಾತನಾಡುವಂತಿಲ್ಲ. ಆ ವ್ಯಕ್ತಿ ಅವರಪ್ಪ ಅಮ್ಮ ಜೊತೆ ಇದ್ದಾರೆ ನಾನು ನನ್ನ ಮನೆಯಲ್ಲಿ ನೆಮ್ಮದಿಯಾಗಿ ಇದ್ದೀನಿ. ಕೇಸ್ ಇದ್ದಾಗ ಕೋರ್ಟ್‌ಗೆ ಹೋಗಿ ಬರ್ತೀನಿ. ಜೈಲಿನಿಂದ ಹೊರ ಬರುವಾಗ ಮೀಡಿಯಾದವರನ್ನು ನೋಡಿ ಶಾಕ್ ಆಗಿಲ್ಲ, ಏಕೆಂದರೆ ಮೀಡಿಯಾ ನನಗೆ ಹೊಸದಲ್ಲ ಆದರೆ ಅವರಿಗೆ ಇದೇ ನ್ಯೂಸ್‌ ಬೇಕು ಅಂತ ಬಂದಿದ್ದಾರೆ ಎಂದು ನಕ್ಕಿ ಸುಮ್ಮನಾದೆ ಎಂದು ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com