ಸ್ಯಾಂಡಲ್‌ವುಡ್‌ ಬಾಕ್ಸ್ ಆಫೀಸ್ ಧೂಳೀಪಟ ಮಾಡಿದ ಪ್ರೇಮದ ಊರಲಿ; 50 ಕೋಟಿ ಕ್ಲಬ್ ಸೇರಿದ ಸಿನಿಮಾ

ಪ್ರೇಮದ ಊರಲಿ ಸಿನಿಮಾ ಸದ್ಯ ಸ್ಯಾಂಡಲ್‌ವುಡ್‌ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಹವಾ ಸೃಷ್ಟಿಸುತ್ತಿದೆ. ಯಾವುದೇ ದೊಡ್ಡ ಸ್ಟಾರ್ ನಟರಿಲ್ಲದೆ, ಕೇವಲ ಗಟ್ಟಿ ಕಥೆ ಮತ್ತು ಕೌಟುಂಬಿಕ ಭಾವನೆಗಳ ಮೂಲಕವೇ ಈ ಚಿತ್ರ ಪ್ರೇಕ್ಷಕರ ಮನ ಗೆದ್ದಿದ್ದು, 50 ಕೋಟಿ ಕ್ಲಬ್‌ಗೆ ಸೇರ್ಪಡೆಯಾಗಿದೆ. ಆ ಕುರಿತ ವರದಿ ಇಲ್ಲಿದೆ:
Premada Oorali
ಪ್ರೇಮದ ಊರಲಿOnline Desk
Updated on: 

ಬೆಂಗಳೂರು: ದೊಡ್ಡ ಸ್ಟಾರ್ ನಟರಿಲ್ಲ, ನೂರಾರು ಕೋಟಿ ಬಜೆಟ್ ಇಲ್ಲ. ಆದರೂ ಬಾಕ್ಸ್ ಆಫೀಸ್‌ನಲ್ಲಿ ಈಗ ಎಲ್ಲರ ಕಣ್ಣು ಈ ಪುಟ್ಟ ಚಿತ್ರದ ಮೇಲೆಯೇ ನೆಟ್ಟಿದೆ. ಬಿಡುಗಡೆಯಾದ ಮೊದಲ ದಿನ ಕೇವಲ 8 ಲಕ್ಷ ರೂಪಾಯಿ ಗಳಿಸಿ, 60 ಶೋಗಳಲ್ಲಿ ಆರಂಭವಾದ ಆ ಸಿನಿಮಾ, ಬರೀ ಮೂರೇ ವಾರಗಳಲ್ಲಿ 1,100ಕ್ಕೂ ಹೆಚ್ಚು ಹೌಸ್‌ಫುಲ್ ಪ್ರದರ್ಶನಗಳನ್ನು ಕಾಣುತ್ತಾ ಬರೋಬ್ಬರಿ 50 ಕೋಟಿ ಕ್ಲಬ್ ತಲುಪಿದ್ದು ಹೇಗೆ? ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ಅಚ್ಚರಿ ಮೂಡಿಸಿರುವ ಪ್ರೇಮದ ಊರಲಿ ಸಿನಿಮಾದ ಈ ಅಭೂತಪೂರ್ವ ಗೆಲುವಿನ ಮತ್ತು ಕೋಟಿ ಕೋಟಿ ಕಲೆಕ್ಷನ್‌ನ ಅಸಲಿ ರಿಪೋರ್ಟ್ ಇಲ್ಲಿದೆ.

ಮನೋಜ್ ಕುಮಾರ್ ನಿರ್ದೇಶನದಲ್ಲಿ, ಹಿರಿಯ ನಟ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಮೂಡಿಬಂದಿರುವ ಪ್ರೇಮದ ಊರಲಿ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದ್ದು, ಯಶಸ್ವಿಯಾಗಿ 50 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಕ್ಲಬ್ ಸೇರಿದೆ. ಕೇವಲ ₹2 ರಿಂದ ₹2.5 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಸಣ್ಣ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಬೃಹತ್ ಮೈಲಿಗಲ್ಲು ಸ್ಥಾಪಿಸಿದ್ದು, ಬಿಡುಗಡೆಯಾದ 17 ದಿನಗಳಲ್ಲಿ ಈ ಸಾಧನೆ ಮಾಡುವ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಇತಿಹಾಸ ಬರೆದಿದೆ.

ಒಂದೇ ದಿನ 8.00 ಕೋಟಿ ಕಲೆಕ್ಷನ್

ಬಿಡುಗಡೆಯಾದ ಮೊದಲ ದಿನ (ಸೆಪ್ಟೆಂಬರ್ 25) ಕೇವಲ ₹8 ರಿಂದ ₹9 ಲಕ್ಷ ಗಳಿಸಿದ್ದ ಈ ಚಿತ್ರ, ಪ್ರೇಕ್ಷಕರ ಸಕಾರಾತ್ಮಕ ವಿಮರ್ಶೆಗಳಿಂದಾಗಿ ದಿನದಿಂದ ದಿನಕ್ಕೆ ಪ್ರದರ್ಶನಗಳನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿತು. ಅದರಂತೆ, ಬಿಡುಗಡೆಯಾದಗ ಕೇವಲ 60 ಶೋಗಳ ಪ್ರದರ್ಶನಗಳೊಂದಿಗೆ ತೆರೆಕಂಡಿದ್ದ ಸಿನಿಮಾ, ಅದ್ಭುತವಾದ ಮೌತ್ ಟಾಕ್  ಕಾರಣದಿಂದಾಗಿ 3ನೇ ವಾರದ ವೇಳೆಗೆ 1,100 ಕ್ಕೂ ಹೆಚ್ಚು ಹೌಸ್‌ಫುಲ್ ಪ್ರದರ್ಶನಗಳನ್ನು ಕಾಣುವ ಮಟ್ಟಿಗೆ ಬೆಳೆದಿದೆ. ಅದರಲ್ಲೂ, ಅಕ್ಟೋಬರ್ 11 ರ ಭಾನುವಾರ (17ನೇ ದಿನ) ಚಿತ್ರವು ದೇಶಾದ್ಯಂತ ಬರೋಬ್ಬರಿ ₹8.00 ಕೋಟಿ ನೆಟ್ ಕಲೆಕ್ಷನ್ ಮಾಡಿದೆ. ಇದರೊಂದಿಗೆ ಚಿತ್ರದ ಒಟ್ಟು ಭಾರತೀಯ ನೆಟ್ ಗಳಿಕೆ ₹48.22 ಕೋಟಿಗೆ ತಲುಪಿದ್ದು, ಒಟ್ಟು ಭಾರತೀಯ ಗ್ರಾಸ್ ಕಲೆಕ್ಷನ್ ₹56.39 ಕೋಟಿ ದಾಟುವ ಮೂಲಕ ಪ್ರತಿಷ್ಠಿತ 50 ಕೋಟಿ ಕ್ಲಬ್ ಸೇರಿದೆ.

Premada Oorali
ಪ್ರೇಮದ ಊರಲಿ ಯಶಸ್ಸಿಗೆ ಗಣೇಶ್ ಸಾಥ್: ಬೃಂದಾವಿಹಾರಿ ರಿಲೀಸ್ ದಿನಾಂಕ ದಿಢೀರ್ ಬದಲಾವಣೆ

ಮುಂದುವರೆದು, ಚಿತ್ರದಲ್ಲಿ ಶ್ರೀ ರಾಮ್, ತಪಸ್ವಿನಿ ಪೂಣಚ್ಚ ಮತ್ತು ರಾಮಿಕಾ ಶಿವು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಹಳ್ಳಿ ಸೊಗಡಿನ ತಂದೆ-ಮಗನ ಬಾಂಧವ್ಯದ ಕಥೆ ಹಾಗೂ ಸುನಾದ್ ಗೌತಮ್ ಅವರ ಸಂಗೀತ, ಕುಟುಂಬ ಸಮೇತ ಜನರನ್ನು ಚಿತ್ರಮಂದಿರಗಳತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com