ಅಂಕಣಗಳು

ಆಂಗ್ಲ ಪದಬಳಕೆ ನಿಯಂತ್ರಣ ಸಾಧ್ಯವೇ?

Published On :

'ವಿವೇಕ ವಿಚಾರದ' ಸಾತ್ವಿಕತೆಯ 'ಆನಂದದ ಹಾಲು, 'ರನ್ ವೇ'ಯ ಘಮಘಮಿಸುವ ಸುವಾಸನೆಯ 'ಸಹನೆ'ಯ ಕಾಫಿಪುಡಿ ಮತ್ತು ನಕ್ಕೋ ನಕ್ಕೋ ಎಂಬ ತಿಳಿ ಹಾಸ್ಯದ ಸಕ್ಕರೆಗೆ ವೈವಿಧ್ಯಮಯವಾದ ಸದಭಿರುಚಿಯ ಅಂಕಣಗಳ ಶಾಖದಿಂದ ಹದವಾಗಿ ಪಾಕವಾದ ಬೈಟೂಕಾಫಿಯ ಸ್ವಾದವನ್ನು ಪ್ರತಿದಿನ ಸವಿಯುತ್ತಾ ಸವಿಯುತ್ತಾ ವರ್ಷ ಕಳೆದಿದ್ದೇ ಗೊತ್ತಾಗಲಿಲ್ಲ. ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ಬೈಟೂಕಾಫಿಗೆ ಹೃತ್ಪೂರ್ವಕ ಶುಭಾಶಯಗಳು. ವರ್ಷದ ಸವಿನೆನಪಿನೊಂದಿಗೆ ಬಂದ ಅಂದಿನ ಬೈಟೂ ಕಾಫಿಯ ಪುರವಣಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಜೊತೆಯಾಗಿ ಹೆಸರು ಗಳಿಸಿದ ಬೈಟೂ ಜೋಡಿಗಳನ್ನು ನೆನಪಿಸಿಕೊಟ್ಟ, ಕೆಲವರನ್ನು ಪರಿಚಯಿಸಿ ಕೊಟ್ಟ ಬೈಟೂ ಕಾಫಿಯ ಚಿಂತನೆ ಶ್ಲಾಘನೀಯ. ವರ್ಷ ಕಳೆದದ್ದರಿಂದ ಎಲ್ಲಾ ಅಂಕಣಗಳ ಸ್ಥಾನ ಪಲ್ಲಟ ಮಾಡಿ ಬೈಟೂಕಾಫಿಗೆ ಹೊಸ ನೋಟ ನೀಡಿರುವುದು ಸ್ವಾಗತಾರ್ಹ. ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಮೂಢನಂಬಿಕೆಯನ್ನು ತೊಲಗಿಸುವ, ವೈಜ್ಞಾನಿಕ ದೃಷ್ಟಿಕೋನವನ್ನು ಬೆಳೆಸುವ ಮತ್ತು ನೈತಿಕತೆಯನ್ನು ಬಲಪಡಿಸುವ ಅಂಕಣಗಳು ಬೈಟೂಕಾಫಿಯಲ್ಲಿ ಹೆಚ್ಚಾಗಿ ಮೂಡಿ ಬರಲೆಂದು ಆಶಿಸುತ್ತೇನೆ.
- ಆರ್.ಸಿ. ಪರಶುರಾಮ್, ಶಿಕಾರಿಪುರ, ಮೊ. 990220 3492

ಪ್ರತಿವಾರದ ಎರಡು ದಿನ ಬರೆಯುವ ಅಂಕಣಕಾರರಾದ ವಿಶ್ವೇಶ್ವರಭಟ್ ಮತ್ತು ಒಂದು ದಿನ ಬರೆಯುವ ಪ್ರತಾಪಸಿಂಹರಿಗೆ ಕೇವಲ ಯುಪಿಎ ನೇತೃತ್ವದ ಕಾಂಗ್ರೆಸ್ ಸರ್ಕಾರವೇ ಟಾರ್ಗೆಟ್ಟಾ ಎಂಬ ಬಗ್ಗೆ ಗುಮಾನಿ ಶುರುವಾಗುತ್ತಿದೆ. ಅವರು ಕೇಂದ್ರ ಸರ್ಕಾರದ ಕಾರ್ಯವೈಖರಿಯನ್ನು ಜನತೆಯ ಮುಂದೆ ತೆರೆದಿಡುತ್ತಿರುವುದು ಶ್ಲಾಘನೀಯವೆನಿಸಿದರೂ, ಪ್ರಧಾನಿ ಸಿಂಗ್, ರಾಹುಲ್ ಹಾಗೂ ವಾದ್ರಾ ಮೊದಲಾದವರನ್ನು ಹಿಗ್ಗಾ-ಮುಗ್ಗಾ ಹಣಿಯುತ್ತಿದ್ದಾರೆನಿಸುತ್ತದೆ.
- ಸಂಗಮೇಶ್ ಯಡ್ರಾಮಿ, ಅರಕೇರಾ, ಮೊ. 7259 434853

'ನಂಗೆ ಇಷ್ಟಾನೋ' ಅಂಕಣದ 'ನಮಗೂ ಲೀ ಅವರಂಥ ಪ್ರಧಾನಿ ಇರಲಿ' ಎಂಬ ತಲೆಬರಹದ ಮೊದಲ ಭಾಗದ ಈ ವಾಕ್ಯಗಳನ್ನು ಗಮನಿಸಿದರೆ (1) ದೇಶದ ಜನತೆಯೊಂದಿಗೆ ಡಾ. ಸಿಂಗ್ ್ಠಜಟಛಡಿಜ ಆಗಲೇ ಇಲ್ಲ.   (2) ಲೀ ಭಾಷಣ ಯಾಕೆ ಪ್ರಸ್ತುತವಾಗುತ್ತದೆ ಹಾಗೂ ಯಾಕೆ ಮುಖ್ಯವೆನಿಸುತ್ತದೆ ಅಂದ್ರೆ ಅವರು ದೇಶದ ಪ್ರತಿ ಪ್ರಜೆಯೊಂದಿಗೆ ತಮ್ಮನ್ನು ್ಠಜಟಛಡಿಜ ಮಾಡಿಕೊಂಡದ್ದು.  (3) ಒಬ್ಬ ಪ್ರಧಾನಿ ತಮ್ಮ ದೇಶವಾಸಿಗಳೊಂದಿಗೆ ್ಠಜಟಛಡಿಜ ಆಗುವ ಪರಿ ಅಂಥದ್ದು.  ಈ ಮೂರೂ ವಾಕ್ಯಗಳಲ್ಲಿ ಒಂದೊಂದು ಬಾರಿ ಬಂದಿರುವ ಈ ್ಠಜಟಛಡಿಜ ಎಂಬ ಇಂಗ್ಲಿಷ್ ಪದ ಹೇಳುವುದೇನು? ಪ್ರಜೆಗಳೊಂದಿಗೆ ದೇಶದ ಪ್ರಧಾನಿಯಾಗಿರುವವರ ಆಡಳಿತಾತ್ಮಕ, ವ್ಯಾವಹಾರಿಕ ಮತ್ತು ಭಾವನಾತ್ಮಕ  ಸಂಬಂಧ ಹೇಗಿದ್ದರೆ ಚೆನ್ನ ಎಂದು ಹೇಳಬೇಕಾದುದನ್ನು ಹೀಗೆ ್ಠಜಟಛಡಿಜ ಎಂಬ ಒಂದೇ ಒಂದು ಇಂಗ್ಲಿಷ್ ಪದವನ್ನು ಬಳಸಿ ಹೇಳಲು ಯತ್ನಿಸಿದ್ದಾರಾ? ಹೀಗೆ ಹೇಳಲು ಅವರಿಗೆ ಸೂಕ್ತ ಕನ್ನಡ ಪದವೊಂದು ಸಿಕ್ಕಲಿಲ್ಲವಾ ಎಂಬ ವಿಚಾರಗಳು ನನ್ನ ಮೆದುಳನ್ನು ಕೊರೆಯತೊಡಗಿರುವುದು ಸತ್ಯ ಸಂಗತಿ. ್ಠಜಟಛಡಿಜ ಎಂಬ ಪದದ ಬದಲಿಗೆ ಸಮಂಜಸವೆನ್ನಿಸಿದ ಒಂದು ಕನ್ನಡ ಪದವನ್ನೇ ಬಳಸಿ, ಅಥವಾ ಪರ್ಯಾಯ ವಾಕ್ಯಗಳ ಮೂಲಕ ಹೇಳಲು ಸಾಧ್ಯವಿರಲಿಲ್ಲವಾ?
- ಬೊ. ನಾ. ಕೃಷ್ಣಮೂರ್ತಿ, ಸಾಗರ

ಒಂದು ಪ್ರಬಲ ದಿನಪತ್ರಿಕೆ ಏನೆಲ್ಲ ಬದಲಾವಣೆಗಳನ್ನು ತರಬಹುದು ಎಂಬುದು ಅರಿತಿರುವ ವಿಷಯವೇ ದಾರಿ ತಪ್ಪಿ ವ್ಯವಹರಿಸುವ ಸರ್ಕಾರವನ್ನೇ ಕೆಳಗಿಳಿಸುವ, ಎಲ್ಲೋ ಒಂದು ಮೂಲೆಯಲ್ಲಿ ತನ್ನ ಅಸ್ತಿತ್ವವನ್ನೇ ಗುರ್ತಿಸಿಕೊಳ್ಳದೇ ಇರುವ ಪ್ರತಿಭಾವಂತರನ್ನು ಪರಿಚಯಿಸುವ, ಸಮಾಜದ ಡೊಂಕನ್ನು ತಿದ್ದುವ, ಹೀಗೆ ಹತ್ತು ಹಲವು ಸಕಾರಾತ್ಮಕ ಪರಿಚಯವನ್ನು ಪತ್ರಿಕೆ ಬೀರುತ್ತಿರುತ್ತದೆ. ಆದರೆ ಒಂದು ದಿನ ಪತ್ರಿಕೆ ಗೆಳೆಯರ ಬಳಗವನ್ನು ಹೆಚ್ಚಿಸಬಹುದೆಂಬ ಅರಿವಾದದ್ದು ಕನ್ನಡಪ್ರಭ ಓದಿ ಪ್ರತಿಕ್ರಿಯಿಸಿದಾಗಲೇ. ಕೆಲವು ಜನಪ್ರಿಯ ಅಂಕಣಗಳಲ್ಲಿ ಪ್ರಕಟವಾದ ಅಭಿಪ್ರಾಯಗಳಿಗೆ ಸಹೃದಯ ಓದುಗರು ಫೋನಾಯಿಸಿ, ತಮ್ಮ ಪ್ರತಿಕ್ರಿಯೆಯನ್ನು ಪ್ರಕಟಿಸುವುದು, ತಪ್ಪಿದ್ದಲ್ಲಿ ತಿದ್ದಿ ಪ್ರೋತ್ಸಾಹಿಸುವುದು ಅತಿ ಸಂತಸದ ವಿಷಯ. ಕೆಲವು ಓದುಗ ಮಿತ್ರರಂತೂ ಪತ್ರಮುಖೇನ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿರುವುದು ವಿಶೇಷ. ಕನ್ನಡಪ್ರಭ ನಿಜ ಅರ್ಥದಲ್ಲಿ ಆಪ್ತ ಪತ್ರಿಕೆ ಅಂತ ಹೇಳಲು ಹೆಮ್ಮೆ ಎನಿಸುತ್ತಿದೆ. ಜನರನ್ನು ಹತ್ತಿರಕ್ಕೆ ತಂದು, ಆತ್ಮೀಯ ಭಾವ ಹೆಚ್ಚಿಸುವಲ್ಲಿ ಕನ್ನಡಪ್ರಭ ಮುಂಚೂಣಿಯಲ್ಲಿದೆ ಅಂದರೆ ಅತಿಶಯೋಕ್ತಿಯಾಗಲಾರದು. ಸಾಮಾನ್ಯ ಓದುಗರನ್ನೂ ಹತ್ತಿರ ತರುತ್ತಿರುವುದು ಪತ್ರಿಕೆಯ ವಿಶೇಷತೆ ಅನಿಸುತ್ತಿಲ್ಲವೇ? ಇದೇ ರೀತಿಯ ಪರಂಪರೆ ಮುಂದೂ ಅಪೇಕ್ಷಿಸಬಹುದೇ?
- ಶಂಕರನಾರಾಯಣಭಟ್, ಮಾಡಗೇರಿ, ಹೊನ್ನಾವರ

ಆಗಸ್ಟ್ 31ರ ಸಂಚಿಕೆಯ 'ಪದ ಪದರ'ಕ್ಕೆ ಬಳಸಿದ ಚಿತ್ರ ಸೂಕ್ತವೆನಿಸಲಿಲ್ಲ. ಭಾರತೀಯ ಸಂಸ್ಕೃತಿಯಲ್ಲಿ ವೃದ್ಧರಿಗೆ ಅವರದ್ದೇ ಆದ ಸ್ಥಾನಮಾನವಿದೆ.
- ರಾಜೀವ ಪಟವರ್ಧನ್, ಬೆಂಗಳೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.