ರಾಜಕೀಯ ಲೇಖನವೇ ಹೆಚ್ಚಾಯಿತಲ್ಲ?

Updated on: 

ರಾಜಕೀಯದ ಹಲವು ಮುಖಗಳನ್ನು ಪರಿಚಯಿಸುವ ಕುಂವೀಯವರ 'ನಂಜು'. ಹಲವಾರು ರಾಜಕೀಯ ಸ್ಥಿತ್ಯಂತರಗಳನ್ನು ಕಾಣುತ್ತಿರುವ ಕರ್ನಾಟಕದ ರಾಜಕೀಯಕ್ಕೆ ಹಾಗೂ ರಾಜಕಾರಣಿಗಳಿಗೆ ಈ ಕಥೆ ಕನ್ನಡಿಯಾಗಿದೆ. ರಾಜಕಾರಣಿಗಳು ಬದಲಾದಾರೇ?... ಒಂದು ಯಕ್ಷಪ್ರಶ್ನೆ. ಕುಂವೀಯವರ ಪ್ರಯತ್ನಕ್ಕೆ ಅಭಿನಂದನೆಗಳು.
ಮಹಮ್ಮದ್ ರಫೀಕ್ mahammedrafiq2@gmail.com


ವಿಶ್ವೇಶ್ವರ ಭಟ್ ಸರ್... ನಾನು ಗುರುವಾರ ಎಲ್ಲ ಕೆಲಸ ಬಿಟ್ಟು ಬೆಳಿಗ್ಗೆ ಕನ್ನಡಪ್ರಭದ 'ವಿಚಾರ ತೋರಣ'ದಲ್ಲಿ ನಿಮ್ಮ ಆರ್ಟಿಕಲ್ ನೋಡ್ತೀನಿ. ಆದ್ರೆ ಇತ್ತೀಚಿಗೆ ಕೇವಲ ರಾಜಕೀಯದ ಆರ್ಟಿಕಲ್ ನೋಡಿ ಬೇಜಾರಾಗಿದೆ. ದಯವಿಟ್ಟು ಯುವ ಜನತೆಗೆ ಸ್ಫೂರ್ತಿ ಕೊಡುವ ಆರ್ಟಿಕಲ್ ನೀಡಿ. ನಿಮ್ಮ ಆರ್ಟಿಕಲ್‌ಗೆ ಕಾಯುತ್ತಿರುವ ನಿಮ್ಮ ಅಭಿಮಾನಿ,
ಪ್ರಶಾಂತ ಪೋತದಾರ, prashant.potdar@gmail.com

ಮೇ 25ರ ಪತ್ರಪ್ರಭದಲ್ಲಿ ಕೊಕ್ಕಡ ವೆಂಕಟ್ರಮಣಭಟ್‌ರವರು 'ಮೋಸಗಾರರಿಗೆ ತಾರಾ ಮೆರಗು' ಎಂಬ ಶೀರ್ಷಿಕೆಯಡಿ ಪತ್ರವೊಂದನ್ನು ಬರೆದಿದ್ದಾರೆ. ಅವರು ಬರೆದ ಪತ್ರದಲ್ಲಿ ವಾಕ್ಯವೊಂದು ಹೀಗಿದೆ. ರಾಷ್ಟ್ರದ ಘನತೆಯನ್ನು ಹರಾಜು ಹಾಕಿದ ಈ ಕ್ರಿಕೆಟ್ ದೇವತೆಗಳ ಕ್ರಿಮಿನಲ್ ಬುದ್ಧಿಗೆ 'ವಿಚಾರರಹಿತ'ವಾಗಿ ಐದು ವರ್ಷ ಸೆರೆಮನೆಯೊಳಗೆ ತಳ್ಳಬೇಕು ಎಂದು ಬರೆದಿದ್ದಾರೆ.  ಆದರೆ ಯಾವುದೇ ಒಬ್ಬ ವ್ಯಕ್ತಿ ತಪ್ಪು ಮಾಡಿದಾಗ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಅಂದರೆ ಮೇಲ್ನೋಟಕ್ಕೆ ತಪ್ಪು ಅಂತಾ ಕಂಡು ಬಂದರೂ ಸಹ ವಿಚಾರಣೆ ನಡೆಸಿಯೇ ಆನಂತರ ಅವನಿಗೆ ಶಿಕ್ಷೆಯನ್ನು ವಿಧಿಸುವುದು ಸಾಮಾನ್ಯ. ಆದರೆ ವಿಚಾರಣೆ ರಹಿತವಾಗಿ ಐದು ವರ್ಷ ಶಿಕ್ಷೆಯನ್ನು ಆಪಾದಿತ ಕ್ರಿಕೆಟಿಗರಿಗೆ ನೀಡಬೇಕು ಎಂಬ ಅವರ ಅಪೇಕ್ಷೆ ನಿಜಕ್ಕೂ ಖಂಡನಾರ್ಹ. ಏಕೆಂದರೆ ವಿಚಾರಣೆ ರಹಿತವಾಗಿ ಶಿಕ್ಷೆ ವಿಧಿಸುವುದಾದರೆ ಈ ದೇಶಕ್ಕೆ ಸಂವಿಧಾನ ಏಕೆ ಬೇಕು? ನ್ಯಾಯಾಂಗ ವ್ಯವಸ್ಥೆಯನ್ನು ಜನ ಏತಕ್ಕಾಗಿ ನಂಬಬೇಕು ಎಂಬ ಪ್ರಶ್ನೆ ಉದ್ಭವಿಸದೇ ಇರದು ಅಲ್ಲವೇ?
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ,
ಮಂಡ್ಯ ಜಿಲ್ಲೆ, ಮೊ. 9632 838088

ಪ್ರತಾಪ್‌ಸಿಂಹರವರೇ  (18.5.2013) ಮತ್ತು (11.5.2013)ರ ತಮ್ಮ ಅಂಕಣಗಳಲ್ಲಿ ಬಿಜೆಪಿಯ ವ್ಯಕ್ತಿತ್ವವನ್ನು ಬಟಾಬಯಲು ಮಾಡಿ ಕೇವಲ ರಾಜ್ಯದ ಜನತೆಗಲ್ಲದೇ ಬಿಜೆಪಿ ಪಕ್ಷದವರಿಗೂ ತಿದ್ದಿಕೊಳ್ಳುವ ಅವಕಾಶ ಕಲ್ಪಿಸಿದ್ದಕ್ಕೆ ಧನ್ಯವಾದಗಳು. ನಿಷ್ಠಾವಂತ ಬಿಜೆಪಿ ಕಾರ್ಯಕರ್ತರು ಮತ್ತು ಮತಬಾಂಧವರು ನಿಮ್ಮ ಅಂಕಣವನ್ನು ಯಾವ ರೀತಿ ಅರ್ಥೈಸಿಕೊಳ್ಳುತ್ತಾರೋ ನಾ ತಿಳಿಯೇ. ಆದರೆ ಮುಂಬರುವ ಲೋಕಸಭಾ ಚುನಾವಣೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಈಗಾಗಲೇ ನಮ್ಮ ದೇಶವನ್ನು ಮುಕ್ಕಾಲು ಲೂಟಿ ಹಾಳು ಮಾಡಿ ಹರಾಜು ಹಾಕಿದ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರ ಗಿಟ್ಟಿಸಿಕೊಳ್ಳಲು ಎಲ್ಲಿಲ್ಲದ ಪ್ರಯತ್ನ ನಡೆಸಿರುವುದು ನಿಮಗೂ ಗೊತ್ತಿರುವ ವಿಚಾರವೇ. ಮುಂಬರುವ ದಿನಗಳಲ್ಲಿ ರಾಷ್ಟ್ರ ಸುಭಿಕ್ಷವಾಗಿರಬೇಕಾದರೆ ನರೇಂದ್ರ ಮೋದಿ ನಾಯಕತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದರೆ ಮಾತ್ರ ಸಾಧ್ಯ. ಈ ವಿಚಾರದಲ್ಲಿ ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಬಿಎಸ್‌ವೈ ಪಾತ್ರವೂ ಮುಖ್ಯವೆಂದು ಎಲ್ಲರಿಗೂ ಗೊತ್ತಿರುವ ಸತ್ಯ. ಈ ನಿಮ್ಮ ಅಂಕಣವನ್ನೇ ಮೂಲವಾಗಿರಿಸಿಕೊಂಡು ಯಾಕೆ ತಾವು ಒಂದು ಜನಾಭಿಮತಕ್ಕೆ ಕೈ ಹಾಕಬಾರದು. ತಮ್ಮದೇ ಆದ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭದ ಮೂಲಕ ರಾಜ್ಯದ ಜನತೆಗೆ ಕೇವಲ ಒಂದೇ ಒಂದು ಪ್ರಶ್ನೆ ಹಾಕಿ. ಆ ಪ್ರಶ್ನೆಗೆ ಸಿಗುವ ಉತ್ತರ ಮುಂದೆ ನಮ್ಮ ರಾಷ್ಟ್ರವನ್ನು ಶಿಖರದೆತ್ತರಕ್ಕೆ ಕರೆದೊಯ್ಯುವ ಸಾಧ್ಯತೆಯಿದೆ. ಈ ಸಾಧನೆಗೆ ತಮ್ಮಿಂದಲೇ ನಾಂದಿಯಾಗಲಿ ಎಂದು ನನ್ನ ಆಶಯ.
-ಪವನ್ ವಶಿಷ್ಠ, ಮೊ. 9742825009

ಮೇ 22ರ ಕನ್ನಡ ಪ್ರಭದಲ್ಲಿ, ಕೃತಕ ಕಾಲುಗಳಲ್ಲಿಯೇ ಮೌಂಟ್ ಎವರೆಸ್ಟ್ ಏರಿದ ಅರುಣಿಮಾ ವಿದ್ಯಮಾನವನ್ನು ಮುಖಪುಟದಲ್ಲಿಯೇ ವಿವರವಾಗಿ ನೀಡಿದ್ದು ಸ್ಫೂರ್ತಿದಾಯಕವಾಗಿತ್ತು. ಹೆಚ್ಚಿನ ಸಂದರ್ಭಗಳಲ್ಲಿ ರಾಜಕೀಯ ವಿಷಯಗಳೇ ಮುಖಪುಟವನ್ನು ಆವರಿಸುತ್ತವೆ. ಆದರೆ ಇಂಥ ಪ್ರೇರಣಾದಾಯಿ ಸಾಧನೆಗಳೇ ನಿಜವಾಗಿ ನಮ್ಮ ಬದುಕನ್ನು ತಟ್ಟುವಂಥ ಸಂಗತಿಗಳು. ಉಳಿದಂತೆ ರಾಜಕೀಯದ ವ್ಯಕ್ತಿಗಳ ಪೈಕಿ ಅವರೇನೆಂದರು, ಇವರೇನೆಂದರು ಎಂಬ ಸುದ್ದಿಗಳೆಲ್ಲ ಆ ಕ್ಷಣಕ್ಕೆ ಚಪ್ಪರಿಸುವುದಕ್ಕೆ ಸರಿಯೇನೋ. ಮೇ 24ರ ಸಂಚಿಕೆಯ ಒಳಪುಟದಲ್ಲಿ ಅಮೆರಿಕದಲ್ಲಿ 'ಜಿಯಾಗ್ರಫಿಕ್ ಬಿ' ಗೆದ್ದ ಭಾರತೀಯ, ಮಂಗಳೂರು ಮೂಲದ ಪೋರನ ವಿವರಗಳಿವೆ. ಅಲ್ಲದೇ ಭಾರತೀಯ ಮೂಲದ ಮಕ್ಕಳೇ ಈ ಪುರಸ್ಕಾರವನ್ನು ಆರು ವರ್ಷಗಳಿಂದ ಪಡೆಯುತ್ತಿದ್ದಾರೆ ಎಂಬ ಮಾಹಿತಿಯನ್ನೂ ನೀಡಲಾಗಿದೆ. ಇದೂ ಮುಖಪುಟದಲ್ಲೇ ಕಾಣಿಸಿಕೊಳ್ಳಬಹುದಾಗಿತ್ತಲ್ಲವೇ?
-ಶ್ರಾವಣಿ, ಶಿವಮೊಗ್ಗ

ನೀವು ಏನ್‌ಬರೆದ್ರೂ ಪ್ರಕಟಿಸ್ತೀವಿ. ಪ್ರಕಟಿಸ್ತೀವಿ ಅಂತ ಏನೇನೆಲ್ಲ ಬರೀಬೇಡಿ!
ನಿಮ್ಮ ಅನಿಸಿಕೆಗಳನ್ನು  ಗೋಡೆಗೆ ಛಾಪಿಸಲು: anisikeprabha@gmail.com
ಗೋಡೆಬರಹ ವಿಭಾಗ, ಕನ್ನಡಪ್ರಭ, ಎಕ್ಸ್‌ಪ್ರೆಸ್ ಕಟ್ಟಡ, ನಂ.1, ಕ್ವೀನ್ಸ್ ರಸ್ತೆ, ಬೆಂಗಳೂರು -1.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com