ಎರಡು ಟೇಸ್ಟಿ ಅಂಕಣ ಅಪೂರ್ಣ ಲೇಖನ
ಕ.ಪ್ರ.ದ ನೂತನ ಆವಿಷ್ಕಾರ 'ಹತ್ಯಾಚಾರ' ಸೂಕ್ತವಾಗಿದೆ. ನಿರ್ಭಯಳ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆಯ ಕಥೆಯನ್ನು ಪರಿಣಾಮಕಾರಿಯಾಗಿ ಹೇಳುವ ಪದ. ಈ ಪದದ ನಿಷ್ಪತ್ತಿಯ ಹಿಂದೆ ಕೆಲಸ ಮಾಡಿದ ಕುಶಾಗ್ರ ತಲೆಗಳಿಗೆ ನಮಸ್ಕಾರ. ಈ ಪದಯಾನ ಹೀಗೆಯೇ ಮುಂದುವರಿಯಲಿ.
-ಎಸ್. ರಾಘವೇಂದ್ರ, ಮೈಸೂರು
ಸೆಪ್ಟೆಂಬರ್ 7ರ ಬೈಟುಕಾಫಿ ಪುರವಣಿಯಲ್ಲಿ ನಿಶ್ಯಬ್ದ ಅಂಕಣದಲ್ಲಿ ಪ್ರಕಟವಾಗಿದ್ದ ಬಾವಲಿಗಳು ಮೂಡಿಸಿದ ಟ್ರಾನ್ಸ್ಫರ್ ಲೇಖನ ವಾಸ್ತವಿಕವಾಗಿದ್ದು, ಸುಮಾರು ಆರು ವರ್ಷಗಳ ಹಿಂದೆ ಗೆಳೆಯರೊಬ್ಬರನ್ನು ಕಾಣಲೆಂದು ಕಮೀಷನರ್ ಕಛೇರಿಗೆ ಹೋಗಿದ್ದಾಗ ಅಲ್ಲಿ ಬೃಹತ್ ಗಾತ್ರದ ವಿವಿಧ ಮರಗಳಲ್ಲಿ ತಲೆ ಕೆಳಕಾಗಿ ನೇತಾಡುತ್ತಿದ್ದ ಸಾವಿರಾರು ಬಾವಲಿಗಳನ್ನು ನೋಡಿ ಆಶ್ಚರ್ಯಗೊಂಡಿದ್ದೆ. ಬಾವಲಿಗಳು ಹಿಂದಿನ ಜನ್ಮದಲ್ಲಿ ಋಷಿ ಮುನಿಗಳು. ಅವು ಆಹಾರಕ್ಕಾಗಿ ಹಾರಾಡುವ ಸಮಯದಲ್ಲಿ ಅವುಗಳನ್ನು ಕೊಂದರೆ ತಪ್ಪಿಲ್ಲ. ಅವು ತಲೆಕೆಳಕಾಗಿ ಧ್ಯಾನದಲ್ಲಿದ್ದಾಗ ಸಾಯಿಸುವುದು ಮಹಾಪಾಪ. ಅವುಗಳ ಸಾವಿಗೆ ಕಾರಣರಾದವರು ಸಮಸ್ಯೆಗಳಿಗೆ ಸಿಲುಕುತ್ತಾರೆ ಎಂಬೆಲ್ಲ ನಂಬಿಕೆಗಳಿರುವುದಂತೂ ಹೌದು.
- ವಿ. ಹೇಮಂತಕುಮಾರ, ನಂ.5, 7ನೇ ಕ್ರಾಸ್, ವೆಂಕಟೇಶ್ವರ ಲೇಔಟ್, ಜೆ.ಪಿ.ನಗರ, ಬೆಂ.76, ಮೊ. 9035 992900
ನಿಮ್ಮ ಪತ್ರಿಕೆಯು ವಿಶ್ವದ ನಾನಾ ಮೂಲೆಗಳಿಂದ ಜ್ಞಾನವನ್ನು ತರುತ್ತದೆ. ಎಲ್ಲಾ ತರಹದ ವಿಷಯಗಳ ಬಗ್ಗೆ ನಮ್ಮ ಜ್ಞಾನ ತುಂಬಿಸುತ್ತದೆ. ಆದರೆ ಪತ್ರಿಕೆ ತರಲು ಅಂಗಡಿಗೆ ಹೋದರೆ ಅದರ ಬೆಲೆ 3.50 ರು. ನಮಗೆ ಚಿಲ್ಲರೆಯು ಸಿಗದೆ ವಿಷಯಕ್ಕೆ ತಕ್ಕಂತೆ ಪತ್ರಿಕೆಯ ಬೆಲೆಯು ಹೆಚ್ಚಾಗದೇ, ಮನಸ್ಸಿಗೆ ಕಿರಿಕಿರಿಯಾಗುತ್ತದೆ. ಆದ್ದರಿಂದ ದಿನನಿತ್ಯ ಪತ್ರಿಕೆಯ ಬೆಲೆ 4 ರು. ಆಗಲಿ ಮತ್ತು ಶುಕ್ರವಾರ, ಭಾನುವಾರ 5 ರು. ಆಗಲಿ ಎಂದು ನನ್ನ ಬಹುದಿನದ ಬಯಕೆ.
- ಆರ್. ತಿಪ್ಪೇರುದ್ರಪ್ಪ, ಶಿಕ್ಷಕರು, ಬೆಳಗೆರೆ ಪೋ., ಚಳ್ಳಕೆರೆ ತಾ. ಮೊ. 9964 686970
ಬೈಟೂ ಕಾಫಿಯ ಇತ್ತೀಚಿನ ಎರಡು ಹೊಸ ಅಂಕಣಗಳು ನಿಜಕ್ಕೂ ಟೇಸ್ಟಿ! ಅಡಿಗಡಿಗೂ ಸರಿ ಜಾಡಿನಲ್ಲಿ ನಡೆಯಲು ಪ್ರಚೋದಿಸುವ 'ಸನ್ನುಡಿ' ಹಾಗೂ ಹರಯದ ದಂಪತಿಗೆ ಪ್ರಸಕ್ತ ಹಾಗೂ ನಮ್ಮಂಥವರಿಗೆ ಗತ ಸವಿನೆನಪುಗಳ ಚಿತ್ತಾರವನ್ನು ಮೂಡಿಸುವ 'ಸಲ್ಲಾಪ' ಎರಡೂ ಅದ್ಭುತ ಅಂಕಣಗಳು.
- ಕೆ. ಶ್ರೀನಿವಾಸರಾವ್, ಹರಪನಹಳ್ಳಿ, ದಾವಣಗೆರೆ ಜಿಲ್ಲೆ
ಕನ್ನಡಪ್ರಭ ಆಗಸ್ಟ್ 29ರ ಬೈಟುಕಾಫಿ ಸಂಚಿಕೆಯ ಮುಖಪುಟದಲ್ಲಿ ಸೀಮೆಸುಣ್ಣದಲ್ಲಿ 1050 ಬಗೆಯ ವೈವಿಧ್ಯಮಯ ಆನೆಗಳ ಕಲಾಕೃತಿಗಳನ್ನು ಕೆತ್ತನೆ ಮಾಡಿ ಲಿಮ್ಕಾ ದಾಖಲೆ ಮಾಡಿರುವ ಕಲಾವಿದರಾದ ಶ್ರೀಧರ್ ಅವರ ಬಗ್ಗೆ ಫೋಟೋ ಲೇಖನ ಪ್ರಕಟಿಸಿದ್ದೀರ. ಆದರೆ ಇವರು ಯಾವ ಊರಿನವರು? ಕಲಾಶಿಕ್ಷಕರಾಗಿ ಎಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ? ಎಂಬ ಬಗ್ಗೆ ಮಾಹಿತಿಯೇ ಇಲ್ಲ. ಇವರನ್ನು ಅಭಿನಂದಿಸೋಣ ಅಂದ್ರೆ ಕನಿಷ್ಠ ಪಕ್ಷ ಈ ಕಲಾವಿದರ ಮೊಬೈಲ್ ಸಂಖ್ಯೆಯನ್ನೂ ನೀವು ಪ್ರಕಟಿಸಿಲ್ಲ. ಇಂಥಾ ಅಪೂರ್ಣ ಮಾಹಿತಿಯನ್ನು ಪ್ರಕಟಿಸುವುದು ಸರಿನಾ?
- ಫ್ಯಾಷನ್ ಡಿಸೈನರ್ ಮಧು, ಹಾಸನ, 99457- 37427
ಪ್ರತಾಪಸಿಂಹ ಬರೆಯುವ 'ಬೆತ್ತಲೆ ಪ್ರಪಂಚ'ಕ್ಕಾಗಿ ಸಾವಿರಾರು ಕನ್ನಡಪ್ರಭ ಓದುಗರು ಕಾಯುತ್ತ ಇರುತ್ತಾರೆ. ಏಕೆಂದರೆ ಅವರ ದಿಟ್ಟ ಬರವಣಿಗೆ ಅರ್ಥಪೂರ್ಣ ಲೇಖನ. ಅಂದರೆ ಇತ್ತೀಚೆಗೆ ಬಿಜೆಪಿಯ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಬಗ್ಗೆ ಹಲವು ಲೇಖನಗಳನ್ನು ಬರೆದಿದ್ದಾರೆ. ಇನ್ನೂ ಬರೆಯುತ್ತಿದ್ದಾರೆ. ಇದು ನಮಗೆ ಸ್ವಲ್ಪ ಬೇಸರ ತರಿಸಿದೆ. ಓದುಗನಾದ ನಾನು ಯಾವ ಪಕ್ಷದ ಪರವಾಗಿಲ್ಲ. ಒಬ್ಬ ವ್ಯಕ್ತಿಯ ಬಗ್ಗೆ ಪದೇ ಪದೆ ಹೊಗಳಿ ಬರೆಯುವುದು ಸರಿಯೇ? ಅವರ ಲೇಖನಿಯಿಂದ ನಮ್ಮ ರಾಜ್ಯದ ಭ್ರಷ್ಟ ರಾಜಕಾರಣಿಗಳು, ಭ್ರಷ್ಟ ಅಧಿಕಾರಿಗಳಿಗೆ ಸಿಂಹಸ್ವಪ್ನವಾಗುವಂತಹ ಲೇಖನಗಳು ಬರಲಿ ಎಂದು ಆಶಿಸುತ್ತೇನೆ.
- ರವಿಕುಮಾರ್ ಜಿ.ಬಿ., ಶ್ರೀವಿನಾಯಕ ಕಾಂಡಿಮೆಂಟ್ಸ್, ನಂ. 82, 1ನೇ ಮುಖ್ಯರಸ್ತೆ, ಶೇಷಾದ್ರಿಪುರಂ, ಬೆಂಗಳೂರು, ಮೊ. 944 966 9897
'ಮೋದಿ ತಡೆಯಲು ಪಕ್ಷದೊಳಗೇ ನಡೆಯುತ್ತಿದೆ ಪ್ರಯತ್ನ' ಲೇಖನದ ಮೂಲಕ ಪ್ರತಾಪ್ ಸಿಂಹರವರು ರಾಜಕೀಯ ಪಕ್ಷಗಳ ಬಗ್ಗೆ ತುಂಬ ಚೆನ್ನಾಗಿ ತಿಳಿಸಿದ್ದಾರೆ. ಇಂಥ ರಾಜಕೀಯ ಸರಿಯಲ್ಲ.
- ಪ್ರಾಪ್ತಿ ಜೈನ್, ಉಜಿರೆ
ನಿಮ್ಮ ಅನಿಸಿಕೆಗಳನ್ನು ಗೋಡೆಗೆ ಛಾಪಿಸಲು: anisikeprabha@gmail.com
ಗೋಡೆಬರಹ ವಿಭಾಗ, ಕನ್ನಡಪ್ರಭ, ಎಕ್ಸ್ಪ್ರೆಸ್ ಕಟ್ಟಡ, ನಂ.1, ಕ್ವೀನ್ಸ್ ರಸ್ತೆ, ಬೆಂಗಳೂರು -1.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

