ಅಂಕಣಗಳು

ಅವರಿಗೆ ಪ್ರಚಾರ ನಿಮಗೆ ಪ್ರಸಾರ

Published On :

ದಿ. 11ರ ಕ.ಪ್ರ.ದಲ್ಲಿ ವಿಶ್ವನಾಥ ಸುಂಕನಾಳರವರು ಪದಪದರದಲ್ಲಿ ರಾಜಕಾರಣದ ಬಗ್ಗೆ ಬರೆದ 14 ಅರ್ಥಗಳು ಬಹಳ ಅರ್ಥಗರ್ಭಿತವಾಗಿವೆ. ನಮ್ಮ ದೇಶದಲ್ಲಿ ಇಂತಹ ರಾಜಕಾರಣಿಗಳೇ ಶೇ.90 ಭಾಗ ತುಂಬಿದ್ದಾರೆ.
-ಕುತ್ಪಾಡಿ ಜಯಪ್ರಕಾಶ ಹೆಗ್ಡೆ, ತೀರ್ಥಹಳ್ಳಿ.
ಏನು ಬರೆಯಬೇಕು ಅಂತ ತೋಚುತ್ತಿಲ್ಲ. ಈಗ ತಾನೆ ಒಂದು ರೌಂಡ್ ಅತ್ತು ಪೋಸ್ಟ್ ಆಫೀಸಿಗೆ ಬಂದೆ. ನಾವೇ ಬಾವುಕತೆಯನ್ನು ತಡೆದುಕೊಳ್ಳಲಾಗಲಿಲ್ಲ. ಅಂತಹದರಲ್ಲಿ ಅನುರಾಧ ಗೋರೆ ಯಾವ ರೀತಿ ತಮ್ಮ ಅಳಲನ್ನು ತಡೆದುಕೊಂಡರು ಅನ್ನುವುದನ್ನು ನಂಬಬೇಕು. ಇಂಥ ವಿನಾಯಕ ಗೋರೆ, ಅಬ್ದುಲ್ ಮೊಕಾಶಿ ಇರುವವರೆಗೂ ದೇವತೆಯಂತೆ ತಾಯಂದಿರು ಇದ್ದೇ ಇರುತ್ತಾರೆ ಎಂಬುದಕ್ಕೆ ಬುಧವಾರದ ಭಾವತೀರಯಾನವೇ ಸಾಕ್ಷಿ. ಮಣಿಕಾಂತ್‌ರವರಿಗೆ ನನ್ನ ಹೃದಯಪೂರ್ವಕ ಪ್ರಣಾಮಗಳು. ಹೀಗೆ ನಮ್ಮನ್ನು ಅಳಿಸುತ್ತಲೇ ಇರಿ.
-ಹುಚ್ಚೇರ ಭಾಸ್ಕರ್
ಕೆನ್ನಾಳು, ಪಾಂಡವಪುರ. ಮೊ. 90364 16729

9.02.14ರ ಕನ್ನಡಪ್ರಭದ ತಲೆಬರಹ ಈ ರೀತಿ ಇದೆ. ಜ್ಞಾನಪೀಠ ಪ್ರಶಸ್ತಿ ಒಂದು ನಾನ್‌ಸೆನ್ಸ್. ಅದನ್ನು ಪಡೆದವರು ಮಾತ್ರ ಸಾಹಿತಿಗಳಲ್ಲ. ಈ ಪ್ರಶಸ್ತಿ ಬಂದರೆ ಬಿ.ಪಿ., ಶುಗರ್ ಹೋಗುವುದಿಲ್ಲ. ಕುಂ. ವೀರಭದ್ರಪ್ಪನವರು ಸಾರಸ್ವತ ಲೋಕದಲ್ಲಿ ಕಿಡಿ ಹೊತ್ತಿಸಿದರು. ಈ ಮುಖ ಪುಟದಲ್ಲಿ ಎರಡು ಹೊಸ ಜಗಳ ಇವೆ. ಒಂದು ಸಾಹಿತಿಗಳ ಜಗಳ ಇನ್ನೊಂದು ನಮೋ-ರಾಗ... ನರೇಂದ್ರ ಮೋದಿ, ರಾಹುಲ್‌ಗಾಂಧಿಯವರ ನಡುವೆ ವಾಕ್ಸಮರ. ನರೇಂದ್ರಮೋದಿ, ರಾಹುಲ್ ನಡುವೆ ಪ್ರತಿದಿನ ವಾಗ್ದಾಳಿ ನಡೆದೇ ಇದೆ. ಅವರೊಂದು ಹೇಳೋದು, ಇವರೊಂದು ಹೇಳೋದು ಅವ್ಯಾಹತವಾಗಿ ನಡೆದಿದೆ. ಅವರಿಗೆ ಪ್ರಚಾರ ಬೇಕು ನಿಮಗೆ ಪ್ರಸಾರ ಬೇಕು.
-ಮೊಳಕಾಲ್ಮೂರು ಸುರೇಶ
93 ನಾಮದೇವ ನಿಲಯ, ಸಿದ್ದಾರ್ಥ ಕಾಲೋನಿ, ಗಾಂಧಿನಗರ, ಬಳ್ಳಾರಿ.

ಆರ್‌ಎಸ್‌ಎಸ್ ಕುರಿತ ಕೆಲವು ಸತ್ಯ ಹಾಗೂ ಮಿಥ್ಯೆಗಳು (ಕ.ಪ್ರ. ಫೆ.10, 2014) ಲೇಖನ ದೇಶಪ್ರೇಮಿ ಸಂಘಟನೆಯಾಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ನಮ್ಮ ರಾಜಕಾರಣಿಗಳ ಪಿತೂರಿಯಿಂದಾಗಿ 'ಕೋಮುವಾದಿ' ಎಂಬ ಹಣೆಪಟ್ಟಿ ಹಚ್ಚಿಕೊಳ್ಳುವಂತಾಗಿರುವ ವಿಚಿತ್ರ ಪರಿಸ್ಥಿತಿಯನ್ನು ವಿವರಿಸಿದೆ. ಕಳೆದ ಆರೂವರೆ ದಶಕಗಳಿಂದ ದೇಶವನ್ನಾಳುತ್ತಿರುವ ನಮ್ಮ ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕೋಸ್ಕರ ಆರ್‌ಎಸ್‌ಎಸ್‌ಗೆ ಕಳಂಕ ಹಚ್ಚಿ ದ್ವೇಷ-ಮತ್ಸರದಿಂದ ಈ ಸ್ವಯಂ ಸೇವಕರನ್ನು ನಡೆಸಿಕೊಳ್ಳುತ್ತಿರುವುದು ನಿಜಕ್ಕೂ ದುರಂತ ಕತೆಯಾಗಿದೆ. ಆರ್‌ಎಸ್‌ಎಸ್‌ನ ಸಂಪರ್ಕವಿಲ್ಲದ ನನ್ನಂತಹ ಸಹಸ್ರಾರು ಜನರಿಗೆ ಈ ಲೇಖನ ಓದಿದಾಗ ಅಚ್ಚರಿಯ ಜೊತೆಗೆ ವಿಷಾದ ಉಂಟಾಗುತ್ತದೆ.
-ಚಿರಪ್ರಭ, ನಂಜನಗೂಡು, ಮೊ. 855 3793107

"ಸಂಜಯ ಉವಾಚ" ಧೀಮಂತ ಪತ್ರಕರ್ತ ಕೆ. ಶಾಮರಾಯರ ಆತ್ಮಕಥೆಯನ್ನು ತಾವು ಪ್ರಕಟಿಸುತ್ತಿರುವುದು ತಮ್ಮ ಬಗೆಗಿನ ನನ್ನ ಅಭಿಮಾನ ಇಮ್ಮಡಿಸಿದೆ. ತಾವೆಂದಂತೆ ನಿಜವಾಗಿಯೂ ಅವರೊಬ್ಬ ಧೀಮಂತರೇ ಸರಿ. ಹವ್ಯಾಸೀ ಬರಹಗಾರನಾಗಿದ್ದ ನನಗೆ -ನನ್ನ ಬರವಣಿಗೆಗೆ ನಿಸ್ಪೃಹತೆಯಿಂದ ಉತ್ತೇಜನ ಕೊಟ್ಟಿದ್ದ ಶಾಮರಾಯರು ನಮ್ಮ ಮೆಚ್ಚಿನ ಸಂಪಾದಕರಾಗಿದ್ದರು. ನನ್ನ ಪ್ರತಿಯೊಂದು ಬರಹವನ್ನು ತಾವು ಆಯ್ಕೆ ಮಾಡಿದಾಗ ಪತ್ರ ಮೂಲಕ ಪ್ರೀತಿ-ವಿಶ್ವಾಸಗಳಿಂದ ತಿಳಿಸುತ್ತಿದ್ದರು. ಹಾಗೆಯೇ ಸಂಭಾವನೆ ಚೆಕ್ ಕಳಿಸುವಾಗಲೂ ಮತ್ತೆ ಮತ್ತೆ ಬರೆಯುವಂತೆ ಪ್ರೇರೇಪಿಸುವಂಥ ನುಡಿಗಳಿಂದ ಪತ್ರ ಬರೆಯುತ್ತಿದ್ದರು. ಇದೀಗ ಅವರ ಹುಟ್ಟೂರು ಚಿತ್ರದುರ್ಗದಲ್ಲಿಯೇ ನಾನು ವಾಸ ಮಾಡುತ್ತಿದ್ದೇನೆಂಬ ಸಂಭ್ರಮ ನನ್ನನ್ನು ಪುಳಕಿತನನ್ನಾಗಿಸಿದೆ.
ಅಯ್ಯಣ್ಣನಪೇಟೆ ಪರಿಸರದಲ್ಲೇ ಓಡಾಡುತ್ತಿದ್ದ ಶಾಮರಾಯರು ಓಡಾಡಿ ಬೆಳೆದ ಪರಿಸರವೆಂದು ನನಗೆ ತಿಳಿದಿರಲಿಲ್ಲ. ಸಂಜಯ ಉವಾಚವನ್ನು ಓದಿ ಸಂಗ್ರಹಿಸಿಟ್ಟುಕೊಳ್ಳುತ್ತೇನೆ. ಇಂಥ ಸಹೃದಯ ವ್ಯಕ್ತಿತ್ವವನ್ನು ತಾವು ಓದುಗರಿಗೆ ಪರಿಚಯಿಸ ಹೊರಟಿರುವುದು ತಮ್ಮ ಘನತೆಗೆ -ವ್ಯಕ್ತಿತ್ವಕ್ಕೆ ತಕ್ಕುದಾಗಿದೆ.
-ಚನ್ನಬಸವ ಪುತ್ತೂರು, ಚಿತ್ರದುರ್ಗ, ಮೊ. 94816 89667

ಪ್ರತಿ ಭಾನುವಾರ ಕನ್ನಡಪ್ರಭ ಪತ್ರಿಕೆಯೊಂದಿಗೆ ಬರುವ 'ಖುಷಿ' ಪತ್ರಿಕೆ, ನನಗೆ ಅತ್ಯಂತ ಖುಷಿ ಕೊಡುವ, ಬೇಸರ ಕಳೆಯುವ ಪತ್ರಿಕೆ.
  ಇದರಲ್ಲಿ ಮೊದಲು ನನ್ನನ್ನು ಆಕರ್ಷಿಸುವುದು ಖುಷಿಬಂಧ ಎಂಬ ಪದಬಂಧ. ಪದಬಂಧ ಬಿಡಿಸಲು ತುಂಬಾ ಖುಷಿಯಾಗುತ್ತದೆ.
ಉಳಿದಂತೆ ನನಗೆ ಅತ್ಯಂತ ಖುಷಿ ಕೊಡುವ ಪುಟಗಳೆಂದರೆ
1. ಯಶವಂತ ಸರ್ ದೇಶಪಾಂಡೆಯವರ 'ಖುಲ್ಲಂ ಖುಲ್ಲಾ-ಬೇವು-ಬೆಲ್ಲ!'
2. ಎಸ್.ವಿ. ಪದ್ಮನಾಭರವರ 'ಉತ್ತರಾಧಿಕಾರಿ'ಯ ಪ್ರಶ್ನೋತ್ತರಗಳು.
3. ಪ್ರಧಾನ ಸಂಪಾದಕ ವಿಶ್ವೇಶ್ವರಭಟ್ಟರ ಮೊದಲ ಪುಟ, ಹೀಗೆ ಇನ್ನೂ ಅನೇಕ ಉತ್ತಮ ಮಾಹಿತಿಗಳನ್ನೊದಗಿಸಿ ಖುಷಿ ಪತ್ರಿಕೆ ತುಂಬಾ ಖುಷಿ ಕೊಡುತ್ತದೆ.
-ಸಿ. ಪ್ರಭಾಕರರಾವ್, ದಾವಣಗೆರೆ, 9342 660629


ನಿಮ್ಮ ಅನಿಸಿಕೆಗಳನ್ನು  ಗೋಡೆಗೆ ಛಾಪಿಸಲು:anisikeprabha@gmail.com
ಗೋಡೆಬರಹ ವಿಭಾಗ, ಕನ್ನಡಪ್ರಭ, ಎಕ್ಸ್‌ಪ್ರೆಸ್ ಕಟ್ಟಡ, ನಂ.1, ಕ್ವೀನ್ಸ್ ರಸ್ತೆ, ಬೆಂಗಳೂರು -1.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.