ಬನ್ನಿ ಈಗ ಹೂಡಿಕೆ ಮಾಡಬಹುದು
ಮೋದಿ ನೇತೃತ್ವದ ಹೊಸ ಸರ್ಕಾರ ಬರುತ್ತದೆ ಎಂದು ಗೊತ್ತಾಗುತ್ತಿದ್ದಂತೆಯೇ ಷೇರು ಮಾರುಕಟ್ಟೆಯಲ್ಲಿ ಹೊಸ ಉತ್ಸಾಹ ತುಂಬಿಕೊಂಡಿದೆ. ಅದಕ್ಕೆ ಪೂರಕವಾಗಿ ಬಾಂಬೆ ಷೇರು ಮಾರುಕಟ್ಟೆ ಸೂಚ್ಯಂಕ (ಬಿಎಸ್ಇ) ನಭಕ್ಕೆ ನಗೆದಿದೆ. ಈ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಲ್ಲಿ ಮತ್ತೊಮ್ಮೆ ಆಲೋಚನೆಯನ್ನು ಬಡಿದೆಬ್ಬಿಸಿದೆ. ಅದೇನೆಂದರೆ ಹೇಗಿದ್ದರೂ ಮಾರುಕಟ್ಟೆ ಈಗ ತೇಜಿಯಲ್ಲಿದೆ. ಹೂಡಿಕೆ ಮಾಡಿ ಕೈಸುಟ್ಟುಕೊಂಡವರು ಮತ್ತೊಮ್ಮೆ ನಾವು ಹೂಡಿಕೆ ಮಾಡಬಹುದೇ, ಅಂಥ ವಿಶ್ವಾಸ ಮತ್ತೆ ಮರುಕಳಿಸಿದೆಯೇ ಎಂಬ ಆಲೋಚನೆ ಈಗ ಮಾರುಕಟ್ಟೆ ಈಗ ಮೂಡಿದೆ. ಸದ್ಯ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದವರು ಹೇಗೆ ಲಾಭ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ಯೋಚನೆ ನಡೆಸುತ್ತಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ದೊಡ್ಡ ಹೂಡಿಕೆದಾರರಷ್ಟೇ ಸಣ್ಣ ಹೂಡಿಕೆದಾರರಿಗೂ ಹೆಚ್ಚಿನ ಮಹತ್ವವಿದೆ. ಕಳೆದ ಕೆಲ ದಿನಗಳಿಂದ ಉಂಟಾಗುತ್ತಿರುವ ಬದಲಾವಣೆಯಿಂದ ಹೆಚ್ಚಿನ ಲಾಭ ಮಾಡಿಕೊಂಡವರು ಅವರೇ. ದೀರ್ಘ ಕಾಲಿಕ ಹೂಡಿಕೆಯತ್ತ ಗಮನ ಕೊಡುವವರು ತಮ್ಮ ಹೂಡಿಕೆಯಲ್ಲಿ ಪಾರಮ್ಯವನ್ನು ಮುಂದುವರಿಸಿಕೊಂಡು ಹೋಗಲಿದ್ದಾರೆ. ಈ ಬಗ್ಗೆ ಆಶಾಭಾವನೆಯ ಮಾತುಗಳನ್ನಾಡುವ ಐಎಲ್ ಆ್ಯಂಡ್ ಎಫ್ಎಸ್ನ ವೈಭವ್ ಕಪೂರ್ 'ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಉತ್ತಮ ದಿನಗಳು ಕಂಡುಬರುತ್ತಿವೆ' ಎಂದಿದ್ದಾರೆ. ದೇಶದಲ್ಲಿರುವ ಮೂಲ ಹೂಡಿಕೆ ಸೌಲಭ್ಯಗಳು ವಿಶ್ವದ ಷೇರು ಮಾರುಕಟ್ಟೆಗಳಿಗಿಂತ ಉತ್ತಮವಾಗಿದೆ ಎನ್ನುತ್ತಾರೆ ವಿಶ್ಲೇಷಕ ಶಂಕರ ಶರ್ಮಾ. ಶೀಘ್ರವೇ ಮಂಡನೆಯಾಗಲಿರುವ ಕೇಂದ್ರ ಮುಂಗಡ ಪತ್ರ ಮಾರುಕಟ್ಟೆಯಲ್ಲಿ ಹೂಡಿಕೆದಾರರು ಇರಿಸಿರುವ ವಿಶ್ವಾಸವನ್ನು ಮತ್ತಷ್ಟು ಇಮ್ಮಡಿಸಲಿವೆ ಎನ್ನುತ್ತಾರೆ ಹಣಕಾಸು ವಿಶ್ಲೇಷಕರು. ಷೇರು ಮಾರುಕಟ್ಟೆ ತೇಜಿಯಲ್ಲಿದೆ. ಹೀಗಾಗಿ ಯಾವ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಉತ್ತಮ ಲಾಭ ಪಡೆದುಕೊಳ್ಳಬಹುದು, ಯಾವ ರೀತಿಯ ಸುರಕ್ಷತೆ ಪಡೆದುಕೊಳ್ಳಬಹುದು ಎಂಬುದನ್ನು ಗಮನಿಸಬೇಕಾಗುತ್ತದೆ. ಸಣ್ಣ ಪ್ರಮಾಣದ ಹೂಡಿಕೆಗಳೇ ಹೆಚ್ಚಿನ ರಕ್ಷಣೆ ನೀಡಬಹುದೇ ಎಂಬ ಪ್ರಶ್ನೆಗಳು ಪದೇ ಪದೆ ಉಂಟಾಗುತ್ತದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವುದು ಖಾತರಿಯಾಗುತ್ತಿರುವಂತೆ ಹೆಚ್ಚಿನ ಲಾಭ ಕಂಡದ್ದು ದೊಡ್ಡ ಪ್ರಮಾಣದ ಹೂಡಿಕೆಗಳೇ. ಅದರ ನಂತರವೇ ಮಧ್ಯಮ ಮತ್ತು ಸಣ್ಣ ಪ್ರಮಾಣದ ಹೂಡಿಕೆಗಳು ಹೆಚ್ಚಿನ ಪ್ರಮಾಣದಲ್ಲಿ ಲಾಭ ಕಂಡವು ಎನ್ನುವುದು ಗಮನಾರ್ಹ. ಕಳೆದ ವರ್ಷದ ಸೆಪ್ಟೆಂಬರ್ 13ರ ನಂತರ ಸಣ್ಣ ಮತ್ತು ಮಧ್ಯಮ ಪ್ರಮಾಣದ ಹೂಡಿಕೆಗಳೇ ಹೆಚ್ಚಿನ ಲಾಭದ ಮುಖ ಕಂಡವು. ಇದುವೇ ಮುಂದಿನ ದಿನಗಳಲ್ಲಿಯೂ ಮುಂದುವರಿಯವ ಸಾಧ್ಯತೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

