ಅಂಚೆ ಇಲಾಖೆಗೊಂದು ಪತ್ರ
ಜಗತ್ತಿನಲ್ಲಿ ಅಂಚೆ ಸೇವೆಯ ಜಾಲ ಭಾರತದಲ್ಲಿಯೇ ದೊಡ್ಡದಿದ್ದು ಇಲ್ಲಿ 1.55 ಲಕ್ಷಕ್ಕೂ ಅಧಿಕ ಅಂಚೆ ಕಚೇರಿಗಳು ಅಸ್ತಿತ್ವದಲ್ಲಿವೆ. ಸ್ವಾತಂತ್ರ್ಯ ಪೂರ್ವದ ಏಳು ಪಟ್ಟು ಪೋಸ್ಟ್ ಆಫೀಸುಗಳು ಸದ್ಯ ಅಂಚೆ ಮತ್ತು ಅಲ್ಪ ಉಳಿತಾಯಗಳ ಸೇವೆಯಲ್ಲಿ ನಿರತವಾಗಿವೆ. ಸದ್ಯ ಜಗತ್ತಿನ ಇತರ ದೇಶಗಳಲ್ಲಿ ಅಂಚೆ ನಶಿಸಿ ಹೋಗುತ್ತಿದ್ದಂತೆ ಇಲ್ಲಿಯೂ ಕೂಡ ಅಂಚೆ ಜಾಲ ಅದೇ ದಾರಿ ಹಿಡಿಯುವಂತಿದೆ. ಈ ಸ್ಥಿತಿಯನ್ನು ಸ್ವಲ್ಪ ಮಟ್ಟಿಗಾದರೂ ಮುಂದೂಡುವ ಉದ್ದೇಶದಿಂದ ಈಗ 'ಕ್ಟಿಡಡಿಝ್ಟಠಜಜ'ಎಂಬ ನವೀನ ವ್ಯವಸ್ಥೆ ಪ್ರಾರಂಭಿಸಲು ಇಲಾಖೆ ಮುಂದಾಗಿದೆ. ಸದ್ಯ ಶಾಪ್ಪೀ ಪ್ರಾರಂಭಿಸಿದ ಈ ಪೋಸ್ಟ್ ಆಫೀಸುಗಳು ಹೆಡ್ಪೋಸ್ಟ್ ಆಫೀಸು ಮತ್ತು ಅನ್ಯ ಕೆಲವು ಉನ್ನತ ದರ್ಜೆಯ ಆಫೀಸುಗಳಲ್ಲಿ ಪ್ರಾರಂಭವಾಗಿದೆ. ಇಲ್ಲಿ ದಿನ ನಿತ್ಯ ಜನತೆ ಉಪಯೋಗಿಸುತ್ತಿದ್ದ ಸೋಲಾರ್ ಲ್ಯಾಂಪ್, ನೀರು ಶುದ್ಧಗೊಳಿಸಲು ಉಪಯೋಗಿಸಲಾಗುವ ವಾಟರ್ ಪ್ಯೂರಿಫೈಯರ್, ನೀರಿನ ಬಾಟಲಿಗಳು, ಆಟಿಗೆಗಳು,ಸ್ಕೂಲ್ ಸ್ಟೇಷನರಿ, ಗಣ್ಯರ ಚಿತ್ರವಿರುವ ಕವರ್ ಮುಂತಾದವುಗಳ ಮಾರಾಟಕ್ಕೂ ಅನುವು ಮಾಡಿಕೊಡಲಾಗುವುದು. ಆದರೆ ಈ ರೀತಿಯ ಅಂಗಡಿ ಮುಂಗಟ್ಟು ವ್ಯವಹಾರ ಅಂಚೆ ಕಚೇರಿಗಳಲ್ಲಿ ಹೇಗೆ ಸಾಧ್ಯ? ಇಲ್ಲಿ ಈ ಶಾಪ್ಪೀಯಲ್ಲಿ ಅಧಿಕಾರ ಹಸ್ತಾಂತರಿಸುವಾಗ ಸಮಗ್ರ ಲೆಕ್ಕಕ್ಕೆ ಇದ್ದ ವಸ್ತುಗಳ ಸ್ಥಿತಿ-ಗತಿ ಕೂಡ ಪರಿಶೀಲಿಸಿ ಚಾರ್ಜ್ ಬದಲಿಸಬೇಕಲ್ಲವೇ?
ಅಂಚೆ ಇಲಾಖೆಯೂ ಉನ್ನತ ತಂತ್ರಜ್ಞಾನವನ್ನು ತನ್ನ ಸಾರ್ವಜನಿಕ ಸೇವೆಯ ನಿರ್ವಹಣೆಯಲ್ಲಿ ನಿಗಾ ಇಡಲು, ಬಳಸಲು, ಸಿದ್ಧವಿರುವ ಸಮಾಚಾರ ಕೆಲವು ದಿನಗಳಿಂದ ಪತ್ರಿಕೆಗಳಲ್ಲಿ ಮೂಡಿ ಬಂದಿದೆ. ಅಂಚೆ ಇಲಾಖೆಯಲ್ಲಿನ ವಿವಿಧ ಸ್ಥರದಲ್ಲಿ ಸಲ್ಲಿಸಿದ ಸೇವೆಯ ಹಿನ್ನೆಲೆಯಲ್ಲಿ ಓದುಗರ ಗಮನಕ್ಕೆ ಮತ್ತು ಇಲಾಖೆಯ ಹಿರಿ-ಕಿರಿಯ ಅಧಿಕಾರಿಗಳ ಗಮನಕ್ಕೆ ಈ ಕೆಲವು ಅನಿಸಿಕೆ ತರಲು ಬಯಸುತ್ತೇನೆ. ತಾನು ಸದ್ಯದ ಸಾರ್ವಜನಿಕ ಸೇವಾ ಕಾರ್ಯವನ್ನು ವ್ಯವಸ್ಥಿತ ರೀತಿಯಲ್ಲಿ ನಿರ್ವಹಿಸುತ್ತಿರುವೆ ಎಂದು ಅರಿತ ನಂತರ ಅನ್ಯ ಸಾರ್ವಜನಿಕರ ಸೇವೆ ಪೂರೈಕೆಯಲ್ಲಿ ಅಂಚೆ ತೊಡಗಲಿ.
ಅಲ್ಲಲ್ಲಿ ಪಟ್ಟಣಗಳಲ್ಲಿ ಸ್ಥಾಪಿಸಿದ ಪತ್ರದ ಪೆಟ್ಟಿಗೆಗಳಲ್ಲಿ ಪತ್ರ ಬೀಳುವುದೇ ಅಪರೂಪ ಆಗಿದೆ. ಏಕೆಂದರೆ ಕೆಲವು ಸಮಯದಿಂದ ಅಲ್ಲಲ್ಲಿ ಬಡಾವಣೆಗಳಲ್ಲಿ ಸ್ಥಾಪಿಸಿದ ಪತ್ರದ ಪೆಟ್ಟಿಗೆಗಳ ಸದ್ಯದ ಸ್ಥಿತಿಯೇ ಇದಕ್ಕೆ ಪ್ರಮುಖ ಕಾರಣ. ಈ ಪೆಟ್ಟಿಗೆಗಳನ್ನು ಸುಮಾರು ದಿನಗಳಿಂದ -ಸಮಯದಿಂದ, ದಿನಕ್ಕೆ ಒಂದೇ ಬಾರಿ ತೆರೆಯುವ ಪ್ರಕ್ರಿಯೆಯನ್ನು ಇಲಾಖೆ ಜಾರಿಗೆ ತಂದಿದೆ. ಇರಲಿ. ಆದರೆ ಈ ಪೆಟ್ಟಿಗೆಗಳು ಕೇವಲ ಕೆಂಪು ಬಣ್ಣವನ್ನಷ್ಟೇ ಬಳಿದುಕೊಂಡು ನಿಂತಿವೆ. ಇವುಗಳ ಮೇಲೆ ಬರೆಯಲೇಬೇಕಾದ, ಪೆಟ್ಟಿಗೆ ತೆರೆಯುವ ವೇಳೆ, ರವಿವಾರ ಮತ್ತು ಸೂಟಿಯ ದಿವಸ ಹೆಸರು ಬರೆದಿರುವುದೇ ಇಲ್ಲ. ಇದರಿಂದ ಸಾರ್ವಜನಿಕರು ತಮ್ಮ ಪತ್ರಗಳನ್ನು ಸಮೀಪದ ಪೋಸ್ಟ್ ಆಫೀಸಿಗೆ ಹೋಗಿ ಅಲ್ಲಿಯ ಪೆಟ್ಟಿಗೆಯಲ್ಲಿ ಹಾಕುತ್ತಿದ್ದಾರೆ. ಇದೆಲ್ಲ ವ್ಯವಸ್ಥಿತವಾಗಿ ನಡೆದ ಪಕ್ಷದಲ್ಲಿ ಅಂಚೆಗೆ ಬೇಡಿಕೆ ಅಧಿಕವಾಗುವುದರಲ್ಲಿ ಎರಡು ಮಾತಿಲ್ಲ.
ಎರಡನೆಯದಾಗಿ ಸದ್ಯ ಪೋಸ್ಟ್ ಆಫೀಸಿನ ಮೂಲಕ ಮಾರಾಟವಾಗುತ್ತಿರುವ ಅಂತರ್ದೇಶೀಯ ಪತ್ರ ಅದರ ಮೂಲ ಉದ್ದೇಶಕ್ಕೆ ತಕ್ಕಂತಿಲ್ಲ. ಅದನ್ನು ರವಾನಿಸುವಾಗ ಎಲ್ಲಾ ನಾಲ್ಕು ಬದಿಯಲ್ಲಿ ಅಂಟಿಸಬೇಕಾಗಿದ್ದು ಸದ್ಯ ಅದರ ದುರುಪಯೋಗ ತಡೆಯಲು ಅಸಾಧ್ಯವಾಗಿದೆ. ಮೊದಲಿನಂತಹ ವಿನ್ಯಾಸ ಬೇಕು. ಪೋಸ್ಟ್ ಆಫೀಸುಗಳಲ್ಲಿ ದೊರೆಯುವ/ಉಪಯೋಗದಲ್ಲಿರುವ ಮನಿ ಆರ್ಡರ್ ಫಾರ್ಮ್, ಠೇವಣಿ ಇಡುವಾಗ ಉಪಯೋಗಿಸಬೇಕಾದ ಫಾರ್ಮ್, ರಿಜಿಸ್ಟರ್ ಪರತ ಪಾವತಿ ಫಾರ್ಮುಗಳಲ್ಲಿ ಹಣದ ಮೊತ್ತ ಬರೆಯಲು ಮತ್ತು ಅನ್ಯ ಮಾಹಿತಿ ಬರೆಯಲು ಸುಯೋಗ್ಯ ಸ್ಥಳವಿಲ್ಲ. ಅಧಿಕಾರಿಗಳು ಇತ್ತ ಲಕ್ಷ್ಯಗೊಡುವರೇ?
ಮೂರನೆಯದಾಗಿ ಈಗ ನೋಡಲ್ ಆಫೀಸ್ ಅಂತಾ ಎಲ್ಲಿಯೋ ಇರುವ ಸಾರ್ಟಿಂಗ್ ಆಫೀಸನ್ನು ಹೆಸರಿಸಿ ಅದರ ಪರಿಸರದಲ್ಲಿದ್ದ ಎಲ್ಲಾ ಆಫೀಸುಗಳ ಪತ್ರದ ಪೆಟ್ಟಿಗೆಗಳಲ್ಲಿ ಶೇಖರಣೆಯಾದ ಪತ್ರಗಳನ್ನು ಈ ನೋಡಲ್ ಆಫೀಸಿಗೆ ರವಾನಿಸಿ ಅಲ್ಲಿ ಅವುಗಳ ಸಾರ್ಟಿಂಗ್ ನಡೆಸಲಾಗುತ್ತಿದೆ. ಇದರಿಂದಾಗಿ ಅದೇ ಡಿಲಿವರಿ ಆಫೀಸಿನ ಹಾದಿಯಲ್ಲಿದ್ದ ಮನೆಗೆ ತಲುಪಬೇಕಾದ ಪತ್ರ ಅಲ್ಲಲ್ಲಿ ತಿರುಗಾಡಿ ಪಡೆಯಬೇಕಾದವನ ಕೈ ಸೇರುತ್ತಿದೆ. ಪ್ರತಿಯೊಂದು ಅಂಚೆ ಕಚೇರಿಯಲ್ಲಿಯೂ ತಕ್ಕಮಟ್ಟಿನ ವಿಂಗಡಣೆ ಮೊದಲಿನಂತೆ ನಡೆದರೆ ಸೂಕ್ತ. ನನ್ನ ಮನೆಯ ಎದುರಿನ ಪತ್ರದ ಪೆಟ್ಟಿಗೆಯಲ್ಲಿ ನನಗೇ ಮರಳಿ ತಲುಪುವಂತೆ ವಿಳಾಸ ಬರೆದು ಹಾಕಿದ ಪತ್ರ ನನಗೆ ಕೈ ಸೇರಲು ನಾಲ್ಕು ದಿವಸ ತೆಗೆದುಕೊಂಡಿವೆ. ಸಂಬಂಧಿಸಿದ ಅಧಿಕಾರಿ ಈ ಪೆಟ್ಟಿಗೆ ಸಮಯಕ್ಕೆ ಸರಿಯಾಗಿ ತೆಗೆಯಲಾಗುತ್ತದೆಯೋ ಇಲ್ಲವೋ ಎಂಬ ಬಗ್ಗೆ ಟೆಸ್ಟ್ ಕಾರ್ಡ್, ಟೆಸ್ಟ್ ಲೆಟರ್ ಟ್ರಯಲ್ ಕಾರ್ಡ್ ಹಾಕಿ ಖಚಿತಪಡಿಸಿಕೊಳ್ಳುವ ಪದ್ಧತಿಯನ್ನು ಇಲಾಖೆ ಕೈ ಬಿಟ್ಟಂತೆ ಕಾಣುತ್ತಿದೆ.
ಇನ್ನು ಈ ಪತ್ರಗಳ ಮೇಲೆ ಪೋಸ್ಟಿಂಗ್ ಆಫೀಸಿನ ದಿನಾಂಕ, ಮುದ್ರೆ ಮತ್ತು ಬಟವಾಡೆ ಆಫೀಸಿನ ದಿನಾಂಕ ಮುದ್ರೆ ಒತ್ತಿರುವುದೂ ಅಪರೂಪ. ಈ ಮುದ್ರೆ ಒತ್ತಿದ್ದೇ ಆದರೆ ಇವುಗಳಲ್ಲಿ ಆಫೀಸಿನ ಹೆಸರು ಮತ್ತು ದಿನಾಂಕ ಎಂದು ಎಸಗುತ್ತಿರುವ ದಿವ್ಯ ನಿರ್ಲಕ್ಷ್ಯಕ್ಕೆ ಕಡಿವಾಣ ಅಸಾಧ್ಯ. ಈ ಮುಂತಾದ ಸಮಸ್ಯೆಗಳನ್ನು ಸುಯೋಗ್ಯ ರೀತಿಯಲ್ಲಿ ನಿಭಾಯಿಸಿದರೆ ಅಂಚೆಯ ಬೇಡಿಕೆ ಅಧಿಕವಾಗುವುದರಲ್ಲಿ ಸಂಶಯವಿಲ್ಲ. ರೀತಿಯಲ್ಲಿ ಕೋರಿಯರ್ ವ್ಯವಸ್ಥೆಗೆ ಪ್ರತಿಯಾದ ಸೂಕ್ತ ವ್ಯವಸ್ಥೆ ಇದರಿಂದ ಮಾತ್ರ ಸಾಧ್ಯ.
-ದೀಕ್ಷಿತ. ಯ.ಚಿ., ಧಾರವಾಡ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

