ಅಭಿಮಾನಿ ಬಂಧನ: ಬೇಸರಗೊಂಡ ಅಫ್ರಿದಿ ಪ್ರಧಾನಿ ಮೋದಿಗೆ ಹೇಳಿದ್ದೇನು?

ಅಸ್ಸಾಂನಲ್ಲಿ ನಡೆದ ಕ್ರಿಕೆಟ್ ಪಂದ್ಯವೊಂದರ ವೀಕ್ಷಣೆಗೆ ಆಗಮಿಸಿದ್ದ ಅಫ್ರಿದಿ ಅಭಿಮಾನಿಯನ್ನು ಬಂಧನಕ್ಕೊಳಪಡಿಸಿರುವುದಕ್ಕೆ ಶಾಹಿದ್ ಅಫ್ರಿದಿ ಅವರು ತೀವ್ರ ಅಸಮಾಧಾನ ಹಾಗೂ ಬೇಸರವನ್ನು ವ್ಯಕ್ತಪಡಿಸಿದ್ದಾರೆ...
ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ
Updated on: 

ಕರಾಚಿ: ಅಸ್ಸಾಂನಲ್ಲಿ ನಡೆದ ಕ್ರಿಕೆಟ್ ಪಂದ್ಯವೊಂದರ ವೀಕ್ಷಣೆಗೆ ಆಗಮಿಸಿದ್ದ ಅಫ್ರಿದಿ ಅಭಿಮಾನಿಯನ್ನು ಬಂಧನಕ್ಕೊಳಪಡಿಸಿರುವುದಕ್ಕೆ ಶಾಹಿದ್ ಅಫ್ರಿದಿ ಅವರು ತೀವ್ರ ಅಸಮಾಧಾನ ಹಾಗೂ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಅಭಿಮಾನಿಯ ಬಂಧನ ಕುರಿತಂತೆ ಅಫ್ರಿದಿ ಪ್ರಧಾನಿ ಮೋದಿಯವರಿಗೆ ಮನವಿಯೊಂದನ್ನು ಮಾಡಿಕೊಂಡಿದ್ದು, ಪ್ರಕರಣ ಸಂಬಂಧ ಗಮನ ಹರಿಸಿ ಅಭಿಮಾನಿಯನ್ನು ಬಿಡುಗಡೆ ಮಾಡುವಂತೆ ತಿಳಿಸಿದ್ದಾರೆಂದು ವರದಿಗಳು ತಿಳಿಸಿವೆ.

ಈ ರೀತಿಯ ಘಟನೆಗಳು ನಡೆಯುತ್ತಿರುವುದು ನಿಜಕ್ಕೂ ನಾಚಿಕೆಗೇಡಿತನವಾದದ್ದು. ಕ್ರಿಕೆಟ್ ನಲ್ಲಿ ರಾಜಕೀಯ ಮಾಡುತ್ತಿರುವುದು ಬೇಸರವನ್ನುಂಟು ಮಾಡಿದೆ. ಇಂತಹ ಘಟನೆಗಳು ಅಸಹಿಷ್ಣುತೆಗೆ ದಾರಿ ಮಾಡಿಕೊಡಲಿದ್ದು, ಈ ರೀತಿಯ ಘಟನೆಗಳನ್ನು ಖಂಡಿಸಬೇಕಿದೆ. ಭಾರತೀಯರಿಗೆ ಪಾಕಿಸ್ತಾನದಲ್ಲಿ ಅಭಿಮಾನಿಗಳಿರುವಂತೆಯೇ ಪಾಕಿಸ್ತಾನ ಆಟಗಾರರಿರಗೂ ಭಾರತದಲ್ಲಿ ಅಭಿಮಾನಿಗಳಿರುತ್ತಾರೆ. ಕ್ರಿಕೆಟ್ ಅಭಿಮಾನಿಗಳನ್ನು ಕೇವಲ ಕ್ರಿಕೆಟ್ ಪ್ರೇಮಿಗಳಂತೆಯೇ ಕಾಣಬೇಕಿದ್ದು, ರಾಜಕೀಯದಿಂದ ಕ್ರಿಕೆಟ್ ನ್ನು ದೂರವಿಡಬೇಕಿದೆ ಎಂದು ಅಫ್ರಿದಿ ಹೇಳಿಕೊಂಡಿದ್ದಾರೆ.

ಅಸ್ಸಾಂನಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯ ವೀಕ್ಷಣೆಗೆ ಆಫ್ರಿಡಿ ಅಭಿಮಾನಿಯೊಬ್ಬ ಆಗಮಿಸಿದ್ದ. ಅಫ್ರಿದಿ ತೊಡುವ ಜೆರ್ಸಿಯಂತಹದ್ದೇ ಬಣ್ಣ ಮತ್ತು ಸಂಖ್ಯೆಯ ಜೆರ್ಸಿ ತೊಟ್ಟು ಪಂದ್ಯವನ್ನು ವೀಕ್ಷಣೆ ಮಾಡುತ್ತಿದ್ದ. ಇದನ್ನು ಗಮನಿಸಿದ್ದ ಕೆಲವರು ಪೊಲೀಸರಿಗೆ ದೂರು ನೀಡಿದ್ದರು. ದೂರಿನಂತೆ ಪೊಲೀಸರು ಅಫ್ರಿದಿ ಅಭಿಮಾನಿಯನ್ನು ಬಂಧನಕ್ಕೊಳಪಡಿಸಿದ್ದರು. ಇದಕ್ಕೆ ಅಫ್ರಿದಿ ತೀವ್ರ ಖಂಡನೆಯನ್ನು ವ್ಯಕ್ತಪಡಿಸಿದ್ದಾರೆ.

ಕಳೆದ ಫೆಬ್ರವರಿ ತಿಂಗಳಿನಲ್ಲಿ ಪಾಕಿಸ್ತಾನದಲ್ಲಿದ್ದ ವಿರಾಟ್ ಕೊಹ್ಲಿ ಅವರ ಅಭಿಮಾನಿಯನ್ನು ಪಾಕಿಸ್ತಾನ ಪೊಲೀಸರು ಬಂಧನಕ್ಕೊಳಪಡಿಸಿದ್ದರು. ಭಾರತದ ತ್ರಿವರ್ಣ ಧ್ವಜ ಹಾರಿಸಿದ್ದಕ್ಕೆ ಆತನನ್ನು ಬಂಧನಕ್ಕೊಳಪಡಿಸಿ 10 ವರ್ಷ ಜೈಲು ಶಿಕ್ಷೆಯನ್ನು ನೀಡಲಾಗಿತ್ತು. ಜಾಮೀನು ನೀಡಿದ ಬಳಿಕ ಅತನನ್ನು ಬಿಡುಗಡೆ ಮಾಡಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com