ಐಸಿಸಿಯಲ್ಲಿ ಸ್ಥಾನವಿಲ್ಲ, ಆದರೆ ಕ್ರಿಕೆಟ್ ಆಸ್ಟ್ರೇಲಿಯಾ ವರ್ಷದ ತಂಡಕ್ಕೆ ಕೊಹ್ಲಿ ನಾಯಕ!

Published On :
ಸಿಡ್ನಿ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಪ್ರಕಟಿಸಿದ ವರ್ಷದ ಟೆಸ್ಟ್ ತಂಡದಲ್ಲಿ ಕನಿಷ್ಠ ಸ್ಥಾನ ಪಡೆಯಲೂ ವಿಫಲವಾಗಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ಆಸ್ಟ್ರೇಲಿಯಾ(ಸಿಎ) ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ನಾಯಕರಾಗಿ ಆಯ್ಕೆಯಾಗಿದ್ದಾರೆ.
2016ರ ಜನವರಿಯಿಂದ ಡಿಸೆಂಬರ್ 20ರವರೆಗಿನ ಟೆಸ್ಟ್ ಪಂದ್ಯಗಳ ನಿರ್ವಹಣೆಯನ್ನು ಆಧರಿಸಿ ಪ್ರಕಟಿಸಲಾಗಿರುವ ತಂಡದಲ್ಲಿ ಕೇವಲ ಇಬ್ಬರು ಆಸ್ಟ್ರೇಲಿಯಾ ಆಟಗಾರರು ಮಾತ್ರವೇ ಸ್ಥಾನ ಪಡೆದಿದ್ದಾರೆ.
ಐಸಿಸಿ ಪ್ರಕಟಿಸಿದ ತಂಡದಲ್ಲಿ ಅಚ್ಚರಿ ಎನ್ನುವಂತೆ ವಿಶ್ವ ಟೆಸ್ಟ್ ಕ್ರಿಕೆಟ್ ನಂಬರ್ 1 ಬ್ಯಾಟ್ಸ್ ಮನ್ ಸ್ಟೀವನ್ ಸ್ಮಿತ್ ಹಾಗೂ ನಂಬರ್ 2 ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಹಾಗಾಗಿ ನಮ್ಮ ಆಯ್ಕೆಯ ವರ್ಷದ ಟೆಸ್ಟ್ ಟೀಂ ಅನ್ನು ಪ್ರಕಟಿಸುವ ನಿರ್ಧಾರ ಮಾಡಿದೆವು ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಮಾರ್ಟಿನ್ ಸ್ಮಿತ್ ಹೇಳಿದ್ದಾರೆ.
ಕ್ರಿಕೆಟ್ ಆಸ್ಟ್ರೇಲಿಯಾ ವರ್ಷದ ತಂಡ
ಅಜರ್ ಅಲಿ(ಪಾಕಿಸ್ತಾನ), ಜೋ ರೂಟ್(ಇಂಗ್ಲೆಂಡ್) ಸ್ಟೀವನ್ ಸ್ಮಿತ್(ಆಸ್ಟ್ರೇಲಿಯಾ) ವಿರಾಟ್ ಕೊಹ್ಲಿ(ನಾಯಕ ಭಾರತ) ಬೆನ್ ಸ್ಟೋಕ್ಸ್(ಇಂಗ್ಲೆಂಡ್) ಜಾನಿ ಬೇರ್ ಸ್ಟೋ(ಇಂಗ್ಲೆಂಡ್) ಕ್ವಿಂಟನ್ ಡಿ ಕಾಕ್(ದಕ್ಷಿಣ ಆಫ್ರಿಕಾ) ಆರ್ ಅಶ್ವಿನ್(ಭಾರತ) ರಂಗನಾ ಹೆರಾತ್(ಶ್ರೀಲಂಕಾ) ಮಿಚೆಲ್ ಸ್ಟಾರ್ಕ್(ಆಸ್ಟ್ರೇಲಿಯಾ) ಕಗಿಸೋ ರಬಡಾ(ದಕ್ಷಿಣ ಆಫ್ರಿಕಾ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್ಆಸ್ಟ್ರೇಲಿಯಾಟೀಂ ಇಂಡಿಯಾAustraliaTeam IndiaVirat Kohliವಿರಾಟ್ ಕೊಹ್ಲಿTest Team of 2016ಟೆಸ್ಟ್ ಟೀಂ 2016
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


