ಭಾರತ-ಪಾಕ್ ಕ್ರಿಕೆಟ್ ಅಭಿಮಾನಿಗಳನ್ನು ಒಗ್ಗೂಡಿಸಿದ ಫೇಸ್‌ಬುಕ್

ಮ್ಮ ದೇಶದ ಕ್ರಿಕೆಟ್ ತಂಡಕ್ಕೆ ಬೆಂಬಲ ಸೂಚಿಸಿ ಫೇಸ್‌ಬುಕ್ ಬಳಕೆದಾರರು ಪ್ರೊಫೈಲ್ ಫೋಟೋಗಳನ್ನು ಬದಲಿಸುವ ಅವಕಾಶವನ್ನು...
ಭಾರತ  -ಪಾಕ್  ಕ್ರಿಕೆಟ್ ಪ್ರೇಮಿಗಳು
ಭಾರತ -ಪಾಕ್ ಕ್ರಿಕೆಟ್ ಪ್ರೇಮಿಗಳು
Updated on: 
ನವದೆಹಲಿ: ಕ್ರಿಕೆಟ್ ಪ್ರೇಮಿಗಳು ಮಾರ್ಚ್ 19ರಂದು ನಡೆಯಲಿರುವ ಭಾರತ- ಪಾಕ್ ನಡುವಿನ ಪಂದ್ಯವನ್ನು ಎದುರು ನೋಡುತ್ತಿದ್ದಾರೆ. ಐಸಿಸಿ ಟಿ 20 ವಿಶ್ವಕಪ್ ಪಂದ್ಯದಲ್ಲಿ ಉಭಯ ರಾಷ್ಟ್ರಗಳಿಗೂ ಮಹತ್ವದ ಪಂದ್ಯ ಇದಾಗಿದ್ದು, ಜಗತ್ತೇ ಈ ಕ್ರಿಕೆಟ್ ಕದನವನ್ನು ನೋಡಲು ಕಾಯುತ್ತಿದೆ.
ಇತ್ತ ಫೇಸ್‌ಬುಕ್‌ನಲ್ಲಿಯೂ ಐಸಿಸಿ ಟಿ 20 ವಿಶ್ವಕಪ್‌ನ ಹವಾ ಭಾರೀ ಜೋರಾಗಿದೆ. ತಮ್ಮ ದೇಶದ ಕ್ರಿಕೆಟ್ ತಂಡಕ್ಕೆ ಬೆಂಬಲ ಸೂಚಿಸಿ ಫೇಸ್‌ಬುಕ್ ಬಳಕೆದಾರರು ಪ್ರೊಫೈಲ್ ಫೋಟೋಗಳನ್ನು ಬದಲಿಸುವ ಅವಕಾಶವನ್ನು ಫೇಸ್‌ಬುಕ್ ಕಲ್ಪಿಸಿದೆ. ಈಗಾಗಲೇ ಜಗತ್ತಿನಾದ್ಯಂತವಿರುವ ಫೇಸ್‌ಬುಕ್ ಬಳಕೆದಾರರು ತಮ್ಮ ದೇಶದ ತಂಡಕ್ಕೆ ಬೆಂಬಲ ಸೂಚಿಸಿ ಪ್ರೊಫೈಲ್ ಫೋಟೋ ಬದಲಿಸಿದ್ದಾರೆ.
ಇದು ಮಾಮೂಲಿ ವಿಷಯ ಎಂದೆನಿಸಬಹುದು. ಆದರೆ ಭಾರತ ಮತ್ತು ಪಾಕ್ ಕ್ರಿಕೆಟ್ ಅಭಿಮಾನಿಗಳು ಇಲ್ಲಿ ದೇಶಗಳ ನಡುವಿನ ವೈಷಮ್ಯವನ್ನು ಬದಿಗೆ ತಳ್ಳಿ ಕ್ರೀಡಾ ಮನೋಭಾವ ಮೆರೆದಿದ್ದಾರೆ. ಅಂದರೆ ಪಾಕಿಸ್ತಾನದ ಪ್ರಜೆಗಳು ಭಾರತಕ್ಕೆ ಬೆಂಬಲ ನೀಡುವ ಪ್ರೊಫೈಲ್ ಫೋಟೋಗಳನ್ನು ಹಾಕಿ ಮತ್ತು ಭಾರತದ ಪ್ರಜೆಗಳು ಪಾಕಿಸ್ತಾನಕ್ಕೆ ಬೆಂಬಲ ನೀಡುವ ಪ್ರೊಫೈಲ್ ಫೋಟೋಗಳನ್ನು ಹಾಕಿ ನಾವು ಶಾಂತಿಯನ್ನು ಬಯಸುತ್ತೇವೆ ಎಂಬ ಸಂದೇಶವನ್ನು ಸಾರಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಕ್ರಿಕೆಟ್ ನಡೆಯುತ್ತಿದೆ, ಯುದ್ಧವಲ್ಲ. ಈ ಆಟಗಳು ನಮ್ಮನ್ನು ಹತ್ತಿರವಾಗಿಸಿದ್ದು, ನಾವು ಶಾಂತಿಯನ್ನು ಬಯಸುತ್ತೇವೆ ಮತ್ತು ಇದುವೇ ಉಗ್ರರಿಗೆ ನೀಡುವ ಉತ್ತರ ಎಂದು ಕ್ರಿಕೆಟ್ ಅಭಿಮಾನಿಗಳು ಹೇಳಿದ್ದಾರೆ.
ಈ ರೀತಿ ಪ್ರೊಫೈಲ್ ಫೋಟೋಗಳನ್ನು ಬದಲಿಸಿ #ProfileforPeace ಎಂಬ ಹ್ಯಾಶ್ ಟ್ಯಾಗ್ ಸಾಮಾಜಿಕ ತಾಣದಲ್ಲಿ ಟ್ರೆಂಡಿಂಗ್ ಆಗುತ್ತಿದೆ.
ಉಭಯ ರಾಷ್ಟ್ರಗಳ ಕ್ರಿಕೆಟ್ ಅಭಿಮಾನವನ್ನು ನೋಡಿ ಫೇಸ್‌ಬುಕ್ ಸಿಇಒ ಜೂಕರ್‌ಬರ್ಗ್ ಕೂಡಾ ಸಂತೋಷ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com