ಟ್ವಿಟರ್‌ನಲ್ಲಿ ವಿರಾಟ್ ಕೊಹ್ಲಿಯನ್ನು ಕೆಣಕಿದ ಮಿಶೆಲ್ ಜಾನ್ಸನ್

ಕೊಹ್ಲಿಯ ಈ ಮಾತನ್ನೇ ಅಣಕಿಸಿದ ಜಾನ್ಸನ್, ಕಳೆದ ವರ್ಷ ವಿಶ್ವಕಪ್ ಸೆಮಿಫೈನಲ್ ನಲ್ಲಿ ನಡೆದದ್ದೇನು? ಎಂದು ಧ್ವನಿಸುವಂತೆ ಟ್ವೀಟ್..
ವಿರಾಟ್ ಕೊಹ್ಲಿ -ಮಿಶೆಲ್ ಜಾನ್ಸನ್
ವಿರಾಟ್ ಕೊಹ್ಲಿ -ಮಿಶೆಲ್ ಜಾನ್ಸನ್
ನವದೆಹಲಿ: ಟಿ 20 ವಿಶ್ವಕಪ್ ನಲ್ಲಿ  ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಭಾನುವಾರ ನಡೆಯಲಿರುವ ನಿರ್ಣಾಯಕ ಪಂದ್ಯದ ಬಗ್ಗೆ ಎಲ್ಲರೂ ಕಣ್ಣು ನೆಟ್ಟಿರುವಾಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿರುವ ಆಸ್ಟ್ರೇಲಿಯಾ ಎಡಗೈ ವೇಗಿ ಮಿಶೆಲ್ ಜಾನ್ಸನ್ ಟ್ವಿಟರ್‌ನಲ್ಲಿ ವಿರಾಟ್ ಕೊಹ್ಲಿಯನ್ನು ಕೆಣಕಿದ್ದಾರೆ.
ಭಾನುವಾರ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧ ಪಂದ್ಯದ ಬಗ್ಗೆ ಮಾಧ್ಯಮದವರಲ್ಲಿ ಮಾತನಾಡಿದ ಕೊಹ್ಲಿ, ಆಸ್ಟ್ರೇಲಿಯಾ ನಡುವಿನ ಪಂದ್ಯ ಯಾವತ್ತೂ ನನಗೆ ಪ್ರೇರಣೆ ನೀಡಿದೆ ಎಂದು ಹೇಳಿದ್ದರು.
ಕೊಹ್ಲಿಯ ಈ ಮಾತನ್ನೇ ಅಣಕಿಸಿದ ಜಾನ್ಸನ್,  ಕಳೆದ ವರ್ಷ ವಿಶ್ವಕಪ್ ಸೆಮಿಫೈನಲ್ ನಲ್ಲಿ  ನಡೆದದ್ದೇನು? ಎಂದು ಧ್ವನಿಸುವಂತೆ ಟ್ವೀಟ್ ಮಾಡಿದ್ದಾರೆ. ಕಳೆದ ವರ್ಷ ನಡೆದ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಪರಾಭವಗೊಂಡಿತ್ತು.
ಈ ಟ್ವೀಟ್ ನಂತರ ಇನ್ನೊಂದು ಟ್ವೀಟ್‌ನಲ್ಲಿ ಟಾಪ್ 5 ಬ್ಯಾಟ್ಸ್‌ಮೆನ್‌ಗಳ ಪಟ್ಟಿ ಮಾಡಿದ ಜಾನ್ಸನ್, ಆ ಪಟ್ಟಿಯಲ್ಲಿ ಧೋನಿ, ಎಬಿ ಡಿವಿಲಿಯರ್ಸ್, ರೂಟ್ ಮತ್ತು ವಿಲಿಯಂಸನ್ ಎಂದು ಬರೆದಿದ್ದರು. ಅದಕ್ಕೆ ಆ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಥವಾ ಆಮ್ಲ ಯಾಕೆ ಇಲ್ಲ ಎಂದು ಒಬ್ಬರು ಪ್ರತಿಕ್ರಿಯಿಸಿದಾಗ, ಆಮ್ಲ ನನ್ನು ಹೇಗೆ ಮರೆಯಲಾಗುತ್ತದೆ? ಎಂದು ಜಾನ್ಸನ್ ಉತ್ತರಿಸಿದ್ದರು. 
ಈ ಟ್ವೀಟ್‌ಗಳಲ್ಲಿ ಜಾನ್ಸನ್ ವಿರಾಟ್ ಕೊಹ್ಲಿಯನ್ನು ಉದ್ದೇಶ ಪೂರ್ವಕವಾಗಿ ಕೆಣಕ್ಕಿದ್ದು,  ವಿರಾಟ್ ಇದಕ್ಕೆ ಕ್ರೀಸ್ ನಲ್ಲಿ ಯಾವ ರೀತಿ ಉತ್ತರಿಸುತ್ತಾರೆ ಎಂದು  ಕಾದು ನೋಡಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com