ಟೀಂ ಇಂಡಿಯಾ ಮನವಿ ಮೇರೆಗೆ ಬದಲಾಯ್ತು ಮೊಹಾಲಿ ಪಿಚ್

ಆಸಿಸ್ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ರೋಚಕ ವಿಜಯ ಸಾಧಿಸಿದ ಟೀಂ ಇಂಡಿಯಾ ಪಂದ್ಯದ ಆರಂಭಕ್ಕೂ ಮುನ್ನ ಪಿಚ್ ಬದಲಾವಣೆ..
ಮೊಹಾಲಿ ಕ್ರಿಕೆಟ್ ಮೈದಾನ (ಸಂಗ್ರಹ ಚಿತ್ರ)
ಮೊಹಾಲಿ ಕ್ರಿಕೆಟ್ ಮೈದಾನ (ಸಂಗ್ರಹ ಚಿತ್ರ)
Updated on: 

ಮೊಹಾಲಿ: ಆಸಿಸ್ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ರೋಚಕ ವಿಜಯ ಸಾಧಿಸಿದ ಟೀಂ ಇಂಡಿಯಾ ಪಂದ್ಯದ ಆರಂಭಕ್ಕೂ ಮುನ್ನ ಪಿಚ್ ಬದಲಾವಣೆಗೆ ಬಿಸಿಸಿಐ ಬಳಿ ಮನವಿ ಮಾಡಿದ್ದ  ವಿಚಾರ ಇದೀಗ ಬೆಳಕಿಗೆ ಬಂದಿದೆ.

ಪಾಕಿಸ್ತಾನ, ಆಸ್ಟ್ರೇಲಿಯಾ ಪಂದ್ಯದ ಬಳಿಕ ಭಾರತಕ್ಕೆ ಈ ಪಿಚ್‍ನ ಬಗ್ಗೆ ಅಸಮಾಧಾನ ಉಂಟಾಗಿದ್ದ ಹಿನ್ನಲೆಯಲ್ಲಿ, ಸ್ಪಿನ್ ಪಿಚ್ ತಯಾರಿಸುವಂತೆ ಟೀಂ ಇಂಡಿಯಾ ಆಟಗಾರರು ಮನವಿ  ಮಾಡಿದ್ದರು. ಕಳೆದ ಮಾರ್ಚ್ 25ರಂದು ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವೆ ಇಲ್ಲಿ ಮ್ಯಾಚ್ ನಡೆದಿತ್ತು. ಆಗ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ತಂಡ ಆಸ್ಟ್ರೇಲಿಯಾ 4 ವಿಕೆಟ್  ನಷ್ಟಕ್ಕೆ 193 ರನ್ ಗಳಿಸಿತ್ತು, ನಂತರ ಪಾಕಿಸ್ತಾನ 8 ವಿಕೆಟ್ ಕಳೆದುಕೊಂಡು 172ರನ್ ಗಳಿಸಿತ್ತು.

ಐಸಿಸಿ ಈ ಪಂದ್ಯಕ್ಕೆ ಪಿಚ್ ಹೇಗೆ ಸಿದ್ದಪಡಿಸಿತ್ತೋ ಅದೇ ರೀತಿಯಾಗಿ ಇಂದು ನಡೆಯಲಿರುವ ಭಾರತ ಆಸ್ಟ್ರೇಲಿಯಾ ಪಂದ್ಯಕ್ಕೂ ಸಿದ್ದಪಡಿಸಬೇಕಿತ್ತು. ಆದರೆ  ಬಿಸಿಸಿಐನ ಮನವಿ ಮೇರೆಗೆ  ಸ್ಪಿನ್ನರ್ ಗಳಿಗೆ ಸಹಾಕಾರಿಯಾಗುವಂತೆ ಪಿಚ್ ತಯಾರಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಈ ಘಟನೆಯ ಮೂಲಕ ಐಸಿಸಿ ನಿರ್ಧಾರಗಳಲ್ಲಿ ಬಿಸಿಸಿಐ ಪಾತ್ರ ಹೆಚ್ಚಿರುತ್ತದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದ್ದು, ಟೀಂ ಇಂಡಿಯಾದ ಮ್ಯಾನೇಜ್‍ಮೆಂಟ್ ಮತ್ತು ಬಿಸಿಸಿಐ ಮನವಿಗೆ  ಮಣಿದು ಐಸಿಸಿ ಮೊಹಾಲಿ ಪಿಚ್‍ನಲ್ಲಿ ಬದಲಾವಣೆ ಮಾಡಿದೆ ಎನ್ನಲಾಗಿದೆ. ಐಸಿಸಿ ತನ್ನ ಯಾವುದೇ ಕ್ರೀಡಾಕೂಟಕ್ಕೆ ತಾನು ನಿಯೋಜಿಸಿದ ಕ್ಯೂರೇಟರ್‍ನಿಂದ ಪಿಚ್‍ನ್ನು ತಯಾರಿಸುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com