

ವಿಶಾಖಪಟ್ಟಣ: ಕಿಂಗ್ಸ್ ಇಲೆವೆನ್ ತಂಡದ ನಾಯಕ ಮುರಳಿ ವಿಜಯ್ ಹಾಗೂ ಸಾಹಾರ ಜತೆಯಾಟ ಮುಂಬೈ ಇಂಡಿಯನ್ಸ್ ವಿರುದ್ಧ ತಂಡದ ಗೆಲುವಿಗೆ ಕಾರಣವಾಗಿದೆ.
ಡಾ.ವೈಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟ್ ಮಾಡಿದ ಮುಂಬೈ ತಂಡ ನಿಗದಿತ ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 124 ರನ್ ಗಳ ಅಲ್ಪ ಮೊತ್ತ ಗಳಿಸಿತು. 125 ರನ್ ಗಳ ಗುರಿ ಬೆನ್ನಟ್ಟಿದ ಕಿಂಗ್ಸ್ ಪರ ಮುರಳಿ ವಿಜಯ್ ಹಾಗೂ ವೃದ್ಧಿಮಾನ್ ಸಾಹಾರ ಅದ್ಭುತ ಆಟ ತಂಡದ ಗೆಲುವಿಗೆ ಕಾರಣವಾಯಿತು. ಕಿಂಗ್ಸ್ ತಂಡ ಇನ್ನು ಮೂರು ಓವರ್ ಗಳು ಇರುವಂತೆ 3 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಿ ಜಯದ ನಗೆ ಬೀರಿತು.
ಕಿಂಗ್ಸ್ ಪರ ಮುರಳಿ ವಿಜಯ್ ಅಜೇಯ 54, ಆಶೀಮ್ ಆಮ್ಲಾ 0, ವೃದ್ಧಿಮಾನ್ ಸಾಹಾ 56, ಗುರ್ಕೀರತ್ ಸಿಂಗ್ 6 ರನ್ ಗಳಿಸಿದ್ದಾರೆ.
ಮುಂಬೈ ಪರ ಮೆಕ್ಲೆನಗನ್ 2, ಹಾಗೂ ಸೌಥಿ 1 ವಿಕೆಟ್ ಪಡೆದಿದ್ದಾರೆ.
ಮುಂಬೈ ಪರ ರೋಹಿತ್ ಶರ್ಮಾ 15, ರಾಣಾ 25, ಬಟ್ಲರ್ 9, ಪೋಲ್ಲಾರ್ಡ್ 27, ಪಾಂಡ್ಯಾ 19, ಹರ್ಭಜನ್ ಸಿಂಗ್ ಅಜೇಯ 14 ರನ್ ಗಳಿಸಿದ್ದಾರೆ.
ಕಿಂಗ್ಸ್ ಪರ ಸ್ಟೈನಿಸ್ 4, ಸಂದೀಪ್ ಶರ್ಮಾ ಹಾಗೂ ಮೋಹಿತ್ ಶರ್ಮಾ ತಲಾ 2 ವಿಕೆಟ್ ಪಡೆದಿದ್ದಾರೆ.