ಸಿಡ್ನಿ: ಕ್ರಿಕೆಟ್ ನಲ್ಲಿ ಬಲಿಷ್ಠ ತಂಡ ಎಂದು ಕರೆಸಿಕೊಳ್ಳುತ್ತಿದ್ದ ಆಸ್ಟ್ರೇಲಿಯಾ ಸದ್ಯ ಸತತ ಸೋಲುಗಳಿಂದ ಕಂಗೆಟ್ಟಿದ್ದು ತಂಡಕ್ಕೆ ಚೇತರಿಕೆ ನೀಡಲು ಮುಖ್ಯ ಕೋಚ್ ಆಗಿ ರಿಕಿ ಪಾಂಟಿಂಗ್ ಆಯ್ಕೆಯಾಗುವ ಸಾಧ್ಯತೆ ಇದೆ.
ಆಸ್ಟ್ರೇಲಿಯಾ ತಂಡದ ಮುಖ್ಯ ಆಯ್ಕೆಗಾರ ರಾಡ್ ಮಾರ್ಷ್ ಆಫ್ರಿಕಾ ವಿರುದ್ಧ 2ನೇ ಟೆಸ್ಟ್ ಪಂದ್ಯದ ಹೀನಾಯ ಸೋಲಿನ ಹಿನ್ನೆಲೆ ರಾಜಿನಾಮೆ ನೀಡಿದ್ದು ಪ್ರಸ್ತುತ ಮುಖ್ಯ ಕೋಚ್ ಆಗಿರುವ ಲೆಹ್ಮನ್ ಪದತ್ಯಾಗಕ್ಕೂ ಭಾರೀ ಒತ್ತಾಯ ಕೇಳಿಬಂದಿದೆ.
ಸದ್ಯ ರಿಕಿ ಪಾಂಟಿಂಗ್ ಮುಂಬೈ ಇಂಡಿಯನ್ಸ್ ಐಪಿಎಲ್ ತಂಡದ ಹೊಣೆಗಾರಿಕೆಯಿಂದ ಹಿಂದೆ ಸರಿದಿದ್ದು ಮತ್ತು ಆಸ್ಟ್ರೇಲಿಯಾ ಕೋಚ್ ಹುದ್ದೆ ವಹಿಸಿಕೊಳ್ಳಲು ಸಿದ್ಧ ಎಂದು ಹೇಳಿರುವುದು ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ.