3ನೇ ಟೆಸ್ಟ್: ಮೊದಲ ಇನಿಂಗ್ಸ್‌ ನಲ್ಲಿ 8 ವಿಕೆಟ್‌ ನಷ್ಟಕ್ಕೆ 268 ರನ್‌ ಗಳಿಸಿದ ಇಂಗ್ಲೆಂಡ್‌

ಇಂಗ್ಲೆಂಡ್-ಟೀಂ ಇಂಡಿಯಾ ನಡುವಿನ 3ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ 8 ವಿಕೆಟ್ ನಷ್ಟಕ್ಕೆ 268 ರನ್ ಗಳಿಸಿದೆ.
ಜಾನಿ ಬೇರ್ ಸ್ಟೋ
ಜಾನಿ ಬೇರ್ ಸ್ಟೋ
Updated on: 
ಮೊಹಾಲಿ: ಇಂಗ್ಲೆಂಡ್-ಟೀಂ ಇಂಡಿಯಾ ನಡುವಿನ 3ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ 8 ವಿಕೆಟ್ ನಷ್ಟಕ್ಕೆ 268 ರನ್ ಗಳಿಸಿದೆ.
ಮೊಹಾಲಿಯ ಬಿಂದ್ರಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 8 ವಿಕೆಟ್‌ ನಷ್ಟಕ್ಕೆ (90 ಓವರ್‌ಗಳಲ್ಲಿ) 268 ರನ್‌ ಗಳಿಸಿದೆ.
ಇಂಗ್ಲೆಂಡ್ ಪರ ಅಲೆಸ್ಟೈರ್ ಕುಕ್ 27, ಹಸೀಬ್ ಹಮೀದ್ 9, ಜೋ ರೂಟ್ 15, ಮೊಯಿನ್ ಅಲಿ 16, ಬೆನ್ ಸ್ಟೋಕ್ಸ್ 29, ಜಾಸ್ ಬಟ್ಲರ್ 43, ಜಾನಿ ಬೇರ್ ಸ್ಟೋ 89, ಹಾಗೂ ಕ್ರಿಸ್ ವೋಕ್ಸ್ 25 ರನ್ ಗಳಿಸಿದ್ದಾರೆ.
ಟೀಂ ಇಂಡಿಯಾ ಪರ ರವೀಂದ್ರ ಜಡೇಜಾ 2, ಮೊಹಮ್ಮದ್ ಶಮಿ 1, ಉಮೇಶ್ ಯಾದವ್ 2, ಜಯಂತ್ ಯಾದವ್ 2, ಆರ್ ಅಶ್ವಿನ್ 1 ವಿಕೆಟ್ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com