3ನೇ ಟೆಸ್ಟ್: ಸೋಲಿನ ಸುಳಿಯಲ್ಲಿ ನ್ಯೂಜಿಲ್ಯಾಂಡ್

ಟೀಂ ಇಂಡಿಯಾ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಸೋಲಿನ ಸುಳಿಗೆ ಸಿಲುಕಿದೆ...
ಭಾರತ
ಭಾರತ
ಇಂಧೋರ್: ಟೀಂ ಇಂಡಿಯಾ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಸೋಲಿನ ಸುಳಿಗೆ ಸಿಲುಕಿದೆ. 
ಭಾರತ ನೀಡಿದ 475 ರನ್ ಗಳ ಬೃಹತ್ ಸವಾಲು ಬೆನ್ನಟ್ಟಿದ ನ್ಯೂಜಿಲ್ಯಾಂಡ್ 138 ರನ್ ಗಳಿಗೆ ಪ್ರಮುಖ 9 ವಿಕೆಟ್ ಕಳೆದುಕೊಂಡು ವೈಟ್ ವಾಶ್ ಭೀತಿ ಎದುರಿಸುತ್ತಿದೆ. ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ಗೆ ಆರ್ ಅಶ್ವಿನ್ ಪ್ರಮುಖ 4 ವಿಕೆಟ್ ಪಡೆಯುವ ಮೂಲಕ ಆಘಾತ ನೀಡಿದರು. 
ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸದ್ಯ ಎರಡು ಪಂದ್ಯಗಳನ್ನು ಗೆದ್ದಿರುವ ಭಾರತ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಇನ್ನು ವೈಟ್‌ವಾಶ್‌ ನಿಂದ ತಪ್ಪಿಸಿಕೊಳ್ಳಲು ನ್ಯೂಜಿಲ್ಯಾಂಡ್ ಗಿದ್ದ ಅವಕಾಶವನ್ನು ಕೈಚೆಲ್ಲಿದೆ. 
ನ್ಯೂಜಿಲ್ಯಾಂಡ್ ಪರ ಲ್ಯಾಥಮ್ 6, ಗುಪ್ಟಿಲ್ 29, ವಿಲಿಯಮ್ಸನ್ 27, ಟೇಲರ್ 32, ರೊಂಚಿ 15 ಹಾಗೂ ನೀಶಂ 0, ಸ್ಯಾಟ್ನರ್ 14 ರನ್ ಗಳಿಸಿ ಔಟಾಗಿದ್ದಾರೆ. ವಾಟ್ಲಿಂಗ್ ಅಜೇಯ 9 ಹಾಗೂ ಪಟೇಲ್ 0 ರನ್ ಗಳಿಸಿ ಆಡುತ್ತಿದ್ದಾರೆ. 
ಭಾರತ ಪರ ಆರ್ ಅಶ್ವಿನ್ 4, ಜಡೇಜಾ 2, ಉಮೇಶ್ ಯಾದವ್ 1 ವಿಕೆಟ್ ಪಡೆದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com