ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಇಂದು ತಮ್ಮ 44ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು ಇಂದು ಪುಣೆ ವಿರುದ್ಧದ ಪಂದ್ಯವನ್ನು ಗೆದ್ದು ಸಚಿನ್ಗೆ ಮುಂಬೈ ಗೆಲುವಿನ ಉಡುಗೊರೆ ನೀಡುತ್ತಾ ಎಂದುಕಾದು ನೋಡಬೇಕಿದೆ.
ಸಚಿನ್ ಹುಟ್ಟುಹಬ್ಬ ಹಿನ್ನಲೆ ಮುಂಬೈನ ವಾಂಖೆಡೆ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ಮಾಜಿ ನಾಯಕ ಸಲಹೆಗಾರ ಸಚಿನ್ ಅವರಿಗಾಗಿ ತಂಡ ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಿದೆ.
ಪುಣೆ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಸಂಭ್ರಮಾಚರಣೆ ನಡೆಯಲಿದ್ದು ಪಂದ್ಯ ವೀಕ್ಷಣೆಗೆ ಸಚಿನ್ ಆಗಮಿಸುವುದಾಗಿ ತಿಳಿಸಿದ್ದಾರೆ. ಸತತ 6 ಗೆಲುವು ಕಂಡಿರುವ ಮುಂಬೈ ಸಚಿನ್ಗೆ ಗೆಲುವಿನ ಉಡುಗೊರೆ ನೀಡಲು ಕಾತರಿಸುತ್ತಿದೆ.