4ನೇ ಏಕದಿನ ಪಂದ್ಯ: ಲಂಕಾಗೆ 376 ರನ್‍ಗಳ ಬೃಹತ್ ಗುರಿ ನೀಡಿದ ಟೀಂ ಇಂಡಿಯಾ

ಶ್ರೀಲಂಕಾ ವಿರುದ್ಧದ ನಾಲ್ಕನೇ ಪಂದ್ಯದಲ್ಲಿ ಟೀಂ ಇಂಡಿಯಾ 5 ವಿಕೆಟ್ ನಷ್ಟಕ್ಕೆ 375 ರನ್‍ಗಳ ಬೃಹತ್ ಮೊತ್ತ ಕಲೆ ಹಾಕಿದೆ...
ಎಂಎಸ್ ಧೋನಿ
ಎಂಎಸ್ ಧೋನಿ
Updated on: 
ಕೊಲಂಬೋ: ಶ್ರೀಲಂಕಾ ವಿರುದ್ಧದ ನಾಲ್ಕನೇ ಪಂದ್ಯದಲ್ಲಿ ಟೀಂ ಇಂಡಿಯಾ 5 ವಿಕೆಟ್ ನಷ್ಟಕ್ಕೆ 375 ರನ್‍ಗಳ ಬೃಹತ್ ಮೊತ್ತ ಕಲೆ ಹಾಕಿದೆ. 
ಕೊಲಂಬೋದ ಆರ್ ಪ್ರೇಮದಾಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಆರಂಭದದಿಂದಲೇ ಅಬ್ಬರದ ಬ್ಯಾಟಿಂಗ್ ಮಾಡಿತು. ಆರಂಭಿಕರಾದ ಶಿಖರ್ ಧವನ್ 4 ರನ್ ಗಳಿಗೆ ಔಟಾದರು. 
ನಂತರ ರೋಹಿತ್ ಶರ್ಮಾ(104) ಮತ್ತು ವಿರಾಟ್ ಕೊಹ್ಲಿ(131) ಅವರ ಶತಕದ ನೆರವಿನಿಂದ ಟೀಂ ಇಂಡಿಯಾ 375 ರನ್ ಗಳನ್ನು ಪೇರಿಸಲು ಸಾಧ್ಯವಾಯಿತು. ಇದರೊಂದಿಗೆ ಲಂಕಾಗೆ 376 ರನ್ ಗಳ ಬೃಹತ್ ಮೊತ್ತದ ಗುರಿ ನೀಡಿದೆ. 
ಇನ್ನು ಟೀಂ ಇಂಡಿಯಾದ ಪರ ಹಾರ್ದಿಕ್ ಪಾಂಡ್ಯ 19, ಕೆಎಲ್ ರಾಹುಲ್ 7, ಮನೀಷ್ ಪಾಂಡೆ ಅಜೇಯ 50 ಮತ್ತು ಎಂಎಸ್ ಧೋನಿ ಅಜೇಯ 49 ರನ್ ಸಿಡಿಸಿದ್ದಾರೆ. 
ಶ್ರೀಲಂಕಾ ಪರ ಮ್ಯಾಥ್ಯೂಸ್ 2, ಮಲಿಂಗಾ, ಫರ್ನಾಂಡೋ ಮತ್ತು ಧನಂಜಯ್ ತಲಾ 1 ವಿಕೆಟ್ ಪಡೆದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com