ದುರಂತ: ಸಾಬರಮತಿ ನದಿಯಲ್ಲಿ ಕ್ರಿಕೆಟಿಗ ಜಸ್ ಪ್ರೀತ್ ಬುಮ್ರಾ ತಾತಾನ ಮೃತದೇಹ ಪತ್ತೆ

ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಕ್ರಿಕೆಟಿಗ ಜಸ್ ಪ್ರೀತ್ ಬುಮ್ರಾ ಅವರ ತಾತನ ಮೃತದೇಹ ಗುಜರಾತ್ ನ ಸಾಬರಮತಿ ನದಿಯಲ್ಲಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಬುಮ್ರಾ ಮತ್ತು ಅವರ ತಾತಾ ಸಂತೋಕ್ ಸಿಂಗ್
ಬುಮ್ರಾ ಮತ್ತು ಅವರ ತಾತಾ ಸಂತೋಕ್ ಸಿಂಗ್
ಅಹ್ಮದಾಬಾದ್: ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಕ್ರಿಕೆಟಿಗ ಜಸ್ ಪ್ರೀತ್ ಬುಮ್ರಾ ಅವರ ತಾತನ ಮೃತದೇಹ ಗುಜರಾತ್ ನ ಸಾಬರಮತಿ ನದಿಯಲ್ಲಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಕಳೆದ ಶುಕ್ರವಾರದಿಂದ ನಾಪತ್ತೆಯಾಗಿದ್ದ ಬುಮ್ರಾ ಅವರ ತಾತ ಸಂತೋಕ್ ಸಿಂಗ್ ಅವರ ಮೃತದೇಹ ಗಾಂಧಿ ಸೇತುವೆ ಹಾಗೂ ದಧೀಚಿ ಸೇತುವೆಯ ನಡುವೆ ಪತ್ತೆಯಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳು  ಮೃತದೇಹವನ್ನು ಇಂದು ಮೇಲೆತ್ತಿದ್ದಾರೆ. 84 ವರ್ಷದ ಸಂತೋಕ್ ಸಿಂಗ್ ಬುಮ್ರಾರನ್ನು ಭೇಟಿಯಾಗಲು ಅಹ್ಮದಾಬಾದ್ ಗೆ ತೆರಳಿದ್ದು, ಶುಕ್ರವಾರದಿಂದ ಅವರು ನಾಪತ್ತೆಯಾಗಿದ್ದರು ಎನ್ನಲಾಗಿದೆ.
ಇದ್ಕಕೂ ಮೊದಲು ಸಂತೋಕ್ ಸಿಂಗ್ ಡಿಸೆಂಬರ್ 1ರಂದು ವಸ್ತ್ರಾಪುರ್ ನ ತನ್ನ ಪುತ್ರಿಯ ಮನೆಯಲ್ಲಿ ಕಾಣಿಸಿಕೊಂಡಿದ್ದರು. ಡಿಸೆಂಬರ್ 5ರಂದು ಜಸ್ಪ್ರೀತ್ ರ ಹುಟ್ಟುಹಬ್ಬದ ದಿನ ಅವರನ್ನು ಭೇಟಿಯಾಗಲು ಸಿಂಗ್ ಬಯಸಿದ್ದರು.  ಆದರೆ ಜಸ್ಪ್ರೀತ್ ರನ್ನು ಭೇಟಿಯಾಗಲು ಅವರಿಗೆ ಸಾಧ್ಯವಾಗಿರಲಿಲ್ಲ. ಡಿಸೆಂಬರ್ 8ರಂದು ಸಿಂಗ್ ತನ್ನ ಪುತ್ರ ಬಲ್ವೀಂದರ್ ಸಿಂಗ್ ಗೆ ಕರೆ ಮಾಡಿದ್ದು, ಅನಾರೋಗ್ಯ ಪೀಡಿತ ಪತ್ನಿಯನ್ನು ಭೇಟಿಯಾಗಲು ಹೊರಡುವುದಾಗಿ ಹೇಳಿದ್ದರು  ಎಂದು ಕುಟುಂಬಸ್ಥರು ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com