ಭಾರತದ ಬಿಗುವಿನ ಬೌಲಿಂಗ್ ಎದುರು ದಿಢೀರ್ ಕುಸಿತ ಕಂಡ ಆಸಿಸ್ ಮಧ್ಯಮ ಕ್ರಮಾಂಕ!

ಮಹಾರಾಷ್ಟ್ರದ ಪುಣೆಯ ಕ್ರಿಕೆಟ್ ಮೈದಾನದಲ್ಲಿ ಗುರುವಾರದಿಂದ ಆರಂಭವಾಗಿರುವ ಬಾರ್ಡರ್-ಗವಾಸ್ಕರ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಕ್ರಿಕ್ ಇನ್ಫೋ ಚಿತ್ರ
ಕ್ರಿಕ್ ಇನ್ಫೋ ಚಿತ್ರ
Updated on: 

ಪುಣೆ: ಮಹಾರಾಷ್ಟ್ರದ ಪುಣೆಯ ಕ್ರಿಕೆಟ್ ಮೈದಾನದಲ್ಲಿ ಗುರುವಾರದಿಂದ ಆರಂಭವಾಗಿರುವ ಬಾರ್ಡರ್-ಗವಾಸ್ಕರ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಭಾರತದ ಪ್ರಭಾವಿ ಸ್ಪಿನ್ ಹಾಗೂ ಆಸ್ಟ್ರೇಲಿಯಾ ತಂಡದ ಪ್ರಬಲ ಬ್ಯಾಟಿಂಗ್ ನಡುವಿನ ಸ್ಪರ್ಧೆ ಎಂದೇ ಬಿಂಬಿತವಾಗಿರುವ ಈ ಸರಣಿ ಭಾರಿ ನಿರೀಕ್ಷೆ ಹುಟ್ಟಿಸಿದೆ. ಅದರಂತೆ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಭಾರತೀಯ ಸ್ಪಿನ್ವರ್  ಗಳ ವಿರುದ್ಧ ಸಮಬಲದ ಸ್ಪರ್ಧೆ ಒಡ್ಡಿದ್ದಾರೆ. ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಆಸಿಸ್ ಪರ ಎಂಟಿ ರೆನ್ಶಾ ಹಾಗೂ ವಾರ್ನರ್ ಆರಂಭಿಕರಾಗಿ ಕಣಕ್ಕಿಳಿದರು. ನಿಧಾನಗತಿಯ ಬ್ಯಾಟಿಂಗ್ ಆರಂಭಿಸಿದರೂ ಬಳಿಕ ಸ್ಪಿನ್ನರ್ ಗಳ ವಿರುದ್ಧ  ಉತ್ತಮವಾಗಿ ಆಡಿದ ಈ ಜೋಡಿ 82 ರನ್ ಗಳ ಜೊತೆಯಾಟವಾಡಿತು.

ಈ ವೇಳೆ 38 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ವಾರ್ನರ್ ಯಾದವ್ ಬೌಲಿಂಗ್ ನಲ್ಲಿ ಕ್ಲೀನ್ ಬೋಲ್ಡ್ ಆದರು. ಇದಾದ ಕೆಲ ಹೊತ್ತಿನಲ್ಲೇ ರೆನ್ ಶಾ ಕೂಡ ಗಾಯಗೊಂಡು ಹೊರ ನಡೆದರು. ಬಳಿಕ ಬಂದ ನಾಯಕ ಸ್ಮಿತ್ 27 ರನ್  ಗಳಿಸಿ ಅಶ್ವಿನ್ ಬೌಲಿಂಗ್ ನಲ್ಲಿ ಕೊಹ್ಲಿಗೆ ಕ್ಯಾಚಿತ್ತು ಹೊರ ನಡೆದರು. ಈ ಹಂತದಲ್ಲಿ ಜೊತೆಯಾದ ಮಾರ್ಷ್ (16 ರನ್) ಮತ್ತು ಹ್ಯಾಂಡ್ಸ್ ಕಾಂಬ್  (22 ರನ್) ಉತ್ತಮ ಆಟವಾಡುವ ಮುನ್ಸೂಚನೆ ನೀಡಿದರಾದರೂ ಬಳಿಕ  ವಿಫಲರಾದರು. 16 ರನ್ ಗಳಿಸಿದ್ದ ಮಾರ್ಷ್ ಯಾದವ್ ಬೌಲಿಂಗ್ ನಲ್ಲಿ ಔಟ್ ಆದರೆ, ಬಳಿಕ 22 ರನ್ ಗಳಿಸಿದ್ದ ಹ್ಯಾಂಡ್ಸ್ ಕಾಂಬ್ ಕೂಡ ಜಡೇಜಾ ಬೌಲಿಂಗ್ ನಲ್ಲಿ ಎಲ್ ಬಿ ಬಲೆಗೆ ಬಿದ್ದರು. ಆ ಮೂಲಕ ಪ್ರಸ್ತುತ ಭಾರತೀಯ ಬೌಲರ್  ಗಳು ಆಸಿಸ್ ಎದುರು ಮೈಲುಗೈ ಸಾಧಿಸಿದ್ದು, ಮಧ್ಯಮ ಕ್ರಮಾಂಕದ ದಿಢೀರ್ ಕುಸಿತದೊಂದಿಗೆ ಆಸಿಸ್ ತಂಡ ಹಿನ್ನಡೆಯನುಭವಿಸಿದೆ.

ಇತ್ತೀಚಿನ ವರದಿಗಳು ಬಂದಾಗ ಆಸ್ಟ್ರೇಲಿಯಾ ತಂಡ 4 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿದೆ. ಮಾರ್ಷ್ (2 ರನ್) ಹಾಗೂ ರೆನ್ ಶಾ (37 ರನ್) ಕ್ರೀಸ್ ಕಾಯ್ದುಕೊಂಡು ಆಟವಾಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com