ಕ್ರಿಕೆಟ್

ತಂಡದಿಂದ ಕೈಬಿಟ್ಟು ಹೋಗದಂತೆ ಧೋನಿ ಹಲವು ಬಾರಿ ನನ್ನನ್ನು ಕಾಪಾಡಿದ್ದರು: ಕೊಹ್ಲಿ

ತಂಡದಿಂದ ಕೈಬಿಟ್ಟು ಹೋಗದಂತೆ ಧೋನಿ ಹಲವು ಬಾರಿ ನನ್ನನ್ನು ಕಾಪಾಡಿದ್ದರು: ಕೊಹ್ಲಿ
ಸಂಗ್ರಹ ಚಿತ್ರ
Published On :

ನವದೆಹಲಿ: ಕೇವಲ ನಾಯಕರಾಗಿ ಅಷ್ಟೇ ಅಲ್ಲ, ಮಹೇಂದ್ರ ಸಿಂಗ್ ಧೋನಿ ನನ್ನ ಪಾಲಿಗೆ ನಿಜಕ್ಕೂ ಆಪದ್ಭಾಂಧವರಾಗಿದ್ದರು. ಸಾಕಷ್ಟು ಬಾರಿ ತಂಡದಿಂದ ಹೊರಗುಳಿಯುವರಿಂದ ಧೋನಿ ನನನ್ನುರಕ್ಷಿಸಿದ್ದರು ಎಂದು ಟೀಂ  ಇಂಡಿಯಾದ ಭಾವಿ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ನಾಯಕತ್ವಕ್ಕೆ ಧೋನಿ ನಿವೃತ್ತಿ ಘೋಷಿಸಿರುವ ಹಿನ್ನಲೆಯಲ್ಲಿ ಬಿಸಿಸಿಐ ಟಿವಿ ನಡೆಸಿದ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೊಹ್ಲಿ, ತಮ್ಮ ಮತ್ತು ಧೋನಿ ನಡುವಿನ ಸಾಮರಸ್ಯದ ಕುರಿತಂತೆ ಮಾತನಾಡಿದ್ದಾರೆ. "ಧೋನಿ ಮತ್ತು  ನನ್ನ ನಡುವೆ ಅವಿನಾಭಾವ ಸಂಬಂಧವಿದ್ದು, ನಾನು ನನ್ನ ಅಂತಾರಾಷ್ಟ್ರೀಯ ವೃತ್ತಿಪರ ಕ್ರಿಕೆಟ್  ಜೀವನ ಆರಂಭಿಸಿದ್ದೇ ಧೋನಿ ಸಾರಥ್ಯದಲ್ಲಿ. ಹೀಗಾಗಿ ನನ್ನ ಏಳುಬೀಳುಗಳಲ್ಲಿ ಧೋನಿ ಮಹತ್ವದ ಪಾತ್ರವಹಿಸಿದ್ದಾರೆ. ಯುವ  ಕ್ರಿಕೆಟಿಗರಿಗೆ ಎಂತಹ ನಾಯಕ ಬೇಕು ಎಂದು ಕೇಳಿದರೆ, ಖಂಡಿತಾ ಧೋನಿ ಅವರನ್ನು ತೋರಿಸಬಹುದು. ನನ್ನ ವೃತ್ತಿಪರ ಕ್ರಿಕೆಟ್ ಆರಂಭದಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಅನುಭವಿಸಿದ್ದೆ. ಆಗ ನನ್ನ ಭುಜ ತಟ್ಟಿದ್ದ ಧೋನಿ  ಸಾಕಷ್ಟು ಸಲಹೆಗಳನ್ನು ನೀಡಿದ್ದರು".

"ಸಾಕಷ್ಟು ಬಾರಿ ನಾನು ತಂಡದಿಂದ ಹೊರಗುಳಿಯುವ ಸಂದರ್ಭಗಳು ಎದುರಾಗಿದ್ದವು. ಆದರೆ ಧೋನಿ ಅವರಿಂದಾಗಿ ನಾನು ತಂಡದಲ್ಲಿ ಉಳಿದುಕೊಳ್ಳುವಂತಾಯಿತು. ಧೋನಿ ಎಂದಾಕ್ಷಣ ನನ್ನ ತಲೆಗೆ ಬರುವುದೇ "ಕ್ಯಾಪ್ಟನ್" ಎಂದು, ನಿಜಕ್ಕೂ ಅವರೊಬ್ಬ ಶ್ರೇಷ್ಠ ನಾಯಕ. ನನ್ನ ಪಾಲಿಗೆ ಅವರೆಂದೆಂದಿಗೂ "ಕ್ಯಾಪ್ಟನ್" ಎಂದು ಹೇಳಿದ್ದಾರೆ.

ಇತ್ತೀಚೆಗಷ್ಟೇ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ನಾಯಕತ್ವಕ್ಕೆ ವಿದಾಯ ಹೇಳಿ, ತಂಡದಲ್ಲಿ ಓರ್ವ ಆಟಗಾರನಾಗಿ ಮುಂದುವರೆಯುವೆ ಎಂದು ಘೋಷಣೆ ಮಾಡಿದ್ದರು. ವಿರಾಟ್ ಕೊಹ್ಲಿ 2008ರಲ್ಲಿ ಶ್ರೀಲಂಕಾ ವಿರುದ್ಧದ  ಏಕದಿನ ಸರಣಿಯಲ್ಲಿ ಪದಾರ್ಪಣೆ ಮಾಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.