ಬರ್ತ್ ಡೇ ಬಾಯ್ ಧೋನಿಗೆ ಕ್ರಿಕೆಟಿಗರ ಅಭಿನಂದನೆಗಳ ಮಹಾಪೂರ!

ಭಾರತ ಕ್ರಿಕೆಟ್ ತಂಡದ ಅತ್ಯಂತ ಯಶಸ್ವೀ ನಾಯಕ ಎಂದು ಖ್ಯಾತಿ ಗಳಿಸಿರುವ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ 36ನೇ ವರ್ಷಕ್ಕೆ ಕಾಲಿಟ್ಟಿದ್ದು, ಧೋನಿ ಬರ್ತ್ ಡೇ ಹಿನ್ನಲೆಯಲ್ಲಿ ಖ್ಯಾತನಾಮ ಕ್ರಿಕೆಟಿಗರು ಶುಭಾಶಯಗಳ ಮಹಾಪೂರವನ್ನೇ ರವಾನಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಕಿಂಗ್ಸ್ ಟನ್: ಭಾರತ ಕ್ರಿಕೆಟ್ ತಂಡದ ಅತ್ಯಂತ ಯಶಸ್ವೀ ನಾಯಕ ಎಂದು ಖ್ಯಾತಿ ಗಳಿಸಿರುವ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ 36ನೇ ವರ್ಷಕ್ಕೆ ಕಾಲಿಟ್ಟಿದ್ದು, ಧೋನಿ ಬರ್ತ್ ಡೇ ಹಿನ್ನಲೆಯಲ್ಲಿ ಖ್ಯಾತನಾಮ ಕ್ರಿಕೆಟಿಗರು  ಶುಭಾಶಯಗಳ ಮಹಾಪೂರವನ್ನೇ ರವಾನಿಸಿದ್ದಾರೆ.

ಇನ್ನು ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಟೀಂ ಇಂಡಿಯಾ ಆಟಗಾರರು ಧೋನಿಗೆ ಉತ್ತಮ ಬರ್ತ್ ಡೇ ಗಿಫ್ಟ್ ನೀಡಿದ್ದು, ನಿನ್ನೆ ನಡೆದ ಅಂತಿಮ ಪಂದ್ಯದಲ್ಲಿ ವಿಂಡೀಸ್ ವಿರುದ್ಧ 8  ವಿಕೆಟ್ ಗಳ ಗೆಲುವು ಸಾಧಿಸುವ ಮೂಲಕ ಸರಣಿಯನ್ನು 3-1 ಅಂತರದಲ್ಲಿ ಜಯಿಸಿದ್ದಾರೆ. ಟೂರ್ನಿಯಲ್ಲಿ ಧೋನಿ ಒಟ್ಟು 154 ರನ್ ಸಿಡಿಸಿದ್ದು, ಇದು ಟೂರ್ನಿ 5ನೇ ಅತೀ ಹೆಚ್ಚು ವೈಯುಕ್ತಿಕ ಮೊತ್ತವಾಗಿದೆ.

ಜನುಮ ದಿನದ ಸಂಭ್ರಮದಲ್ಲಿರುವ ಮಹೇಂದ್ರ ಸಿಂಗ್ ಧೋನಿ ಅವರಿಗೆ ಕ್ರಿಕೆಟಿಗ ಯುವರಾಜ್ ಸಿಂಗ್ ವಿಶೇಷ ಸಂದೇಶ ರವಾನಿಸಿ ಶುಭ ಕೋರಿದ್ದಾರೆ. ಟ್ವಿಟರ್ ನಲ್ಲಿ ಸಂದೇಶ ಬರೆದಿರುವ ಯುವಿ ಮಿ.ಹೆಲಿಕಾಪ್ಟರ್ ಗೆ ಸದಾ  ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ. ಅಂತೆಯೇ ಮಾಜಿ ಕ್ರಿಕೆಟಿಗ ಮಹಮದ್ ಕೈಫ್, ಸಿಎಸಿ ಸದಸ್ಯ ವಿವಿಎಸ್ ಲಕ್ಷ್ಮಣ್, ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ಮಾಜಿ ಕ್ರಿಕೆಟಿಗ ಆಕಾಶ್ ಛೋಪ್ರಾ ಸೇರಿದಂತೆ ಹಲವು ಖ್ಯಾತನ  ಕ್ರಿಕೆಟಿಗರು ಮತ್ತು ಸಹಸ್ರ ಕ್ರಿಕೆಟ್ ಅಭಿಮಾನಿಗಳು ಧೋನಿ ಅವರಿಗೆ ಶುಭ ಕೋರಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com