

ಲಂಡನ್: ಪಾಕಿಸ್ತಾನದ ಮಾಜಿ ವೇಗಿ ಶೊಯೆಬ್ ಅಖ್ತರ್ ವೃತ್ತಿ ಜೀವನದಲ್ಲೇ ನಾನು ಕಂಡ ಅತ್ಯಂತ ಕಠಿಣ ಬೌಲರ್ ಎಂದು ಟೀಂ ಇಂಡಿಯಾ ಆಟಗಾರ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ.
ಸೋಮವಾರ ನಡೆದ ವಿರಾಟ್ ಕೊಹ್ಲಿ ಫೌಂಡೇಷನ್ ಸಂಸ್ಥೆಯ ಔತಣಕೂಟದಲ್ಲಿ ಮಾತನಾಡಿದ ಎಂಎಸ್ ಧೋನಿ ತಮ್ಮ 13 ವರ್ಷದ ವೃತ್ತಿ ಜೀವನದಲ್ಲಿ ತಾವು ಕಂಡ ಅತ್ಯಂತ ಕಠಿಣ ಬೌಲರ್ ಗಳಲ್ಲಿ ಪಾಕಿಸ್ತಾನದ ಮಾಜಿ ವೇಗಿ ಶೊಯೆಬ್ ಅಖ್ತರ್ ಗೆ ಮೊದಲ ಸ್ಥಾನ ನೀಡುವುದಾಗಿ ಹೇಳಿದ್ದಾರೆ.
"ನಾನು ವಿಶ್ವದ ಅನೇಕ ಬೌಲರ್ ಗಳನ್ನು ಎದುರಿಸಿದ್ದೇನೆ. ಪ್ರತಿಯೊಬ್ಬ ವೇಗಿಗಳೂ ಒಬ್ಬರಿಗಿಂತ ಒಬ್ಬರು ಭಿನ್ನರು. ಅವರನ್ನು ಎದುರಿಸಲು ನನ್ನದೇ ಆದ ತಂತ್ರವಿದೆ. ಆದರೂ ವೇಗದ ಬೌಲರ್ ಗಳನ್ನು ಎದುರಿಸುವುದು ಅತ್ಯಂತ ಕಠಿಣ. ಇದಾಗ್ಯೂ ಒಬ್ಬರನ್ನು ಆಯ್ಕೆ ಮಾಡಿ ಎಂದರೆ ನನ್ನ ಆಯ್ಕೆ ಖಂಡಿತಾ ಅಖ್ತರ್. ಅವರು ಅತ್ಯಂತ ವೇಗವಾಗಿ ದಾಳಿ ಮಾಡುತ್ತಿದ್ದರು. ಯಾರ್ಕರ್, ಬೌನ್ಸರ್ ಗಳನ್ನು ಎಸೆಯುತ್ತಿದ್ದರು. ಅವರ ವೇಗದ ದಾಳಿಗೆ ಉತ್ತರಿಸುವುದು ಸುಲಭದ ಕೆಲಸವಾಗಿರಲಿಲ್ಲ" ಎಂದು ಧೋನಿ ಹೇಳಿದ್ದಾರೆ