ಕೊಚ್ಚಿ: ಕ್ರಿಕೆಟ್ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಕ್ಯಾನ್ಸರ್ ಮಕ್ಕಳ ಕ್ಷೇಮಾಭಿವೃದ್ಧಿಗಾಗಿ ದುಡಿಯಲು ಮುಂದಾಗಿದ್ದಾರೆ.
ಇದಕ್ಕಾಗಿ ಖಾಸಗಿ ಸಂಸ್ಥೆಯಾದ ಆಸ್ಟರ್ ಡಿಎಂ ಫೌಂಡೇಷನ್ ನೊಂದಿಗೆ ಕೈ ಜೋಡಿಸಿರುವ ಸಚಿನ್ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ 18 ವರ್ಷದೊಳಗಿನ 50 ರೋಗಿಗಳ ಚಿಕಿತ್ಸೆಗೆ ಆರ್ಥಿಕ ನೆರವು ನೀಡಲಿದ್ದಾರೆ.
ಆಸ್ಟರ್ ಡಿಎಂ ಫೌಂಡೇಷನ್ ಕೊಚ್ಚಿ, ಕ್ಯಾಲಿಕಟ್ ಹಾಗೂ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇಲ್ಲಿನ ಕ್ಯಾನ್ಸರ್ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಫೌಂಡೇಷನ್ ಹೇಳಿದೆ.
ಮಕ್ಕಳ ಯೋಗಕ್ಷೇಮ ಕುರಿತಾಗಿ ಖಾಸಗಿ ಸಂಸ್ಥೆಯೊಂದಿಗೆರುವುದು ನನಗೆ ಖುಷಿ ನೀಡಿದೆ ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.