ಗಾಯಗೊಂಡ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ನಿಂದ ಔಟ್?

ಆಟದ ವೇಳೆ ಗಾಯಗೊಂಡಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 3 ನೇ ಟೆಸ್ಟ್ ಪಂದ್ಯಕ್ಕೆ ಲಭ್ಯವಿಲ್ಲ ಎಂದು ಹೇಳಲಾಗುತ್ತಿದೆ. ...
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ರಾಂಚಿ: ಆಟದ ವೇಳೆ ಗಾಯಗೊಂಡಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 3 ನೇ ಟೆಸ್ಟ್ ಪಂದ್ಯಕ್ಕೆ ಲಭ್ಯವಿಲ್ಲ ಎಂದು ಹೇಳಲಾಗುತ್ತಿದೆ.

ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ರಾಂಚಿಯ ಜಾರ್ಖಂಡ್ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆಯುತ್ತಿರುವ  ಟೆಸ್ಟ್ ಪಂದ್ಯದಲ್ಲಿ ಗಾಯಗೊಂಡಿದ್ದ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಂದ್ಯದಿಂದ ಹೊರ ನಡೆದಿದ್ದಾರೆ.

ವಿರಾಟ್ ಕೊಹ್ಲಿ ಬಲ ಭುಜಕ್ಕೆ ಪೆಟ್ಟಾಗಿದ್ದು, ವೈದ್ಯರು ವಿಶ್ರಾಂತಿಗೆ ಸಲಹೆ ನೀಡಿದ್ದಾರೆ. ಎಂ.ಆರ್.ಐ. ಸ್ಕ್ಯಾನ್ ಮಾಡಲಾಗಿದ್ದು, ರಿಪೋರ್ಟ್ ಕೈ ಸೇರಿದ ಬಳಿಕ, ಅಗತ್ಯವಾದರೆ ಸರ್ಜರಿ ಮಾಡುವ ಸಾಧ್ಯತೆ ಇದೆ.

ರವೀಂದ್ರ ಜಡೇಜ ಎಸೆದ 40 ನೇ ಓವರ್ ನ ಮೊದಲ ಎಸೆತವನ್ನು ಆಸೀಸ್ ಆಟಗಾರ ಪೀಟರ್ ಹ್ಯಾಂಡ್ಸ್ ಸ್ಕಾಂಬ್ ಲೆಗ್ ಸೈಡ್ ಗೆ ಬಾರಿಸಿದ್ದು, ಅದನ್ನು ತಡೆಯುವ ಧಾವಂತದಲ್ಲಿ ನೆಲಕ್ಕೆ ಬಿದ್ದ ಕೊಹ್ಲಿ ಬಲ ಭುಜಕ್ಕೆ ಪೆಟ್ಟಾಗಿತ್ತು..

ವಿರಾಟ್ ಕೊಹ್ಲಿಗೆ 7 -8 ದಿನಗಳ ಕಾಲ ವಿಶ್ರಾಂತಿ ಅಗತ್ಯವಿದ್ದು, ಶಸ್ತ್ರ ಚಿಕಿತ್ಸೆಗೆ ಒಳಗಾದಲ್ಲಿ ಹೆಚ್ಚು ದಿನ ವಿಶ್ರಾಂತಿ ಪಡೆಯಬೇಕಾಗುತ್ತದೆ. ಕೊಹ್ಲಿ ಪಂದ್ಯದಿಂದ ಔಟ್ ಆಗಿದ್ದು, ಅಜಿಂಕ್ಯಾ ರೆಹಾನೆ ತಂಡವನ್ನು ಮುನ್ನಡೆಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com