ಧರ್ಮಶಾಲಾ: ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಯುವ ಸ್ಪಿನ್ನರ್ ಕುಪ್ದೀಪ್ ನಾಯರ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದು ಚೊಚ್ಚಲ ಪಂದ್ಯದಲ್ಲೇ ಪ್ರಮುಖ ನಾಲ್ಕು ವಿಕೆಟ್ ಗಳನ್ನು ಕಬಳಿಸಿ ಸಾಧನೆ ಮಾಡಿದ್ದಾರೆ.
ಧರ್ಮಶಾಲಾದ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ ಟೆಸ್ಟ್ ಸರಣಿಯಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ ಪರ ಬೌಲಿಂಗ್ ಮಾಡಿದ ಕುಲ್ಧೀಪ್ ಯಾದವ್ 23 ಓವರ್ ಗಳನ್ನು ಎಸೆದಿದ್ದು 68 ರನ್ ನೀಡಿ ನಾಲ್ಕು ವಿಕೆಟ್ ಗಳನ್ನು ಪಡೆದಿದ್ದಾರೆ.
ಡೇವಿಡ್ ವಾರ್ನರ್ 56 ರನ್ ಗಳಿಸಿದ್ದಾಗ ಕುಲ್ದೀಪ್ ಅದ್ಭುತವಾಗಿ ಬೌಲಿಂಗ್ ಮಾಡಿ ಖೆಡ್ಡಾಗೆ ಬೀಳಿಸಿದರು. ಇದಾದ ಬಳಿಕ 8 ರನ್ ಗಳಿಸಿದ್ದ ಹ್ಯಾಂಡ್ಸ್ ಕೂಬ್ ಮತ್ತು ಗ್ಲೇನ್ ಮ್ಯಾಕ್ಸ್ ವೆಲ್ ರನ್ನು ಬೌಲ್ಡ್ ಮಾಡಿದರು. ಕೊನೆಯದಾಗಿ ಕನ್ನಿಮ್ಸ್ ರನ್ನು ಕಾಟನ್ ಬೌಲ್ಡ್ ಮಾಡುವ ಮೂಲಕ ನಾಲ್ಕನೇ ವಿಕೆಟ್ ಪಡೆದರು.