ರಾಜಿನಾಮೆ ಹಿಂಪಡೆದ ಐಸಿಸಿ ಮುಖ್ಯಸ್ಥ ಶಶಾಂಕ್ ಮನೋಹರ್

ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಮುಖ್ಯಸ್ಥ ಸ್ಥಾನಕ್ಕೆ ನೀಡಿದ್ದ ರಾಜಿನಾಮೆಯನ್ನು ಶಶಾಂಕ್ ಮನೋಹರ್ ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ...
ಶಶಾಂಕ್ ಮನೋಹರ್
ಶಶಾಂಕ್ ಮನೋಹರ್
ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಮುಖ್ಯಸ್ಥ ಸ್ಥಾನಕ್ಕೆ ನೀಡಿದ್ದ ರಾಜಿನಾಮೆಯನ್ನು ಶಶಾಂಕ್ ಮನೋಹರ್ ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ.
ಈ ವರ್ಷ ನಡೆಯಲಿರುವ ವಾರ್ಷಿಕ ಸಮ್ಮೇಳನದವರೆಗೆ ಮುಂದುವರೆಯುವಂತೆ ಐಸಿಸಿ ನಿರ್ದೇಶಕರು ಒಕ್ಕೊರಲ ಮನವಿ ಮಾಡಿದ್ದರಿಂದ ಶಶಾಂಕ್ ಮನೋಹರ್ ತಾತ್ಕಾಲಿಕವಾಗಿ ತಮ್ಮ ರಾಜಿನಾಮೆಯನ್ನು ಹಿಂಪಡೆದಿದ್ದಾರೆ. 
ಐಸಿಸಿಯ ಪದಾಧಿಕಾರಿಗಳು ನನ್ನ ಮೇಲಿಟ್ಟಿರುವ ನಂಬಿಕೆಯನ್ನು ಗೌರವಿಸುತ್ತೇನೆ. ನನ್ನ ರಾಜಿನಾಮೆ ನಿರ್ಧಾರ ಬದಲಾಗದಿದ್ದರೂ ಐಸಿಸಿ ವಾರ್ಷಿಕ ಸಭೆಯವರೆಗೆ ಮುಂದುವರಿಯುತ್ತೇನೆ ಎಂದು ಶಶಾಂಕ್ ಮನೋಹರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com