ಅಶ್ವಿನ್ ನೂತನ ವಿಶ್ವದಾಖಲೆ: ವರ್ಷದಲ್ಲಿ 79 ವಿಕೆಟ್ ಪಡೆದ ಸಾಧನೆ

ಟೀಂ ಇಂಡಿಯಾದ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ನೂತನ ವಿಶ್ವದಾಖಲೆಯೊಂದನ್ನು ನಿರ್ಮಿಸಿದ್ದಾರೆ...
ಆರ್ ಅಶ್ವಿನ್
ಆರ್ ಅಶ್ವಿನ್
ಟೀಂ ಇಂಡಿಯಾದ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ನೂತನ ವಿಶ್ವದಾಖಲೆಯೊಂದನ್ನು ನಿರ್ಮಿಸಿದ್ದಾರೆ. 
ಆಸ್ಟ್ರೇಲಿಯಾದ ಟೆಸ್ಟ್ ಸರಣಿಯಲ್ಲಿ ಅಶ್ವಿನ್ ಹೇಳಿಕೊಳ್ಳುವಂತ ಪ್ರದರ್ಶನ ನೀಡಿಲ್ಲವಾದರೂ ಒಂದು ಕ್ರಿಕೆಟ್ ವರ್ಷದಲ್ಲಿ 79 ವಿಕೆಟ್ ಗಳಿಸುವ ಮೂಲಕ ದಕ್ಷಿಣ ಆಫ್ರಿಕಾದ ಡೇಲ್ ಸ್ಟೇನ್ ಅವರ 78 ವಿಕೆಟ್ ಗಳ ಸಾಧನೆಯನ್ನು ಹಿಂದಿಕ್ಕಿದ್ದಾರೆ. 
ವೇಗಿ ಡೇಲ್ ಸ್ಟೇನ್ 2007-08ರಲ್ಲಿ 78 ವಿಕೆಟ್ ಪಡೆಯುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದರು. ಇವರ ನಂತರದಲ್ಲಿ ಮತ್ತೊಬ್ಬ ಭಾರತೀಯ ಎಂದರೇ ರವೀಂದ್ರ ಜಡೇಜಾ. 67 ವಿಕೆಟ್ ಕಬಳಿಸಿರುವ ಅವರು ಮೂರನೇ ಸ್ಥಾನದಲ್ಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com