ಕ್ರಿಕೆಟ್

ನಮ್ಮನ್ನು ಕೆಣಕಿದರೆ, ನಾವೂ ತಕ್ಕ ಪ್ರತ್ಯುತ್ತರ ನೀಡುತ್ತೇವೆ: ವಿರಾಟ್ ಕೊಹ್ಲಿ

ನಮ್ಮನ್ನು ಕೆಣಕಿದರೆ, ನಾವೂ ತಕ್ಕ ಪ್ರತ್ಯುತ್ತರ ನೀಡುತ್ತೇವೆ: ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
Published On :
ಧರ್ಮಶಾಲಾ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು 2-1 ಅಂತರದಲ್ಲಿ ಭಾರತ ಕೈವಶ ಮಾಡಿಕೊಂಡಿದ್ದು ಅತ್ಯುತ್ತಮ ಸರಣಿ ಜಯಗಳಲ್ಲಿ ಇದು ಒಂದು ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. 
ಧರ್ಮಶಾಲಾ ಕ್ರಿಕೆಟ್ ಮೈದಾನದಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ, ನಮ್ಮನ್ನು ಕೆಣಕಿದವರಿಗೆ ನಾವೂ ತಕ್ಕ ಪ್ರತ್ಯುತ್ತರ ನೀಡಲೇಬೇಕಿತ್ತು. ಅದೇ ರೀತಿ ನಮ್ಮ ಆಟಗಾರರು ತಕ್ಕು ತಿರುಗೇಟು ನೀಡಿದ್ದಾರೆ. ಇದಕ್ಕಾಗಿ ಸಹ ಆಟಗಾರರನ್ನು ಹೆಚ್ಚು ಪ್ರೇರೆಪಿಸಲಾಗಿತ್ತು ಎಂದರು.  ಇನ್ನು ನಾವು ಅಗ್ರಸ್ಥಾನದಲ್ಲಿ ಇರುತ್ತೇವೋ ಇಲ್ಲವೋ ಗೊತ್ತಿಲ್ಲ. ಆದರೆ ನಮಗೆ ತಿವಿದವರಿಗೆ ಮಾತ್ರ ತಕ್ಕ ಪ್ರತ್ಯುತ್ತರ ನೀಡಬೇಕು ಎಂದು ತೀರ್ಮಾನಿಸಲಾಗಿತ್ತು ಎಂದು ಹೇಳಿದ್ದಾರೆ. 
ಇನ್ನು ಕ್ರೀಡಾ ಸ್ಫೂರ್ತಿ ಮರೆತು ಆಸ್ಟ್ರೇಲಿಯನ್ ಆಟಗಾರರು ವಿನಾಃ ಕಾರಣ ಸ್ಲಡ್ಜಿಂಗ್ ಮಾಡಿದ್ದು ನಮ್ಮ ಗೆಳೆತನವನ್ನು ಉಳಿಸಿಕೊಂಡಿಲ್ಲ ಎಂದು ಹೇಳಿದರು. 
ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಕ್ರೀಡಾ ಸ್ಫೂರ್ತಿಯನ್ನು ಮರೆತು ಡಿಆರ್ಎಸ್ ಮನವಿಗಾಗಿ ಪೆಲಿವಿಯನ್ ನತ್ತ ನೋಡಿ ಸಲಹೆ ಪಡೆಯಲು ಯತ್ನಿಸಿದ್ದರು. ಈ ವೇಳೆ ಕೊಹ್ಲಿ ಪೆವಿಲಿಯನ್ ಗೆ ಹೋಗು ಎಂದು ಕಠಿಣವಾಗಿ ಹೇಳಿದ್ದರು. ಇದಾದ ಬಳಿಕ ಉಭಯ ತಂಡಗಳ ನಡುವೆ ಆರೋಪ ಪ್ರತ್ಯಾರೋಪಗಳು ಹೆಚ್ಚಾಯಿತು. 
ನನ್ನ ಬಗ್ಗೆ ಕೆಲವರು ಇನ್ನಿಲ್ಲದ್ದಂತೆ ಮಾತನಾಡುತ್ತಾರೆ. ಮನೆಯಲ್ಲಿ ಕುಳಿತು ನನ್ನ ವಿರುದ್ಧ ಬ್ಲಾಗ್ ಗಳನ್ನು ಬರೆದು ಅಥವಾ ಮೈಕ್ ಮುಂದೆ ಮಾತನಾಡುವುದು ಸುಲಭ. ಆದರೆ ಹೊರಗೆ ಬ್ಯಾಟ್ ಮತ್ತು ಬಾಲ್ ಜತೆ ಆಡುವುದು ಕಷ್ಟ ಎಂದು ಹೇಳಿದರು.
ಅಂತಾರಾಷ್ಟ್ರೀಯ ಟೆಸ್ಟ್ ರ್ಯಾಂಕಿಂಗ್ ನಲ್ಲಿ 7ನೇ ಸ್ಥಾನದಲ್ಲಿದ್ದ ತಂಡವನ್ನು ಅಗ್ರಸ್ಥಾನಕ್ಕೆ ತಂದಿರುವುದು ನಾಯಕನಾಗಿ ನನಗೆ ಹೆಮ್ಮೆಯ ವಿಷಯ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.