ತನ್ನ ಆಟಗಾರರನ್ನು ಐಪಿಎಲ್‌ನಿಂದ ದೂರವಿಡಲು ಆಸೀಸ್ ಹೊಸ ತಂತ್ರ

2018ರಿಂದ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಪಂದ್ಯಾವಳಿಯಲ್ಲಿ ಪಾಲ್ಗೊಳ್ಳದಿದ್ದರೆ ಐಪಿಎಲ್ ನಲ್ಲಿ ಸಿಗುವುದಕ್ಕಿಂತ ಹೆಚ್ಚಿನ ವೇತನ ನೀಡುವುದಾಗಿ ಕ್ರಿಕೆಟ್...
ಆಸ್ಟ್ರೇಲಿಯಾ
ಆಸ್ಟ್ರೇಲಿಯಾ
Updated on: 
ಸಿಡ್ನಿ: 2018ರಿಂದ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಪಂದ್ಯಾವಳಿಯಲ್ಲಿ ಪಾಲ್ಗೊಳ್ಳದಿದ್ದರೆ ಐಪಿಎಲ್ ನಲ್ಲಿ ಸಿಗುವುದಕ್ಕಿಂತ ಹೆಚ್ಚಿನ ವೇತನ ನೀಡುವುದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಆಟಗಾರರಿಗೆ ಹೇಳಿದೆ. 
ಐಪಿಎಲ್ ಪಂದ್ಯಾವಳಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯಲಿದ್ದು ಆಟಗಾರರು ಹೆಚ್ಚು ದಣಿಯಲಿದ್ದಾರೆ. ಜತೆಗೆ ಗಾಯಗೊಳ್ಳುವ ಸಾಧ್ಯತೆಗಳು ಸಹ ಹೆಚ್ಚಿರುತ್ತದೆ. ಹೀಗಾಗಿ ಐಪಿಎಲ್ ನಿಂದ ಹಿಂದೆ ಸರಿದು ಬಹುವರ್ಷಗಳ ಒಪ್ಪಂದಕ್ಕೆ ಸಹಿ ಹಾಕುವಂತೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಕೇಳಿಕೊಂಡಿದೆ. 
ಆಸ್ಟ್ರೇಲಿಯಾ ಆಟಗಾರರಾದ ಸ್ಟೀವ್ ಸ್ಮಿತ್, ವಾರ್ನರ್, ಸ್ಟಾರ್ಕ್, ಹೇಜಲ್ ವುಡ್ ಹಾಗೂ ಪ್ಯಾಟ್ ಕಮಿನ್ಸ್ ಐಪಿಎಲ್ ನಲ್ಲಿ ಆಡುತ್ತಿದ್ದಾರೆ. ಇವರ ಮುಂದೆ ಕ್ರಿಕೆಟ್ ಆಸ್ಟ್ರೇಲಿಯಾ ಈ ಪ್ರಸ್ತಾಪವನ್ನು ಮುಂದಿಟ್ಟಿದೆ. 
ಮೂಲಗಳ ಪ್ರಕಾರ, ಡೇವಿಡ್ ವಾರ್ನರ್ ಗೆ ಮೂರು ವರ್ಷದ ಅವಧಿಗೆ 2 ಮಿಲಿಯನ್ ಡಾಲರ್(12.88 ಕೋಟಿ) ನೀಡುವುದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ. ಆದರೆ ಡೇವಿಡ್ ವಾರ್ನರ್ ಮುಂದಿನ ಮೂರು ಐಪಿಎಲ್ ನಲ್ಲಿ ಅಂದಾಜು 10 ಮಿಲಿಯನ್ ಡಾಲರ್(64.43 ಕೋಟಿ) ಸಂಪಾದಿಸಲಿದ್ದಾರೆ ಎನ್ನಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com