ಗಂಡು ಮಗುವಿಗೆ ತಂದೆಯಾದ ಜಾಂಟಿ ರೋಡ್ಸ್

ಐಪಿಎಲ್ ಫೈನಲ್ ಪಂದ್ಯದ ದಿನದಂದೆ ಮುಂಬೈ ಇಂಡಿಯನ್ಸ್ ತಂಡದ ಫೀಲ್ಡಿಂಗ್ ಕೋಚ್ ಜಾಂಟಿ ರೋಡ್ಸ್ ಅವರ ಪತ್ನಿ ಮಿಲನೈ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ...
ಜಾಂಟಿ ರೋಡ್ಸ್ ಪತ್ನಿ ಮಗು
ಜಾಂಟಿ ರೋಡ್ಸ್ ಪತ್ನಿ ಮಗು
ಮುಂಬೈ: ಐಪಿಎಲ್ ಫೈನಲ್ ಪಂದ್ಯದ ದಿನದಂದೆ ಮುಂಬೈ ಇಂಡಿಯನ್ಸ್ ತಂಡದ ಫೀಲ್ಡಿಂಗ್ ಕೋಚ್ ಜಾಂಟಿ ರೋಡ್ಸ್ ಅವರ ಪತ್ನಿ ಮಿಲನೈ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. 
ದಕ್ಷಿಣ ಆಫ್ರಿಕಾದ ಮಾಜಿ ಆಟಗಾರರಾಗಿರುವ ಜಾಂಟಿ ರೋಡ್ಸ್ ಕಳೆದ ಎರಡು ತಿಂಗಳಿಂದ ಕುಟುಂಬ ಸಮೇತರಾಗಿ ಭಾರತದಲ್ಲಿ ವಾಸವಾಗಿದ್ದರು. ಹೈದರಾಬಾದ್ ನಲ್ಲಿ ಭಾನುವಾರ ಫೈನಲ್ ಪಂದ್ಯ ನಡೆಯುವ ಸಂದರ್ಭದಲ್ಲಿ ಮಗು ಹುಟ್ಟಿದೆ. ಮುಂಬೈನ ಸುಬರ್ ಬಸ್ ಆಸ್ಪತ್ರೆಯಲ್ಲಿ ಮಿಲನೈ ಮಗುವಿಗೆ ಜನ್ಮ ನೀಡಿದ್ದಾರೆ. 
ಒಂದೆಡೆ ಮಗು ಹುಟ್ಟಿದ ಖುಷಿ ಮತ್ತೊಂದೆಡೆ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ಚಾಂಪಿಯನ್ ಆಗಿದ್ದು ಸಂತಸ ದುಪ್ಪಟ್ಟಾಗಿದೆ ಎಂದು ಜಾಂಟಿ ರೋಡ್ಸ್ ಟ್ವೀಟ್ ಮಾಡಿದ್ದಾರೆ. 
ಇನ್ನು ಕಳೆದ ಎರಡು ವರ್ಷಗಳ ಹಿಂದೆ ಮುಂಬೈನಲ್ಲಿ ಜಾಂಟಿ ರೋಡ್ಸ್ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆ ಮಗುವಿಗೆ ಇಂಡಿಯಾ ಎಂದು ಹೆಸರಿಡಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com