ಕ್ರಿಕೆಟಿಗ ಯುವರಾಜ್ ಸಿಂಗ್ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ; ಪರ ವಕೀಲ

ಟೀಂ ಇಂಡಿಯಾ ಕ್ರಿಕೆಟಿಗ ಯುವರಾಜ್ ಸಿಂಗ್ ವಿರುದ್ಧ ಯಾವುದೇ ರೀತಿಯ ಪ್ರಕರಣಗಳು ದಾಖಲಾಗಿಲ್ಲ ಎಂದು ಯುವರಾಜ್ ಪರ ವಕೀಲ ಬುಧವಾರ ಹೇಳಿದ್ದಾರೆ...
ಟೀಂ ಇಂಡಿಯಾ ಕ್ರಿಕೆಟಿಗ ಯುವರಾಜ್ ಸಿಂಗ್
ಟೀಂ ಇಂಡಿಯಾ ಕ್ರಿಕೆಟಿಗ ಯುವರಾಜ್ ಸಿಂಗ್
ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ಯುವರಾಜ್ ಸಿಂಗ್ ವಿರುದ್ಧ ಯಾವುದೇ ರೀತಿಯ ಪ್ರಕರಣಗಳು ದಾಖಲಾಗಿಲ್ಲ ಎಂದು ಯುವರಾಜ್ ಪರ ವಕೀಲ ಬುಧವಾರ ಹೇಳಿದ್ದಾರೆ. 
ನಿನ್ನೆಯಷ್ಟೇ ಯುವರಾಜ್ ಸಿಂಗ್ ಸಹೋದರ ಜೋರಾವರ್ ಪತ್ನಿ ಹಾಗೂ ಹಿಂದಿ ಬಿಗ್ ಬಾಸ್ ಸೀಸನ್-10 ಸ್ಪರ್ಧಿ ಆಕಾಂಕ್ಷಾ ಶರ್ಮಾ ಅವರು ಯುವರಾಜ್ ಹಾಗೂ ಅವರ ತಾಯಿ ಶಬ್ನಂ ಸಿಂಗ್, ಜೋರಾವರ್ ಸಿಂಗ್ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆಂದು ಹೇಳಲಾಗುತ್ತಿತ್ತು. 
ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಯುವರಾಜ್ ಸಿಂಗ್ ಅವರು ಕುಟುಂಬ ವಕೀಲ ದಮಂಬಿರ್ ಸಿಂಗ್ ಸೊಬ್ತಿಯವರು, ಇಲ್ಲ ಸಲ್ಲದ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿದ್ದು, ಆಧಾರ ರಹಿತ ಆರೋಪಿಗಳ ವಿರುದ್ಧ ನನ್ನ ಕಕ್ಷಿದಾರ ಎಫ್ಐಆರ್ ದಾಖಲಿಸಿದ್ದಾರೆ. ಯುವರಾಜ್ ಸಿಂಗ್ ವಿರುದ್ಧ ಯಾವುದೇ ರೀತಿಯ ದೂರುಗಳು ದಾಖಲಾಗಿಲ್ಲ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com