ಇಂದೋರ್: ಆಸ್ಟ್ರೇಲಿಯಾ ಹಾಗೂ ಟೀಂ ಇಂಡಿಯಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಭಾರತ 5 ವಿಕೆಟ್ ಗಳಿಂದ ಭರ್ಜರಿ ಜಯ ಗಳಿಸಿದೆ.
ಇಂದೋರ್ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 6 ವಿಕೆಟ್ ನಷ್ಟಕ್ಕೆ 293 ರನ್ ಗಳಿಸಿತ್ತು. 294 ರನ್ ಗಳ ಗುರಿ ಬೆನ್ನಟ್ಟಿದ ಭಾರತ 5 ವಿಕೆಟ್ ನಷ್ಟಕ್ಕೆ 294 ರನ್ ಸಿಡಿಸಿ ಗೆಲುವಿನ ನಗೆ ಬೀರಿತು.
ಟೀಂ ಇಂಡಿಯಾ ಪರ ಅಜಿಂಕ್ಯ ರಹಾನೆ 70, ರೋಹಿತ್ ಶರ್ಮಾ 71, ವಿರಾಟ್ ಕೊಹ್ಲಿ 28, ಹಾರ್ದಿಕ್ ಪಾಂಡ್ಯ 78, ಕೇದಾರ್ ಜಾದವ್ 2, ಮನೀಶ್ ಪಾಂಡೆ ಅಜೇಯ 36 ರನ್ ಗಳಿಸಿದ್ದಾರೆ. ಆಸೀಸ್ ಪರ ಬೌಲಿಂಗ್ ನಲ್ಲಿ ಕನ್ನಿಮ್ಸ್ 2, ಸ್ಟೈನಿಸ್, ರಿಚರ್ಡ್ ಸನ್ ತಲಾ 1 ವಿಕೆಟ್ ಪಡೆದಿದ್ದಾರೆ.
ಆಸ್ಟ್ರೇಲಿಯಾ ಪರ ಡೇವಿಡ್ ವಾರ್ನರ್ 42, ಪಿಂಚ್ 124, ಸ್ಟೀವನ್ ಸ್ಮಿತ್ 63, ಮ್ಯಾಕ್ಸ್ ವೇಲ್ 5, ಹೆಡ್ 4, ಹ್ಯಾಂಡ್ಸ್ ಕ್ಯೂಬ್ 3, ಸ್ಟೈನಿಸ್ ಅಜೇಯ 24 ರನ್ ಗಳಿಸಿದ್ದಾರೆ.
ಭಾರತ ಪರ ಜಸ್ ಪ್ರೀತ್ ಬುಮ್ರಾ ಮತ್ತು ಕುಲ್ದೀಪ್ ಯಾದವ್ ತಲಾ 2 ವಿಕೆಟ್ ಹಾಗೂ ಚಹಾಲ್ ಮತ್ತು ಹಾರ್ದಿಕ್ ಪಾಂಡ್ಯ ತಲಾ 1 ವಿಕೆಟ್ ಪಡೆದಿದ್ದಾರೆ.
ಐದು ಏಕದಿನ ಪಂದ್ಯಗಳ ಪೈಕಿ ಭಾರತ ಸತತವಾಗಿ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿ ಕೈವಶ ಮಾಡಿಕೊಂಡಿದೆ.