ಕ್ರಿಕೆಟ್

ಫ್ಲೇಮಿಂಗ್‌‍ಗೆ ಬರ್ತ್ ಡೇ ಶುಭಾಶಯ ಹೇಳುವ ಭರದಲ್ಲಿ ಸಚಿನ್‍ಗೆ ಅಗೌರವ, ಕ್ರಿಕೆಟ್ ಆಸ್ಟ್ರೇಲಿಯಾ ವಿರುದ್ಧ ಟ್ವೀಟಿಗರ ಆಕ್ರೋಶ

ಫ್ಲೇಮಿಂಗ್‌‍ಗೆ ಬರ್ತ್ ಡೇ ಶುಭಾಶಯ ಹೇಳುವ ಭರದಲ್ಲಿ ಸಚಿನ್‍ಗೆ ಅಗೌರವ, ಕ್ರಿಕೆಟ್ ಆಸ್ಟ್ರೇಲಿಯಾ ವಿರುದ್ಧ ಟ್ವೀಟಿಗರ ಆಕ್ರೋಶ
ಸಚಿನ್ ತೆಂಡೂಲ್ಕರ್
Published On :
ನವದೆಹಲಿ: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರಿಗೆ ಜಗತ್ತಿನಾದ್ಯಂತ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇನ್ನು ಇಂದು ಸಚಿನ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಗಳು, ಕ್ರಿಕೆಟ್ ದಿಗ್ಗಜರು ಶುಭ ಹಾರೈಸುತ್ತಿದ್ದರೆ, ಇತ್ತ ಕ್ರಿಕೆಟ್ ಆಸ್ಟ್ರೇಲಿಯಾ ಮಾಡಿರುವ ಟ್ವೀಟ್ ವೊಂದು ಸಚಿನ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. 
ಸಚಿನ್ ತೆಂಡೂಲ್ಕರ್ ಹುಟ್ಟಿದ ದಿನವಾದ ಇಂದು ಆಸ್ಟ್ರೇಲಿಯಾದ ಬೌಲರ್ ಡೇಮಿಯನ್ ಫ್ಲೇಮಿಂಗ್ ರ ಹುಟ್ಟುಹಬ್ಬವೂ ಹೌದು. ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಟ್ವೀಟರ್ ಖಾತೆಯಲ್ಲಿ ಡೇಮಿಯನ್ ಅವರಿಗೆ ಶುಭಾಶಯ ಕೋರಿದ್ದು ಡೇಮಿಯನ್ ಬಾಲ್ ಗೆ ಸಚಿನ್ ಬೌಲ್ಡ್ ಆದ ವಿಡಿಯೋವನ್ನು ಪೋಸ್ಟ್ ಮಾಡಿದೆ. 
ಇದು ಸಚಿನ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಎಷ್ಟು ನಿಷೇಧಗಳಾದರೂ, ಆಸ್ಟ್ರೇಲಿಯಾ ಬದಲಾಗುವುದಿಲ್ಲ. 1998ರಲ್ಲಿ ಸಚಿನ್ ಆಸ್ಟ್ರೇಲಿಯನ್ನರ ಬೌಲಿಂಗನ್ನು ಧೂಳಿಪಟ ಮಾಡಿದ್ದರು. ನಿಮಗೆ ನಾಚಿಕೆಯಾಗಬೇಕು ಕ್ರಿಕೆಟ್ ಆಸ್ಟ್ರೇಲಿಯಾ...ಹೀಗೆ ಸಾಲು ಸಾಲು ಟ್ವೀಟ್ ಗಳ ಮೂಲಕ ಟ್ವೀಟರಿಗರು ಕ್ರಿಕೆಟ್ ಆಸ್ಟ್ರೇಲಿಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.