ವಿಶ್ವಕಪ್ ಸೋಲು ನನ್ನ ವೃತ್ತಿಜೀವನವನ್ನು ನಿರ್ಣಯಿಸುವುದಿಲ್ಲ: ಎಬಿಡಿ ವಿಲಿಯರ್ಸ್

ಐಸಿಸಿ ಏಕದಿನ ವಿಶ್ವಕಪ್ ಸೋಲು ನನ್ನ ವೃತ್ತಿಜೀವನವನ್ನು ವ್ಯಾಖ್ಯಾನಿಸುವುದಿಲ್ಲ ಎಂದು ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ ಮನ್ ಎಬಿಡಿ ವಿಲಿಯರ್ಸ್ ಹೇಳಿದ್ದಾರೆ...
ಎಬಿಡಿ ವಿಲಿಯರ್ಸ್
ಎಬಿಡಿ ವಿಲಿಯರ್ಸ್
Updated on: 
ಜೋಹಾನ್ ಬರ್ಗ್: ಐಸಿಸಿ ಏಕದಿನ ವಿಶ್ವಕಪ್ ಸೋಲು ನನ್ನ ವೃತ್ತಿಜೀವನವನ್ನು ವ್ಯಾಖ್ಯಾನಿಸುವುದಿಲ್ಲ ಎಂದು ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ ಮನ್ ಎಬಿಡಿ ವಿಲಿಯರ್ಸ್ ಹೇಳಿದ್ದಾರೆ. 
2019ರ ಏಕದಿನ ವಿಶ್ವಕಪ್ ಪಂದ್ಯಾವಳಿಗಾಗಿ ಸಾಕಷ್ಟು ಕಸರತ್ತು ನಡೆಸಿರುವ ಎಬಿಡಿ ವಿಲಿಯರ್ಸ್ ಅವರು 2017ರಲ್ಲಿ ಟೆಸ್ಟ್ ಪಂದ್ಯಗಳಿಂದ ದೂರ ಉಳಿದಿದ್ದ ಏಕದಿನ ಹಾಗೂ ಟಿ20 ಪಂದ್ಯಗಳಲ್ಲಿ ಹೆಚ್ಚಾಗಿ ಆಡಿದ್ದರು. 
ನಂತರ 2018ರಲ್ಲಿ ಕ್ರಿಕೆಟ್ ನ ಮೂರು ಮಾದರಿಗಳಲ್ಲೂ ಕಮ್ ಬ್ಯಾಕ್ ಮಾಡಿದ್ದ ಡಿವಿಲಿಯರ್ಸ್ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಟೆಸ್ಟ್ ಪಂದ್ಯಗಳ ಪೈಕಿ ಒಂದು ಶತಕ ಹಾಗೂ ನಾಲ್ಕು ಅರ್ಧ ಶತಕ ಸಿಡಿಸಿದ್ದರು. ಇನ್ನು ಆಫ್ರಿಕಾ ತಂಡ 3-1 ಅಂತರದಿಂದ ಟೆಸ್ಟ್ ಸರಣಿಯನ್ನು ಕೈವಶ ಮಾಡಿಕೊಂಡಿತ್ತು. 
ಇನ್ನು ವಿಶ್ವಕಪ್ ಗೆದ್ದರೆ ಅದು ನಮ್ಮಗೆ ಮತ್ತಷ್ಟು ಬಲ ನೀಡುತ್ತದೆ ಹೊರತು ನನ್ನ ವೃತ್ತಿಜೀವನವನ್ನು ವ್ಯಾಖ್ಯಾನಿಸುವುದಿಲ್ಲ. ವಿಶ್ವಕಪ್ ಪಂದ್ಯಾವಳಿಯನ್ನು ಒಂದು ಆಟದಂತೆ ನೋಡುತ್ತೇನೆ. ಆದರೆ ಅದೇ ನನ್ನ ಜೀವನದ ಅಂತಿಮ ಕನಸು ಎಂದು ಹೇಳುವುದಿಲ್ಲ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com