ಮೂರನೇ ಟೆಸ್ಟ್: ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ, ಚೊಚ್ಚಲ ಟೆಸ್ಟ್ ಕ್ಯಾಪ್ ತೊಟ್ಟ ಪಂತ್

ಭಾರತ-ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಶನಿವಾರ ಪ್ರಾರಂಬವಾಗಿದ್ದು ಇಂಗ್ಲೆಂಡ್ ನಾಯಕ ಜೋ ರೂಟ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ರಿಷಭ್ ಪಂತ್
ರಿಷಭ್ ಪಂತ್
Updated on
ನಾಟಿಂಗ್‌ಹ್ಯಾಮ್: ಭಾರತ-ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಶನಿವಾರ ಪ್ರಾರಂಬವಾಗಿದ್ದು ಇಂಗ್ಲೆಂಡ್ ನಾಯಕ  ಜೋ ರೂಟ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಇನ್ನು ಭಾರತದ ಉದಯೋನ್ಮುಖ ಆಟಗಾರ  ರಿಷಭ್ ಪಂತ್ ಇದೇ ಮೊದಲ ಬಾರಿಗೆ ಟೆಸ್ಟ್ ಪಂದ್ಯವನ್ನಾಡಲಿದ್ದಾರೆ. ಯುವ ವಿಕೆಟ್-ಕೀಪರ್ ಬ್ಯಾಟ್ಸ್ ಮನ್ ಪಂತ್ ತಾವು ಪ್ರಥಮ ಬಾರಿಗೆ ಟೆಸ್ಟ್ ಕ್ಯಾಪ್ ಧರಿಸುತ್ತಿದ್ದು ಟೆಸ್ಟ್ ಕ್ಯಾಪ್ ಧರಿಸಿದ ಭಾರತದ 291ನೇ ಆಟಗಾರ ಪಂತ್ ಆಗಿದ್ದಾರೆ.
ಎರಡು ಟೆಸ್ಟ್ ಗಳಲ್ಲಿ ಕಳಪೆ ಪ್ರದರ್ಶನ ನಿಡಿದ್ದ ದಿನೇಶ್ ಕಾರ್ತಿಕ್ ಅವರ ಬದಲಿಗೆ ರಿಷಭ್ ಪಂತ್ ತಂಡಕ್ಕೆ ಆಗಮಿಸಿದ್ದಾರೆ.
ಇನ್ನು ಕುಲದೀಪ್ ಯಾದವ್, ಮುರಳಿ ವಿಜಯ್ ಬದಲಿಗೆ ಜಸ್ಪ್ರಿಟ್ ಬುಮ್ರಾ ಮತ್ತು ಶಿಖರ್ ಧವನ್  ಅವರನ್ನು ತಂಡದಲ್ಲೆ ಸೇರಿಸಿಕೊಳ್ಳಲಾಗಿದೆ.
ಅತ್ತ ಕಡೆ ಇಂಗ್ಲೆಂಡ್ ತಂಡದಲ್ಲಿ ಏಕಮಾತ್ರ ಬದಲಾವಣೆ ಮಾಡಿದ್ದು ಸ್ಯಾಮ್ ಕ್ಯುರನ್ ಸ್ಥಾನದಲ್ಲಿ ಆಲ್-ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು ಸೇರಿಸಿಕೊಳ್ಳಲಾಗಿದೆ.
ಕಳೆದ ಎರಡು ಪಂದ್ಯಗಳಲ್ಲಿ ಸೋಲನ್ನಪ್ಪಿದ್ದ ಭಾರತಕ್ಕೆ ಸರಣಿ ಗೆಲುವಿಗೆ ಇನ್ನುಳಿದ ಎಲ್ಲಾ ಪಂದ್ಯ ಗೆಲ್ಲುವುದು ಅನಿವಾರ್ಯವಾಗಿದೆ. .

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com