ಮೊದಲ ಟೆಸ್ಟ್: ಆಸ್ಟ್ರೇಲಿಯಾ 191/7, ಆಸ್ಟ್ರೇಲಿಯಾಗೆ 59 ರನ್ ಹಿನ್ನಡೆ

ಆಸ್ಟ್ರೇಲಿಯಾದ ಅಡಿಲೇಡ್ ನಲ್ಲಿ ನಡೆಯುತ್ತಿರುವ ಪ್ರವಾಸಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ನ ಎರಡನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 88 ಓವರ್‌ಗಳಲ್ಲಿ 7....
ಮೊದಲಟೆಸ್ಟ್: ಆಸ್ಟ್ರೇಲಿಯಾ 191/7, ಆಸ್ಟ್ರೇಲಿಯಾಗೆ 59 ರನ್ ಹಿನ್ನಡೆ
ಮೊದಲಟೆಸ್ಟ್: ಆಸ್ಟ್ರೇಲಿಯಾ 191/7, ಆಸ್ಟ್ರೇಲಿಯಾಗೆ 59 ರನ್ ಹಿನ್ನಡೆ
Updated on: 
ಅಡಿಲೇಡ್: ಆಸ್ಟ್ರೇಲಿಯಾದ ಅಡಿಲೇಡ್ ನಲ್ಲಿ ನಡೆಯುತ್ತಿರುವ ಪ್ರವಾಸಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ನ ಎರಡನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 88 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ  191 ರನ್ ಗಳಿಸಿದೆ. ಈ ಮೂಲಕ ಅಸೀಸ್ ಪಡೆ ಮೊದಲ ಇನ್ನಿಂಗ್ಸ್ ನಲ್ಲಿ 59ರನ್ ಗಳ ಹಿನ್ನಡೆ ಅನುಭವಿಸಿದೆ.
ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ (61) ಹಾಗೂ ಮಿಚೆಲ್ ಸ್ಟಾರ್ಕ್ (8) ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. 
ಭಾರತ ಮೊದಲ ದಿನದಾಟದಲ್ಲಿ 87.5ರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 250 ರನ್ ಗಳಿಸಿತ್ತು. ಇಂದಿನ ಆಟದಲ್ಲಿ ಭಾರತದ ಪರ ಮಹಮದ್ ಶಮಿ  ಯಾವುದೇ ರನ್ ಗಳಿಸದೆ ಔಟಾಗುವ ಮೂಲಕ ಭಾರತದ ಮೊದಲ ಇನ್ನಿಂಗ್ಸ್ 250 ಕ್ಕೆ ಮುಕ್ತಾಯ ಕಂಡಿದೆ.
ಆಸ್ತ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್ ಪ್ರಾರಂಭಿಸುವ ಮುನ್ನ ಪ್ರಾರಂಭಿಕ ಆಟಗಾರ ಮಾರ್ಕಸ್ ಶೂನ್ಯಕ್ಕೆ ಔಟಾಗಿದ್ದಾರೆ. ಇವರು ಇಶಾಂತ್ ಶರ್ಮಾ ಅವರಿಗೆ ತಮ್ಮ ಬಿಕೆಟ್ ಒಪ್ಪಿಸಿದ್ದರು.
ಇನ್ನು ಭಾರತದ ಬೌಲರ್ ಗಳಾದ ರವಿಶಂಕರ್ ಅಶ್ವಿನ್, ಇಶಾಂತ್ ಶರ್ಮಾ, ಬೂಮ್ರಾ ಕ್ರಮವಾಗಿ 3, 2 ಮತ್ತು 2 ವಿಕೆಟ್ ಪಡೆದಿದ್ದಾರೆ.
ಆಸ್ಟ್ರೇಲಿಯಾ ಪರ ಹ್ಯಾರೀಸ್ (26), ಉಸ್ಮಾನ್ ಖ್ವಾಜಾ (28), ಶಾನ್ ಮಾರ್ಷ್ (2, ಹ್ಯಾಂಡ್ಸ್ ಕಾಂಬ್ (34), ಟಿಮ್ ಪೈನೆ (5), ಕೆವಿನ್ಸ್ (10) ರನ್ ಗಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com